ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆ.1ರಂದು ಖಗ್ರಾಸ ಸೂರ್ಯಗ್ರಹಣ, ಭಾರತದಲ್ಲಿ ಭಾಗಶಃ ಗೋಚರ Search similar articles
ಶುಕ್ರವಾರ ಮಧ್ಯಾಹ್ನ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಲಿದ್ದು, ಭಾರತದೆಲ್ಲೆಡೆ ಪಾರ್ಶ್ವ ಸೂರ್ಯಗ್ರಹಣದ ರೂಪದಲ್ಲಿ ಗೋಚರಿಸಲಿದೆ.

ಉತ್ತರ ಅಮೆರಿಕ, ಗ್ರೀನ್ಲೆಂಡ್, ಉತ್ತರ ಯೂರೋಪ್ ಮತ್ತು ಜಪಾನ್ ಹೊರತಾದ ಏಷ್ಯಾದ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ಖಗ್ರಾಸ ಸೂರ್ಯಗ್ರಹಣ ಗೋಚರಿಸಲಿದೆ.

ಕೆನಡಾದ ನ್ಯೂ ಫೌಂಡ್‌ಗೆ ಸಮೀಪದ ಉತ್ತರ ಅಟ್ಲಾಂಟಿಕ್ ಸಮುದ್ರದ ಬಿಂದುವಿನಲ್ಲಿ ಸ್ಥಳೀಯ ಸೂರ್ಯೋದಯದ ಸಂದರ್ಭದಲ್ಲಿ, ಚಂದ್ರನ ನೆರಳು ಮೊದಲು ಭೂಮಿಯ ಮೇಲೆ ಬೀಳುವಾಗ ಅಂದರೆ ಭಾರತೀಯ ಕಾಲಮಾನ ಪ್ರಕಾರ ಗ್ರಹಣವು ಮಧ್ಯಾಹ್ನ 1.34ಕ್ಕೆ ಆರಂಭವಾಗಲಿದೆ.

ಅಂಡಮಾನ್ ನಿಕೋಬಾರ್ ದ್ವೀಪ ಸಮೀಪ ಬಂಗಾಳ ಕೊಲ್ಲಿಯ ಬಿಂದುವೊಂದರಲ್ಲಿ ಸ್ಥಳೀಯ ಸೂರ್ಯಾಸ್ತದ ವೇಳೆ, ಚಂದ್ರನ ನೆರಳು ಭೂಮಿಯ ಮೇಲಿಂದ ಸರಿದಾಗ, ಅಂದರೆ ಭಾರತೀಯ ಕಾಲಮಾನ ಪ್ರಕಾರ ಸಂಜೆ 6.08ಕ್ಕೆ ಗ್ರಹಣ ಮುಕ್ತಾಯವಾಗಲಿದೆ.

ಗ್ರಹಣವು ಪರಿಪೂರ್ಣವಾಗುವುದು ಉತ್ತರ ಕೆನಡಾದ ಆಗ್ನೇಯ ತೀರದಲ್ಲಿರುವ ವಿಕ್ಟೋರಿಯಾ ದ್ವೀಪದ ಬಿಂದುವೊಂದರಲ್ಲಿ ಭಾರತೀಯ ಕಾಲಮಾನ ಪ್ರಕಾರ ಅಪರಾಹ್ನ 2.53 ಗಂಟೆಗೆ. ಪೂರ್ಣತೆಯ ಹಂತವು 4.50ಕ್ಕೆ ಆಗ್ನೇಯ ಚೀನಾದ ಕ್ಸಿಯಾನ್ ಸಮೀಪ ಮುಕ್ತಾಯವಾಗಲಿದೆ.

ಮುಂದಿನ ಖಗ್ರಾಸ ಸೂರ್ಯಗ್ರಹಣವು 2009ರ ಜುಲೈ 22ರಂದು ಸಂಭವಿಸಲಿದೆ. ಅಂದು ಭಾರತದಲ್ಲೂ ಅದು ಪೂರ್ಣವಾಗಿಯೇ ಗೋಚರಿಸಲಿದೆ.
ಮತ್ತಷ್ಟು
ಸ್ಫೋಟದಲ್ಲೂ ಯುಪಿಎ ರಾಜಕೀಯ: ರಾಜನಾಥ್ ಆರೋಪ
ಸರಕಾರದ ಕಾರ್ಯಸೂಚಿಯಲ್ಲಿ ಭಯೋತ್ಪಾದನೆ ನಿಗ್ರಹ
ಅಹ್ಮದಾಬಾದಿಗೆ ಪಿಎಂ, ಸೋನಿಯಾ ಭೇಟಿ
ಮೋದಿ ವಿರುದ್ಧ ವಿರೋಧ ಪಕ್ಷಗಳ ವಾಗ್ದಾಳಿ
ಇಂಡಿಯನ್ ಮುಜಾಹಿದೀನ್: ಸಿಮಿಯ ರೂಪಾಂತರ?
ಚೆನ್ನೈನಲ್ಲಿ ಸ್ಪೋಟ ಸಂಚು: ಮತ್ತಿಬ್ಬರ ಬಂಧನ