ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಫೋಟ: ಶಂಕಿತ ವ್ಯಕ್ತಿಯ ರೇಖಾಚಿತ್ರ ಬಿಡುಗಡೆ Search similar articles
PTI
ಅಹಮಬಾದ್ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ಹಲವರನ್ನು ಬಂಧಿಸಿದ ನಂತರ ಡೈಮಂಡ್ ಸಿಟಿಯಲ್ಲಿ ಸ್ಫೋಟಕ ತುಂಬಿಕೊಂಡಿದ್ದ ಕಾರು ಪಾರ್ಕ್ ಮಾಡಿರುವ ಶಂಕಿತ ವ್ಯಕ್ತಿಯ ರೇಖಾಚಿತ್ರವನ್ನು ಬಹಿರಂಗಪಡಿಸಲಾಗಿದೆ.

ಸುರೇಂದ್ರನಗರದಿಂದ ಸೂರತ್‌ಗೆ ತೆರಳುತ್ತಿದ್ದ ಮೂವರು ಶಂಕಿತರನ್ನು ಬಂಧಿಸಿರುವುದಾಗಿ ವರದಿಗಳು ತಿಳಿಸಿದ್ದು, ಕಾರಿನ ಕೆಳಭಾಗದಲ್ಲಿಟ್ಟಿದ್ದ ಎರಡು ಲಕ್ಷ ಪೌಂಡ್ ಕರೆನ್ಸಿ ಮತ್ತು 85,000 ರೂಪಾಯಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹೀರಾಬಾಗ್ ಪ್ರದೇಶದಲ್ಲಿ ಕೆಂಪುಬಣ್ಣದ ವಾಗನ್ ಆರ್ ಕಾರನ್ನು ಪಾರ್ಕ್ ಮಾಡಿರುವ ಬಗ್ಗೆ ವಾಚ್‌ಮನ್ ನೀಡಿದ ಮಾಹಿತಿಯ ಆಧಾರದಲ್ಲಿ ಶಂಕಿತರ ಸಂಚನ್ನು ಬಯಲು ಮಾಡಲಾಗಿದೆ ಎಂದು ಸೂರತ್ ಪೊಲೀಸ್ ಕಮಿಶನರ್ ಆಎಂಎಸ್ ಬ್ರಾರ್ ತಿಳಿಸಿದ್ದಾರೆ.

ಕಳವು ಮಾಡಿದ ಕಾರು
ಅಲ್ಲದೆ, ಸೂರತ್‌ನಲ್ಲಿ ಕಂಡುಬಂದ ಸ್ಫೋಟಕ ಹೊಂದಿದ ವಾಗನ್ ಆರ್ ಮುಂಬಯಿಯಿಂದ ಕಳವುಮಾಡಿದ್ದಾಗಿ ತಿಳಿದುಬಂದಿದ್ದು, ಇದರಲ್ಲಿ ಎಲ್‌ಪಿಜಿ ಸಿಲಿಂಡರನ್ನು ಅಳವಡಿಲಾಗಿತ್ತು ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ.

ಈ ನಡುವೆ, ಸೂರತ್‌ನ ಲಾಮೇಶ್ವರ್ ಪೊಲೀಸ್ ಠಾಣೆಯಲ್ಲಿ ಇನ್ನೊಂದು ಜೀವಂತ ಬಾಂಬ್ ಪತ್ತೆಯಾಗಿರುವ ವರದಿಯಾಗಿದೆ.

ಸ್ಫೋಟ ಪ್ರಕರಣಕ್ಕೆ ಸಂಬಂಧ ಹೊಂದಿರುವ ಜುಲ್ಫಿಕರ್ ಎಂಬ ವ್ಯಕ್ತಿಯ ಪತ್ತೆಗಾಗಿ ತೀವ್ರ ಶೋಧ ಕಾರ್ಯವನ್ನು ಅಪರಾಧಿ ವಿಭಾಗವು ಸೋಮವಾರ ಪ್ರಾರಂಭಿಸಿದ್ದು, ಈ ಮೂಲಕ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟದ ತನಿಖೆ ಇನ್ನಷ್ಟು ಚುರುಕುಗೊಂಡಿದೆ. ಜುಲ್ಫಿಕರ್‌ ಸಿಮಿ ಮುಖ್ಯಸ್ಥ ಸಫ್ದಾರ್ ನಾಗೋರಿಯ ಆಪ್ತ ಎಂಬುದಾಗಿ ತಿಳಿದು ಬಂದಿದೆ.

ಈ ಮೊದಲು ಬಂಧಿತನಾದ ಸಿಮಿ ಕಾರ್ಯಕರ್ತ ಅಬ್ದುಲ್ ಹಲೀಂ ನೀಡಿದ ಮಾಹಿತಿಯ ಪ್ರಕಾರ ಅಹ್ಮದಾಬಾದ್ ಬಾಂಬ್ ಸ್ಫೋಟದಲ್ಲಿ ಜುಲ್ಫಿಕರ್ ಕೈವಾಡವಿದೆ ಎಂಬುದಾಗಿ ಶಂಕಿಸಲಾಗಿದೆ.
ಮತ್ತಷ್ಟು
ಗುಜರಾತ್‌ಗೆ ರಾಜಸ್ಥಾನ ಪೊಲೀಸ್
ಸೂರತ್‌‌ನಲ್ಲಿ ಜೀವಂತ ಬಾಂಬ್ ಪತ್ತೆ : ಯಶಸ್ವಿ ನಿಷ್ಕ್ರಿಯ
ಆ.1ರಂದು ಖಗ್ರಾಸ ಸೂರ್ಯಗ್ರಹಣ, ಭಾರತದಲ್ಲಿ ಭಾಗಶಃ ಗೋಚರ
ಸ್ಫೋಟದಲ್ಲೂ ಯುಪಿಎ ರಾಜಕೀಯ: ರಾಜನಾಥ್ ಆರೋಪ
ಸರಕಾರದ ಕಾರ್ಯಸೂಚಿಯಲ್ಲಿ ಭಯೋತ್ಪಾದನೆ ನಿಗ್ರಹ
ಅಹ್ಮದಾಬಾದಿಗೆ ಪಿಎಂ, ಸೋನಿಯಾ ಭೇಟಿ