ಇಲ್ಲಿನ ಆಸ್ಪತ್ರೆ ಸಮೀಪ ಸೋಮವಾರದಂದು ಸಜೀವ ಬಾಂಬ್‌ವೊಂದು ಪತ್ತೆಯಾಗಿದ್ದು ಅದನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿದ್ದು, ನಗರದ ಹೊರವಲಯದಲ್ಲಿ ಸ್ಫೋಟಕ ತುಂಬಿದ್ದ ಎರಡು ಕಾರುಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಸೂರತ್‌ನ ಹೊರವಲಯದ ಪುನಾಗಾಂವ್ ಪ್ರದೇಶದಲ್ಲಿ ಸ್ಫೋಟಕ ವಸ್ತುಗಳು ತುಂಬಿದ್ದ ಕಾರನ್ನು ವಶಪಡಿಸಿಕೊಂಡಿರುವುದಾಗಿ ನಗರ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಆರ್.ಚಾವ್ಡಾ ಹೇಳಿದ್ದಾರೆ.
ಜಿಜೆ-6 ಡಿ ಸಿಡಿ 3569 ನಂಬರಿನ ಕಾರಿನಲ್ಲಿ ಗನ್ ಪೌಡರ್, ಜಿಲೆಟಿನ್ ಕಡ್ಡಿಗಳು ಮತ್ತು ಮುಂತಾದ ಸ್ಫೋಟಕ ವಸ್ತುಗಳು ಇದ್ದಿರುವುದಾಗಿ ಚಾವ್ಡಾ ತಿಳಿಸಿದ್ದಾರೆ.
ಬಳಿಕ ನಗರದ ಹೀರಾಭಾಗ್ ಪ್ರದೇಶದಲ್ಲಿ ಸ್ಫೋಟಕ ತುಂಬಿದ್ದ ಮತ್ತೊಂದು ಕಾರನ್ನು ವಶಪಡಿಸಿಕೊಂಡಿರುವುದಾಗಿ ಸೂರತ್ ಪೊಲೀಸ್ ವರಿಷ್ಠಾಧಿಕಾರಿ ಆರ್.ಎಂ.ಬಾರಾರ್ ಹೇಳಿದರು.
|