ಸುಮಾರು 45 ಜನರ ಸಾವಿಗೆ ಕಾರಣವಾದ ಅಹ್ಮದಾಬಾದ್ ಸರಣಿ ಬಾಂಬ್ ಸ್ಫೋಟದ ಬೆನ್ನಲ್ಲೇ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಬೇಡಿಕೆಯ ನಡುವೆಯೂ, ಪೋಟಾ ಕಾಯಿದೆಯನ್ನು ಪುನರೂರ್ಜಿತಗೊಳಿಸಲು ಕಾಂಗ್ರೆಸ್ ಪಕ್ಷವು ನಿರಾಕರಿಸಿದೆ.
ಉಗ್ರಗಾಮಿ ದಾಳಿಯನ್ನು ತಡೆಗಟ್ಟಲು ಪೋಟಾಗೆ ಯಾವಾಗ ಸಾಧ್ಯವಾಗಿತ್ತು? ಪೋಟಾ ಕಾಯಿದೆಯ ಬಿಜೆಪಿ ಆಗ್ರಹವು ನಿಜಕ್ಕೂ ಹಾಸ್ಯಾಸ್ಪದ ಎಂಬುದಾಗಿ ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ತಿಳಿಸಿದ್ದಾರೆ.
ಪೋಟಾ ಕಾಯಿದೆಯು ಅಲ್ಪಸಂಖ್ಯಾತ ಸಮುದಾಯದ ಸದಸ್ಯರನ್ನು ಗುರಿಯಾಗಿಸಿದೆ ಎಂದು ಆರೋಪಿಸುವ ಮೂಲಕ ಪೋಟಾ 2004ರಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರವು ಪೋಟಾ ಕಾಯಿದೆಯನ್ನು ರದ್ದು ಮಾಡಿತ್ತು.
ಭಯೋತ್ಪಾದನೆಯನ್ನು ನಿಗ್ರಹಗೊಳಿಸಲು ಅಮೆರಿಕ ಮೂಲದ ರಾಷ್ಟ್ರೀಯ ಕೇಂದ್ರದೊಂದಿಗೆ ಫೆಡರಲ್ ಸಂಸ್ಥೆಯನ್ನು ಸ್ಥಾಪಿಸಲು ಕಾಂಗ್ರೆಸ್ ಚಿಂತಿಸುತ್ತಿದೆ ಎಂದು ತಿವಾರಿ ಸೂಚಿಸಿದರು.
ಈ ನಡುವೆ, ಪೋಟಾ ಕಾಯಿದೆಯನ್ನು ರದ್ದುಗೊಳಿಸಿದ ನಂತರ ಸರಕಾರದ ಭಯೋತ್ಪಾದನಾ ವಿರೋಧಿ ಕಾನೂನು ಚೌಕಟ್ಟು ಮಂದಗೊಂಡಿದೆ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಆರೋಪಿಸಿದ್ದಾರೆ.
|