ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೇರಳದಲ್ಲಿ ಬಾಂಬ್ ಬೆದರಿಕೆ  Search similar articles
ತಿರುವನಂತಪುರಂ: ಕೇರಳದಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆಯ ಕರೆಯೊಂದು ರಾಜ್ಯಾದ್ಯಂತ ಆತಂಕದ ಅಲೆ ಸೃಷ್ಟಿಸಿ ಎಲ್ಲೆಡೆ ಬಿಗಿ ಬಂದೋಬಸ್ತಿಗೆ ಕಾರಣವಾಗಿದೆ.

ಕರ್ನಾಟಕದ ಡಿಜಿಪಿ ಉಗ್ರರ ದಾಳಿಯ ಬಗ್ಗೆ ನಮಗೆ ಮಾಹಿತಿ ನೀಡಿದರು, ಪತ್ರಕರ್ತರೊಬ್ಬರಿಗೂ ಈ ಬಗ್ಗೆ ಎರಡು ಫೋನ್ ಕರೆಗಳು ಬಂದಿದ್ದವು ಎಂದು ಕೇರಳ ಪೊಲೀಸ್‌ನ ಮುಖ್ಯಸ್ಥ ರಾಮನ್ ಶ್ರೀವಾಸ್ತವ ತಿಳಿಸಿದ್ದಾರೆ. ನಾವು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಂಪೂರ್ಣವಾಗಿ ಸಿದ್ದರಾಗಿದ್ದು,ರಾಜ್ಯದ ಭದ್ರತೆಯ ಬಗ್ಗೆ ಚರ್ಚಿಸಲು ಉನ್ನತ ಮಟ್ಟದ ಸಭೆಯೊಂದನ್ನು ಕರೆಯಲಾಗಿದೆ ಎಂದವರು ಹೇಳಿದ್ದಾರೆ.

+091118809 ನಂಬರಿನಿಂದ ಪತ್ರಕರ್ತರೊಬ್ಬರಿಗೆ ಬಂದ ಕರೆಯಲ್ಲಿ "ಬೆಂಗಳೂರು ಹೋ ಗಯಾ, ಗುಜಾರಾತ್ ಹೋ ಗಯಾ, ಟುಡೆ ಸಾಥ್ ಬಜೆ
ಕೇರಳ ಮೆ ಬ್ಲಾಸ್ಟ್ ಹೊ ಜಾಯೇಗಾ" ("ಬೆಂಗಳೂರಲ್ಲಾಯಿತು, ಗುಜಾರಾತ್‌ನಲ್ಲಾಯಿತು, ಇವತ್ತು ಸಂಜೆ ಏಳು ಗಂಟೆಗೆ ಕೇರಳದಲ್ಲಿ ಬಾಂಬ್ ಸ್ಫೋಟಿಸಲಿದೆ") ಎಂದು ಹೇಳಿದ ಆತ ತಾನು ಮುಜಾಹಿದ್ದೀನ್ ಎಂದು ಹೇಳಿಕೊಂಡಿದ್ದಾನೆ.

ಮುಖ್ಯ ವ್ಯಾಪಾರಿ ಮಳಿಗೆಗಳು, ಐಟಿ ಪಾರ್ಕ್‌ಗಳು, ಪೂಜಾ ಸ್ಥಳಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು ಈ ಸ್ಥಳಗಳಲ್ಲಿನ ಚಟುವಟಿಕೆಗಳನ್ನು ಪೊಲೀಸ್‌ ಪಡೆ ಮತ್ತು ಗುಪ್ತಚರರು ಹದ್ದಿನ ಕಣ್ಣುಗಳಿಂದ ಗಮನಿಸಲಿದ್ದಾರೆ ಎಂದು ಶ್ರೀವಾಸ್ತವ ತಿಳಿಸಿದ್ದಾರೆ.

ಇದೇ ವೇಳೆ ಯಾವುದೇ ಭೀತಿ ಪಡುವ ಅವಶ್ಯಕತೆ ಇಲ್ಲ ಎಂದು ಕೇರಳ ಗೃಹಸಚಿವ ಕೊಡಿಯೇರಿ ಬಾಲಕೃಷ್ಣನ್ ಅವರು ಹೇಳಿದ್ದಾರೆ. ಜತೆಗೆ ಕರ್ನಾಟಕದೊಂದಿಗೆ ಸಂಪರ್ಕದಲ್ಲಿರುವುದಾಗಿಯೂ ಅವರು ತಿಳಿಸಿದ್ದು, ವದಂತಿಗಳನ್ನು ಹರಿಬಿಡದಂತೆ ಜನತೆಗೆ ಮನವಿ ಮಾಡಿದ್ದಾರೆ.
ಮತ್ತಷ್ಟು
'ಪೋಟಾ ' ಪುನರೂರ್ಜಿತಕ್ಕೆ ಕಾಂಗ್ರೆಸ್ ನಕಾರ
ಅಹ್ಮದಾಬಾದ್, ಸೂರತ್‌ನಲ್ಲಿ ಜೀವಂತ ಬಾಂಬ್
ಅಹ್ಮದಾಬಾದ್ ಸ್ಫೋಟ: ಪೊಲೀಸರಿಂದ ಫ್ಲಾಟ್ ವಶ
ಬೆಂಗಳೂರು ಅಹ್ಮದಾಬಾದ್ ಸ್ಫೋಟದಲ್ಲಿ ಸಾಮ್ಯತೆ
ದೇಶದ ವಿರುದ್ಧದ ಯುದ್ಧ: ಮೋದಿ
ಅಹ್ಮದಾಬಾದ್ ಸ್ಫೋಟ: 45ಕ್ಕೇರಿದ ಸಾವಿನ ಸಂಖ್ಯೆ