ಭಾರತ ಅಮೆರಿಕ ಪರಮಾಣು ಒಪ್ಪಂದದ ಕುರಿತಾಗಿ ಯುಪಿಎ ಸರಕಾರಕ್ಕೆ ಬೆಂಬಲ ನೀಡಿದ ನಂತರ, ಅಮೆರಿಕನ್ ಕಾಂಗ್ರೆಸ್‌ನಿಂದ ಅಂಗೀಕರಿಸಲ್ಪಟ್ಟ ಹೈಡ್ ಕಾಯಿದೆಯನ್ನು ತಿದ್ದುಪಡಿ ಮಾಡುವಂತೆ ಹಾಗೂ ನಿಬಂಧನೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಂಸತ್ತಿನಲ್ಲಿ ನೂತನ ಕಾಯಿದೆಯನ್ನು ಜಾರಿಗೆ ತರುವಂತೆ ಭಾರತವು ಅಮೆರಿಕಕ್ಕೆ ಒತ್ತಡ ಹೇರಬೇಕು ಎಂದು ಸಮಾಜವಾದಿ ಪಕ್ಷವು ಒತ್ತಾಯಿಸಿದೆ.
ಅಮೆರಿಕ ಕಾಂಗ್ರೆಸ್‌ನಿಂದ ಅಂಗೀಕರಿಸಲ್ಪಟ್ಟ ಹೈಡ್ ಕಾಯಿದೆಯಲ್ಲಿ ಕೆಲವು ನಿಬಂಧನೆಗಳಿದ್ದು, ಇದು ಪರಮಾಣು ಒಪ್ಪಂದದ ಮುನ್ನಡೆಗೆ ಅಡ್ಡಿ ಉಂಟುಮಾಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಹೈಡ್ ಕಾಯಿದೆ ತಿದ್ದುಪಡಿ ಮಾಡುವಂತೆ ಅಥವಾ ಭಾರತದಲ್ಲೂ ಇಂತಹ ಕಾಯಿದೆ ಜಾರಿಗೆ ತರಲು ಸಂಸತ್ತಿನಲ್ಲಿ ಬಿಲ್ ಮಂಡಿಸುವಂತೆ ಅಮೆರಿಕಕ್ಕೆ ಕೇಂದ್ರವು ಒತ್ತಡ ಹೇರಬೇಕು ಎಂದು ಸಮಾಜವಾದಿ ಪಕ್ಷದ ರಾಜಕೀಯ ನಿರ್ಣಯವು ತಿಳಿಸಿದೆ.
ಭಾರತದ ಪರಮಾಣು ಇಂಧನ ಉತ್ಪಾದನೆ ಕಾರ್ಯಕ್ರಮದಲ್ಲಿ ಇತರ ರಾಷ್ಟ್ರಗಳು ಅಡ್ಡಿಯುಂಟುಮಾಡುವುದನ್ನು ತಪ್ಪಿಸಲು ಇದು ಅಗತ್ಯವಾಗಿದೆ ಎಂದು ಈ ನಿರ್ಣಯವು ಹೇಳಿದೆ.
|