ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಲಕ್ಷ್ಮೀ ಈಗ ಪುಟ್ಟಪುಟ್ಟ ಹೆಜ್ಜೆ ಇಡುತ್ತಾಳೆ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಕ್ಷ್ಮೀ ಈಗ ಪುಟ್ಟಪುಟ್ಟ ಹೆಜ್ಜೆ ಇಡುತ್ತಾಳೆ! Search similar articles
PTI
ನಾಲ್ಕು ಕೈಕಾಲುಗಳೊಂದಿಗೆ ಜನಿಸಿ ಬೆಂಗಳೂರಿನ ಸ್ಪರ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಪುಟಾಣಿ ಲಕ್ಷ್ಮಿಯ ನೆನಪಿದೆಯೇ? ಹೇಗೆ ಮರೆಯಲು ಸಾಧ್ಯ? ಎರಡೂವರೆ ವರ್ಷದ ಈ ಬಾಲೆ ಈಗ ತಪ್ಪು ಹೆಜ್ಜೆ ಇಡುತ್ತಾಳಂತೆ.

ಹೆಚ್ಚುವರಿ ಕೈಕಾಲುಗಳನ್ನು ಹೊಂದಿದ್ದ ಈ ಪುಟಾಣಿ ಕುಳಿತಲ್ಲೇ ಅತ್ತಿತ್ತ ಜಾರುವುದನ್ನು ಬಿಟ್ಟರೆ ಇನ್ನೇನು ಮಾಡಲು ಆಕೆಗೆ ಸಾಧ್ಯವಿರಲಿಲ್ಲ. ಈಗ ಆಕೆ ಅಂಬೆಗಾಲಿಡುತ್ತಾಳೆ, ಅಣ್ಣನೊಂದಿಗೆ ಬೊಂಬೆಯಾಟ ಆಡುತ್ತಾಳೆ, ಮತ್ತು ನಡೆಯುತ್ತಾಳೆ!

ವೈದ್ಯ ಲೋಕಕ್ಕೆ ಸವಾಲಾಗಿದ್ದ ಈ ಮಗುವಿಗೆ ನವೆಂಬರ್ 6 ಮತ್ತು 7ರಂದು ವೈದ್ಯ ಶರಣ್ ಪಾಟೀಲ್ ನೇತೃತ್ವದ ತಂಡವು, ಬೆಂಗಳೂರಿನ ಸ್ಪರ್ಷ ಆಸ್ಪತ್ರೆಯಲ್ಲಿ ಸತತ 27 ಗಂಟೆಗಳ ಮ್ಯಾರಥಾನ್ ಸರ್ಜರಿ ನಡೆಸಿ, ವೈದ್ಯಕೀಯ ಇತಿಹಾಸದಲ್ಲಿ ಹೊಸ ಇತಿಹಾಸ ಬರೆದಿದ್ದರು. 16 ವಿಶೇಷ ತಜ್ಞರೂ ಸೇರಿದಂತೆ, 36 ವೈದ್ಯರು ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದು, ಈ ಶಸ್ತ್ರಕ್ರಿಯೆಯು ಸಾರ್ಥಕವೆಂಬಂತೆ ಇದೀಗ ಲಕ್ಷ್ಮೀಯ ಬೆಳವಣೆಯಾಗಿದೆ.

ಜೋಧ್‌ಪುರ ಸಮೀಪದ ಮನಕ್ಲಾವೊ ಎಂಬಲ್ಲಿ ಥಾರ್ ಮರುಭೂಮಿಯ ದಟ್ಟವಾದ ಮರಳಿನಲ್ಲಿ ಹೆಜ್ಜೆ ಊರಲು ಲಕ್ಷ್ಮೀ ಪ್ರಯತ್ನಿಸುತ್ತಾಳೆ. ಈಕೆಗೆ ಇನ್ನೂ ಎರಡು ಶಸ್ತ್ರ ಚಿಕಿತ್ಸೆಗಳ ಅಗತ್ಯವಿದೆ. ನಿಮಗೆ ಆಕೆ ಚತರ್ಭುಜೆಯಾಗಿದ್ದಳು ಎಂಬುದು ತಿಳಿಯದೇ ಇದ್ದಲ್ಲಿ ಅದೇ ಮಗುವಾ ಇದು ಎಂಬುದಾಗಿ ಹುಬ್ಬೇರಿಸುವಂತಾಗುತ್ತದೆ.

ಲಕ್ಷ್ಮೀ ಮತ್ತು ಆಕೆಯ ಕುಟುಂಬ ಶಸ್ತ್ರಕ್ರಿಯೆ ಮುಗಿಸಿ ಬೆಂಗಳೂರಿಗೆ ತೆರಳಿದ ಬಳಿಕ ಜೋಧ್‌ಪುರಕ್ಕೆ ತೆರಳಿತ್ತು. ಅಲ್ಲಿ ಸುಚೇತ ಕೃಪಲಾನಿ ಶಿಕ್ಷಾ ನಿಕೇತನ ಅಂಗವಿಕಲ ಮಕ್ಕಳ ಶಾಲೆಯಲ್ಲಿ ಲಕ್ಷ್ಮಿಗೆ ಆರೈಕೆ ನೀಡಲಾಗಿತ್ತು. ಅಲ್ಲದೆ, ಲಕ್ಷ್ಮಿ ಅಣ್ಣ ಮಿಥಿಲೇಶ್‌ಗೂ ಶಿಕ್ಷಣ ನೀಡಲಾಗಿತ್ತು.

