ರಾಮಸೇತುವನ್ನು ರಕ್ಷಿಸುವ ನಿಟ್ಟಿನಲ್ಲಿ ಸೇತುಸಮುದ್ರಂ ಯೋಜನೆಯ ಮಾರ್ಗವನ್ನು ಬದಲಾಯಿಸುವಂತೆ ಸುಪ್ರೀಂ ಕೋರ್ಟಿನ ಸಲಹೆಯನ್ನು ಪರಿಗಣಿಸಲು ಕೇಂದ್ರವು ನಿರ್ಧರಿಸಿದ್ದು, ಈ ನಿರ್ಧಾರವು ಇನ್ನಷ್ಟು ಆತಂಕಗಳಿಗೆ ಕಾರಣವಾಗಲಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಬಂಗಾಳಕೊಲ್ಲಿಯಲ್ಲಿನ ಈ ರಾಮಸೇತುವನ್ನು ಭಗವಾನ್ ಶ್ರೀರಾಮನ ವಾನರ ಸೇನೆಯು ನಿರ್ಮಿಸಿದೆ ಎಂಬ ನಂಬುಗೆ ಇದೆ. ಕೇಂದ್ರವು ತನ್ನ ನಿರ್ಣಯದ ಪ್ರಕಾರವೇ ಮುಂದುವರಿದರೆ, ಹಡಗು ಸಾಗಲು ಸುಲಭವಾಗುವ ಸಲುವಾಗಿ ಈ ಪ್ರದೇಶವನ್ನು ತುಂಡರಿಸಲಾಗುತ್ತದೆ.
ಆದರೆ, ಇದು ಹಿಂದೂಗಳ ಭಾವನೆಯನ್ನು ಅವಮಾನ ಮಾಡಿದಂತಾಗುತ್ತದೆ ಎಂದು ಹಿಂದೂವಾದಿಗಳು ದೂರಿದ್ದಾರೆ. ಸರಕಾರವು ಈ ಯೋಜನೆಗೆ ಬೇರೆ ಮಾರ್ಗವನ್ನು ಅನುಸರಿಸಬೇಕೆಂದು ಇವರ ಒತ್ತಾಯವಾಗಿದೆ.
ಸೇತುಸಮುದ್ರಂ ಕಾಲುವೆ ಯೋಜನೆಗೆ ಬೇರೆ ಮಾರ್ಗವನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಹೇಳಿದ್ದು, ದನುಷ್ಕೋಟಿಗೆ ಭೇಟಿ ನೀಡುವ ಭಕ್ತಾದಿಗಳು ಈ ಸೇತುವೆಗೆ ಯಾವುದೇ ಹಾನಿ ಉಂಟಾಗುವುದಿಲ್ಲ ಎಂಬ ಭರವಸೆಯನ್ನು ಹೊಂದಿದ್ದಾರೆ.
ಯೋಜನೆಯ ಪ್ರಕಾರ, ಕೋದಂಡರಾಮರ್ ದೇವಾಲಯದ ಬಳಿ ಇರುವ ಪ್ರದೇಶದಲ್ಲಿ ಕಾಲುವೆಯನ್ನು ತುಂಡರಿಸಲಾಗುತ್ತದೆ. ಈ ಕುರಿತಾಗಿ ಕೇಂದ್ರವು ಸ್ವಲ್ಪ ದಿನಗಳಲ್ಲೇ ಉತ್ತರಿಸಲಿದೆ.
ರಾಮಸೇತು ನಿರ್ನಾಮವು ರಾಮಭಕ್ತರ ಹೃದಯಗಳನ್ನು ತುಂಡರಿಸಿದಂತೆ, ಈ ಯೋಜನೆಯು ಆರ್ಥಿಕವಾಗಿ ಲಾಭದಾಯಕವಾಗಿದ್ದರೂ, ಇದಕ್ಕಾಗಿ ಬೇರೆ ಮಾರ್ಗವನ್ನು ಅನುಸರಿಸುವುದು ಸೂಕ್ತ ಎಂದು ರಾಮಭಕ್ತರೊಬ್ಬರು ಹೇಳುತ್ತಾರೆ. ಅಲ್ಲದೆ, ರಾಮಸೇತುವೆ ಸುನಾಮಿಯನ್ನು ತಡೆದಿದೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಸೇತುಸಮುದ್ರವು ಮನ್ನಾರ್ ಗಲ್ಫ್‌ನ ಮೆರೈನ್ ನ್ಯಾಶನಲ್ ಪಾರ್ಕ್‌ಗೆ ಸಮೀಪವಿರುವುದರಿಂದ ಇದು ಪರಿಸರಕ್ಕೆ ಧಕ್ಕೆ ಉಂಟುಮಾಡಲಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
|