ಅಹ್ಮಾದಾಬಾದಿನಲ್ಲಿ ಸುಮಾರು 49 ಜನರ ಸಾವಿಗೆ ಕಾರಣವಾದ ರಕ್ಷಣಾ ಅಚಾತುರ್ಯದ ನೈತಿಕ ಹೊಣೆಯನ್ನು ಮುಖ್ಯಮಂತ್ರಿ ನರೇಂದ್ರ ಮೋದಿ ಹೊತ್ತುಕೊಳ್ಳುವ ಅಗತ್ಯವಿದೆ ಎಂದು ಹೇಳುವ ಮೂಲಕ ಗುಜರಾತಿನ ವಿರೋಧ ಪಕ್ಷವು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದೆ.
"ತನ್ನ ರಾಜ್ಯದಲ್ಲಿ ಎಲ್ಲವೂ ಸರಿಯಾಗಿದ್ದು, ಭಯೋತ್ಪಾದನೆಯ ವಿರುದ್ಧ ಹೋರಾಡಲು ಸೂಕ್ತ ರೀತಿಯ ಭದ್ರತಾ ವ್ಯವಸ್ಥೆಯಿದೆ ಎಂಬುದಾಗಿ ಮೋದಿ ಹೇಳಿಕೊಳ್ಳುತ್ತಿದ್ದರು. ಮೋದಿಯ ಈ ಘೋಷಣೆಯ ಹೊರತಾಗಿಯೂ ಅಹ್ಮದಾಬಾದಿನಲ್ಲಿ 17 ಸರಣಿ ಬಾಂಬ್ ಸ್ಫೋಟಗೊಂಡಿದೆ. ಈ ರಕ್ಷಣಾ ಅವನತಿಗೆ ಮೋದಿ ಅವರೇ ನೈತಿಕ ಹೊಣೆಯಾಗಿದ್ದಾರೆ" ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಗುಜರಾತ್ ಉಸ್ತುವಾರಿ ಹೊಂದಿರುವ ರಾಜೀವ್ ಶುಕ್ಲಾ ತಿಳಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್, 2006ರ ಸ್ಥಳೀಯ ಟ್ರೈನ್ ಸ್ಫೋಟದ ನೈತಿಕ ಹೊಣೆಯನ್ನು ಹೊತ್ತಿದ್ದರು. ಅಸ್ಪಷ್ಟ ತನಿಖಾ ವರದಿ ಮತ್ತು ಎಚ್ಚರಿಕೆಯನ್ನು ನೀಡುವ ಮೂಲಕ ಮೋದಿ ಯಾಕೆ ಕೇಂದ್ರವನ್ನು ಟೀಕಿಸುತ್ತಿದ್ದಾರೆ? ಗುಪ್ತಚರ ಎಚ್ಚರಿಕೆಗಳು ನಿಖರ ದಿನಾಂಕ, ಸಮಯ ಮತ್ತು ದಾಳಿಯ ಸ್ಥಳಗಳನ್ನು ಸೂಚಿಸಲಾಗುವುದಿಲ್ಲ" ಎಂದು ಶುಕ್ಲಾ ಸ್ಪಷ್ಟಪಡಿಸಿದ್ದಾರೆ.
ಭಾರತದ ಯಾವುದೇ ಪ್ರದೇಶದಲ್ಲಾದರೂ ಬಾಂಬ್ ದಾಳಿ ನಡೆದರೆ ಉಳಿದ ಎಲ್ಲಾ ಮಹಾನಗರಗಳು ಮುನ್ನೆಚ್ಚರಿಕೆ ಮತ್ತು ಭದ್ರತೆಯನ್ನು ಕಾಯ್ದುಕೊಳ್ಳಬೇಕು ಎಂಬುದು ಸಾಮಾನ್ಯ ಜ್ಞಾನವಾಗಿದೆ. ಇತರರನ್ನು ದೂಷಿಸುವ ಬದಲು ರಾಜ್ಯವು ರಕ್ಷಣಾ ವ್ಯವಸ್ಥೆಯನ್ನು ಬಿಗಿಗೊಳಿಸಲಿ ಎಂದು ಅವರು ಹೇಳಿದ್ದಾರೆ.
|