ಅವಳಿ ಮಕ್ಕಳ ಜಠರ ಭಾಗದಲ್ಲಿ ಒಂದನ್ನೊಂದು ಕೂಡಿಕೊಂಡಿರುವ ಇಶಿಯೋಫೇಗಸ್ ಟೆಟ್ರಾಪಸ್ ಎಂಬ ವೈದ್ಯಕೀಯ ಜಗತ್ತಿನ ಅಪರೂಪದ ವೈಕಲ್ಯಕ್ಕೀಡಾಗಿದ್ದ ಲಕ್ಷ್ಮಿ ಈ ಕಾರಣಕ್ಕಾಗಿ ಜನನದ ವೇಳೆ ನಾಲ್ಕು ಕೈ, ನಾಲ್ಕು ಕಾಲುಗಳನ್ನು ಲಕ್ಷ್ಮಿ ಹೊಂದಿದ್ದಳು. ಮತ್ತೊಂದು ಅವಳಿ ಮಗುವಿಗೆ ತಲೆಯಿಲ್ಲದ ಕಾರಣ, ಪರಾವಲಂಬಿಯಂತೆ ಈ ಮಗು ಗೋಚರಿಸುತ್ತಿತ್ತು.

ಒಂದೇ ತಲೆ ಇರುವ ಅವಳಿ ಮಕ್ಕಳ ಸಂಯೋಗದಿಂದಾಗಿ ಈ ವೈಕಲ್ಯ ಉಂಟಾಗಿದ್ದ ಎರಡು ವರ್ಷದ ಮಗು ಲಕ್ಷ್ಮಿ ಬಿಹಾರದ ಅರಾರಿಯಾ ಜಿಲ್ಲೆಯ ಪುಟ್ಟ ಹಳ್ಳಿಯವಳು. ಹಳ್ಳಿಗರು ಆಕೆಯನ್ನು ಮೊದಲು ದೇವಿ ಲಕ್ಷ್ಮೀಯ ಅವತಾರ ಎಂದು ನಂಬಿದ್ದರು. ಆದರೆ ಇದು ಅಂಗ ವೈಕಲ್ಯ ಎಂಬುದು ಕೆಲವು ಸಮಯದ ಬಳಿಕ ಅವರ ಅರಿವಿಗೆ ಬಂದಿತ್ತು.

ಮಗುವಿನ ಶಸ್ತ್ರಕ್ರಿಯೆಯ ಕುರಿತು ನೂರು ಶೇಕಡಾ ಗ್ಯಾರಂಟಿ ಇಲ್ಲದಿದ್ದರೂ ತಮ್ಮ ಮಗುವಿನ ಒಳಿತಿಗಾಗಿ ಅಪಾಯಕ್ಕೊಡ್ಡಿಕೊಂಡಿದ್ದರು. ಮಗುವಿನ ಆರೋಗ್ಯಕ್ಕಾಗಿ ರಾಷ್ಟ್ರಾದ್ಯಂತ ಮಂದಿ ಪೂಜೆ, ಹರಕೆ ಮಾಡಿಕೊಂಡಿದ್ದು, ಶಸ್ತ್ರಕ್ರಿಯೆಯ ಯಶಸ್ಸಿಗೆ ಶುಭಹಾರೈಸಿದ್ದರು. ಸುಮಾರು ಎರಡೂವರೆ ಲಕ್ಷ ರೂಪಾಯಿ ಚಿಕಿತ್ಸೆಯ ವೆಚ್ಚವನ್ನು ಆಸ್ಪತ್ರೆಯೇ ಬರಿಸಿತ್ತು. ಬಳಿಕ ದಾನಿಗಳ ಸಹಾಯ ಧನ ಹರಿದು ಬಂದಿತ್ತು.
ಮತ್ತಷ್ಟು
ಉಚ್ಚಾಟನೆ ನೋವನ್ನುಂಟುಮಾಡಿದೆ: ಚಟರ್ಜಿ
ರಾಮಸೇತು: ಪರ್ಯಾಯ ಮಾರ್ಗಕ್ಕೆ ಕೇಂದ್ರದ ಚಿಂತನೆ
ಹೈಡ್ ಕಾಯಿದೆ ತಿದ್ದುಪಡಿಗೆ ಎಸ್‌ಪಿ ಒತ್ತಾಯ
ಸೂರತ್‌ನಲ್ಲಿ 15 ಬಾಂಬ್‌ಗಳು ಪತ್ತೆ
ಕದನ ವಿರಾಮ ಉಲ್ಲಂಘನೆ: ಸೈನಿಕ ಹತ್ಯೆ
ಸ್ಫೋಟ: ಶಂಕಿತ ವ್ಯಕ್ತಿಯ ರೇಖಾಚಿತ್ರ ಬಿಡುಗಡೆ