ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರಕಾರದ ಕಾರ್ಯಸೂಚಿಯಲ್ಲಿ ಭಯೋತ್ಪಾದನೆ ನಿಗ್ರಹ  Search similar articles
ಮುಂದಿನ ತಿಂಗಳಲ್ಲಿ ಭಾರತದಾದ್ಯಂತ ಹೆಚ್ಚು ದಾಳಿಗಳನ್ನು ನಡೆಸಲು ಉಗ್ರಗಾಮಿ ಗುಂಪುಗಳು ಯೋಜನೆ ರೂಪಿಸಿವೆ ಎಂಬುದಾಗಿ ಗುಪ್ತಚರ ಇಲಾಖೆಯು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ, ಚುನಾವಣಾ ಸಂಬಂಧಿ ಯೋಜನೆ ಮತ್ತು ಆರ್ಥಿಕ ಸುಧಾರಣೆಯೊಂದಿಗೆ, ಭಯೋತ್ಪಾದನೆಯೂ ಸಹ ಮನಮೋಹನ್ ಸಿಂಗ್ ಸರಕಾರದ ಪ್ರಮುಖ ಕಾರ್ಯಸೂಚಿಯಾಗಿ ಹೊರಹೊಮ್ಮಿದೆ.

ಅಣು ಒಪ್ಪಂದದ ಕುರಿತಂತೆ ಎಡಪಕ್ಷಗಳ ಬೆಂಬಲ ಹಿಂತೆಗೆತದ ನಂತರ ಹಿನ್ನಡೆಯಲ್ಲಿದೆ ಎಂದು ಹೇಳಬಹುದಾದ ಆಡಳಿತ ಸಂಬಂಧಿ ವಿವಾದಗಳತ್ತ ಹೆಚ್ಚು ಗಮನ ಹರಿಸಿರುವ ಕೇಂದ್ರವು, ಬೆಂಗಳೂರು ಮತ್ತು ಅಹಮದಾಬಾದಿನಲ್ಲಿ ನಡೆದಿರುವ ಸರಣಿ ಸ್ಫೋಟದ ನಂತರ, ಭಯೋತ್ಪಾದನೆಯನ್ನು ತನ್ನ ವಿಶ್ವಾಸಮತ ಯಾಚನೆಯ ನಂತರದ ಅಜೆಂಡಾವಾಗಿ ವ್ಯವಸ್ಥೆಗೊಳಿಸುವ ಚಿಂತನೆ ನಡೆಸಿದೆ ಎನ್ನಲಾಗಿದೆ.

ಆಂತರಿಕ ಭದ್ರತಾ ಪರಿಸ್ಥಿತಿಯನ್ನು ವಿಮರ್ಷಿಸಲು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಗೃಹ ಸಚಿವ ಶಿವರಾಜ್ ಪಾಟೀಲ್ ಉನ್ನತಮಟ್ಟದ ಸಭೆ ನಡೆಸುತ್ತಿರುವುದರೊಂದಿಗೆ, ಜಿಹಾದಿ ಗುಂಪುಗಳು ಭಾರತೀಯ ಮೆಟ್ರೋ ನಗರಗಳಲ್ಲಿ ದಾಳಿ ನಡೆಸುವ ಗುರಿಯನ್ನು ಹೊಂದಿರುವ ಉದ್ದೇಶವು ಸರಕಾರಕ್ಕೆ ಸ್ಪಷ್ಟವಾಗಿದೆ.

ಲಷ್ಕರ್ ಇ ತೊಯ್ಬಾ, ಜೈಷ್, ಇ ಮಹಮ್ಮದ್ ಮುಂತಾದ ಅನೇಕ ಗುಂಪುಗಳು ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದು, ಹರ್ಕತ್ ಉಲ್ ಜಿಹಾದ್ ಇಸ್ಲಾಮಿ ಬಾಂಗ್ಲಾದೇಶದೊಂದಿಗೆ ಸಂಬಂಧವನ್ನು ಹೊಂದಿದೆ.

ಭಯೋತ್ಪಾದನೆ ನಿಗ್ರಹಕ್ಕೆ ಸರಕಾರವು ಮೊದಲ ಆದ್ಯತೆ ನೀಡಬೇಕಾಗಿರುವುದರಿಂದ ಸ್ಫೋಟವು ರಾಜಕೀಯ ಆದ್ಯತೆಗಳ ಮರುಹೊಂದಾಣಿಕೆಗೆ ಕಾರಣವಾಗಬಹುದು.

ಜುಲೈ 22ರ ವಿಶ್ವಾಸಮತದ ನಂತರ, ಪ್ರಮುಖ ಕಾರ್ಯಸೂಚಿಯ ಕಾರ್ಯಗತ ಮತ್ತು ಹಣದುಬ್ಬರ ನಿಯಂತ್ರಣದ ವಿಶ್ವಾಸವನ್ನು ಸರಕಾರವು ಹೊಂದಿತ್ತು.
ಮತ್ತಷ್ಟು
ಅಹ್ಮದಾಬಾದಿಗೆ ಪಿಎಂ, ಸೋನಿಯಾ ಭೇಟಿ
ಮೋದಿ ವಿರುದ್ಧ ವಿರೋಧ ಪಕ್ಷಗಳ ವಾಗ್ದಾಳಿ
ಇಂಡಿಯನ್ ಮುಜಾಹಿದೀನ್: ಸಿಮಿಯ ರೂಪಾಂತರ?
ತ.ನಾ: ವಿವಿಧೆಡೆ ಸ್ಫೋಟ ಸಂಚು ಬಯಲು
ಅಹ್ಮದಾಬಾದ್ ಸ್ಫೋಟ: ಓರ್ವ ವ್ಯಕ್ತಿಯ ಬಂಧನ
ಕೇರಳದಲ್ಲಿ ಬಾಂಬ್ ಬೆದರಿಕೆ