ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸೂರತ್‌ನಲ್ಲಿ 15 ಬಾಂಬ್‌ಗಳು ಪತ್ತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೂರತ್‌ನಲ್ಲಿ 15 ಬಾಂಬ್‌ಗಳು ಪತ್ತೆ Search similar articles
ಸೂರತ್‌ನಲ್ಲಿ ಒಂದೇ ದಿನದಲ್ಲಿ 15 ಜೀವಂತ ಬಾಂಬ್ ಪತ್ತೆಯಾಗಿದ್ದು, ಇವುಗಳಲ್ಲಿ ಆರನ್ನು ಯಶಸ್ವಿಯಾಗಿ ನಿಷ್ಕ್ರೀಯಗೊಳಿಸಲಾಗಿದೆ. ಈ ಬಾಂಬ್‌ಗಳ ಯಶಸ್ವೀ ಪತ್ತೆಯಿಂದಾಗಿ ಭಾರೀ ಸಾವುನೋವುಗಳನ್ನು ತಡೆದಂತಾಗಿದೆ.

ಇದರಲ್ಲಿ ಹತ್ತು ಬಾಂಬ್‌ಗಳು ಸೂರತ್‌ನ ಜನನಿಬಿಡ ವರಚ್ಚ ರಸ್ತೆ ಪ್ರದೇಶದಲ್ಲಿ ಪತ್ತೆಯಾಗಿದ್ದು, ಮೂರನ್ನು ಹಿರಾ ಬಾಗ್ ವೃತ್ತ ಹಾಗೂ ಎರಡನ್ನು ಮಿನಿ ಹಿರಾ ಬಜಾರ್‌ನಲ್ಲಿ ಪತ್ತೆಹಚ್ಚಲಾಗಿದೆ.

ವರಚ್ಚಾದಲ್ಲಿ ಪತ್ತೆಯಾದ 10 ಬಾಂಬ್‌ಗಳಲ್ಲಿ ಮೂರನ್ನು ಮಾರ್ಾತ ರಸ್ತೆ ಮತ್ತು ಎರಡು ಲಾಭೇಶ್ವರ ಹಾಗೂ ಒಂದು ಬಾಂಬ್ ಸಂತೋಷಿ ನಗರ್ ಹಾಗೂ ಮಾತಾವಾದಿಯಲ್ಲಿ ಇರಿಸಲಾಗಿತ್ತು.

ಮರದಲ್ಲಿ, ಬಸ್‍ನಿಲ್ದಾಣ, ಟಾಯ್ಲೆಟ್ ಮುಂತಾದೆಲ್ಲೆಡೆ ಬಾಂಬ್‌ಗಳನ್ನು ಇರಿಸಲಾಗಿದ್ದು ಜನತೆ ತಲ್ಲಣಗೊಂಡಿದ್ದಾರೆ.

ಇಲ್ಲಿಆಸ್ಪತ್ರಸಮೀಸೋಮವಾಸಜೀಬಾಂಬ್‌ವೊಂದಪತ್ತೆಯಾಗಿದ್ದಅದನ್ನಯಶಸ್ವಿಯಾಗಿ ನಿಷ್ಕ್ರಿಯಗೊಳಿಸಲಾಗಿತ್ತು. ಭಾನುವಾರ ಬಾಂಬ್ ಇರಿಸಲಾಗಿದ್ದ ವ್ಯಾಗನ್ ಆರ್ ಕಾರು ಪತ್ತೆಯಾಗಿತ್ತು.

ಬಾಂಬ್ ನಿಷ್ಕ್ರಿಯ ದಳವು ಬಾಂಬ್ ನಿಷ್ಕ್ರಿಯ ಕಾರ್ಯದಲ್ಲಿ ತೊಡಗಿದ್ದು, ಈ ಮೊದಲು ಪತ್ತೆ ಹಚ್ಚಿದ ಬಾಂಬ್‌‌ನ ತದ್ರೂಪವಾಗಿದೆ ಎಂದು ಪ್ರಾರಂಭಿಕ ತನಿಖೆಯಿಂದ ತಿಳಿದುಬಂದಿದೆ.

ಏತನ್ಮಧ್ಯೆ, ಅಹಮದಾಬಾದ್ ಸರಣಿ ಸ್ಫೋಟದ ನಿಮಿಷಗಳ ಮೊದಲು ಟೆಲಿವಿಷನ್ ಮಾಧ್ಯಮಗಳಿಗೆ ಇಮೈಲ್ ಕಳುಹಿಸಲು ಅಮೆರಿಕನ್ ಪ್ರಜೆಯೊಬ್ಬನ ಇಮೈಲ್ ಐಡಿಯನ್ನು ಬಳಸಲಾಗಿದ್ದು, ಈತನಿಗೆ ಪೊಲೀಸರು ಕ್ಲೀನ್‌ಚಿಟ್ ನೀಡಿದ್ದಾರೆ.
ಮತ್ತಷ್ಟು
ಕದನ ವಿರಾಮ ಉಲ್ಲಂಘನೆ: ಸೈನಿಕ ಹತ್ಯೆ
ಸ್ಫೋಟ: ಶಂಕಿತ ವ್ಯಕ್ತಿಯ ರೇಖಾಚಿತ್ರ ಬಿಡುಗಡೆ
ಗುಜರಾತ್‌ಗೆ ರಾಜಸ್ಥಾನ ಪೊಲೀಸ್
ಸೂರತ್‌‌ನಲ್ಲಿ ಜೀವಂತ ಬಾಂಬ್ ಪತ್ತೆ : ಯಶಸ್ವಿ ನಿಷ್ಕ್ರಿಯ
ಆ.1ರಂದು ಖಗ್ರಾಸ ಸೂರ್ಯಗ್ರಹಣ, ಭಾರತದಲ್ಲಿ ಭಾಗಶಃ ಗೋಚರ
ಸ್ಫೋಟದಲ್ಲೂ ಯುಪಿಎ ರಾಜಕೀಯ: ರಾಜನಾಥ್ ಆರೋಪ