ಅಹಮದಾಬಾದಿನಲ್ಲಿ 49 ಮಂದಿಯನ್ನು ಬಲಿತೆಗೆದು ಕೊಂಡಿರುವ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಆರೋಪದಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆ 'ಆಹ್ಲೆ ಹದೀಜ್'ನ ಕಾರ್ಯಕರ್ತನೊಬ್ಬನನ್ನು ಬಂಧಿಸಲಾಗಿದೆ.
ಈ ಮಧ್ಯೆ, ಅಹ್ಮಾದಾಬಾದಿನಲ್ಲಿ ಜೀವಂತ ಬಾಂಬೊಂದನ್ನು ನಿಷ್ಟ್ರಿಯಗೊಳಿಸಲಾಗಿದೆ. ಸೂರತ್‌ನಲ್ಲಿಯೂ ಮೂರು ಬಾಂಬ್ ಪತ್ತೆಯಾಗಿದೆ. ಬಾಂಬ್ ಸ್ಫೋಟದಲ್ಲಿ ಸಾವಿಗೀಡಾದವರ ಸಂಖ್ಯೆ 45ರಿಂದ 49ಕ್ಕೆ ಏರಿದ್ದು ಅಹ್ಮದಾಬಾದ್ ಇನ್ನಷ್ಟು ಸೂಕ್ಷ್ಮವಾಗಿದೆ,
2002ರ ಗೋದ್ರಾ ಹಿಂಸಾಚಾರದಲ್ಲಿ ಪ್ರಮುಖ ಆರೋಪಿಯಾಗಿದ್ದ ಈ ವ್ಯಕ್ತಿಯನ್ನು ಅಬ್ದುಲ್ ಹಲೀಂ ಎಂದು ಗುರುತಿಸಲಾಗಿದ್ದು, ಕೋಮು ಸೂಕ್ಷ್ಮ ದಾನಿ ಲಿಂದಾ ಪ್ರದೇಶದಲ್ಲಿ ಬಂಧಿಸಲಾಗಿದೆ. ಘಟನೆ ನಡೆದಂದಿನಿಂದ ಈತನು ಪರಾರಿಯಾಗಿದ್ದ.
ಆಹ್ಲೆ ಹದೀಸ್ ಎಂದರೇನು? ಆಹ್ಲೆ ಹಜೀದ್ ಎಂಬ ಉಗ್ರಗಾಮಿ ಸಮೂಹವು ಸಂಪ್ರದಾಯವಾದಿ ಉಗ್ರಗಾಮಿ ಗುಂಪಾಗಿದ್ದು, ಇಸ್ಲಾಮ್ ಪಂಗಡದ ನಿಷ್ಠೆಗೆ ಬದ್ಧವಾಗಿದೆ. ಪಾಕಿಸ್ತಾನದಲ್ಲಿ ಲಷ್ಕರ್ ಇ ತೊಯಿಬಾ ಉಗ್ರಗಾಮಿ ಸಮೂಹದಿಂದ ಆಹ್ಲೆ ಹದೀಸ್ ಸಂಘಟಿಸಲ್ಪಟ್ಟಿದ್ದು, ಭಾರತದಲ್ಲಿನ ವಿವಿಧ ದಾಳಿಗಳ ಹಿಂದೆ ಇದರ ಕೈವಾಡವಿದೆ ಎಂಬುದಾಗಿ ತಿಳಿದುಬಂದಿದೆ.
ಈ ಸಮೂಹದ ಅನೇಕ ಸದಸ್ಯರು ಸಿಮಿ ಸಂಘಟನೆಯ ಭಾಗವಾಗಿದ್ದು, ಅನೇಕ ಆಹ್ಲೆ ಹದೀಸ್ ಕಾರ್ಯಕರ್ತರು ಭಯೋತ್ಪಾದಕ ಕೃತ್ಯದ ಆರೋಪವನ್ನು ಹೊಂದಿದ್ದಾರೆ.
|