ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸೂರತ್‌‌ನಲ್ಲಿ 18 ಬಾಂಬ್ ಪತ್ತೆ-ಯಶಸ್ವಿ ನಿಷ್ಕ್ರಿಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೂರತ್‌‌ನಲ್ಲಿ 18 ಬಾಂಬ್ ಪತ್ತೆ-ಯಶಸ್ವಿ ನಿಷ್ಕ್ರಿಯ Search similar articles
ಸೂರತ್‌ನಾದ್ಯಂತ ಮಂಗಳವಾರ ಜನರು ಆತಂಕದಿಂದ ಕಂಗಾಲಾಗಿದ್ದರು, ಒಟ್ಟು ನಗರದಾದ್ಯಂತ 18 ಸಜೀವ ಬಾಂಬ್‌‌ಗಳನ್ನು ಪತ್ತೆ ಹಚ್ಚಿದ ಆರಕ್ಷಕ ಇಲಾಖೆ ಅವುಗಳನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿತ್ತು.

ನಗರದ ವಿವಿಧೆಡೆ ದೊರೆತ ಎಲ್ಲಾ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ ಜನರು ಸಮಾಧಾನದ ನಿಟ್ಟುಸಿರುವ ಬಿಡುವಂತಾಗಿದೆ.

ಅವುಗಳಲ್ಲಿ ಹೆಚ್ಚಿನ ಬಾಂಬ್‌ಗಳನ್ನು ಡೈಮಂಡ್ ನಗರದಲ್ಲಿ ಇರಿಸಲಾಗಿತ್ತು ಎಂದು ಗುಜರಾತ್ ಸರ್ಕಾರ ತಿಳಿಸಿದೆ. ಅದರಲ್ಲೂ ಬಾಂಬ್‌ಗಳನ್ನು ಮರದ ಮೇಲೂ ಇರಿಸಲಾಗಿತ್ತು !

ಹತ್ತು ಬಾಂಬ್‌‌ಗಳನ್ನು ಜನನಿಬಿಡ ಪ್ರದೇಶವಾದ ವಾರಚ್ಚಾ ರಸ್ತೆ ಪ್ರದೇಶದಲ್ಲಿ , ಮೂರು ಬಾಂಬ್‌‌ಗಳನ್ನು ಹೀರಾಭಾಗ್ ಸರ್ಕಲ್‌‌ನಲ್ಲಿ, ಮಿನಿ ಹೀರಾ ಬಜಾರ್ ಮತ್ತು ಭವಾನಿ ಸರ್ಕಲ್‌ನಲ್ಲಿ ಎರಡು ಬಾಂಬ್, ಲಾಭೇಶ್ವರ್‌‌ನಲ್ಲಿ ಹಾಗೂ ಸಂತೋಷ್ ನಗರ್, ಮಾತಾವಾಡಿಯಲ್ಲಿ ತಲಾ ಒಂದು ಬಾಂಬ್ ಇರಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಾತಾವಾಡಿಯಲ್ಲಿ ಮರವೊಂದರಲ್ಲಿ ಬಾಂಬ್ ಅನ್ನು ಇರಿಸಿದ್ದರು. ಲಾಭೇಶ್ವರದಲ್ಲಿ ಪೊಲೀಸ್ ಸ್ಟೇಶನ್ ಸಮೀಪವೇ ಬಾಂಬ್ ಇಟ್ಟಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.

ಆದರೆ ನಗರದಲ್ಲಿ ಪತ್ತೆಯಾಗಿರುವ ಎಲ್ಲಾ 18 ಬಾಂಬ್‌‌ಗಳನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಲಾಗಿದೆ. ಅದೇ ರೀತಿ ಜನರ ಸಹಕಾರ ಪೊಲೀಸ್ ಇಲಾಖೆಗೆ ಅತ್ಯಗತ್ಯವಾಗಿದೆ ಎಂದು ಸೂರತ್ ಪೊಲೀಸ್ ಕಮೀಷನರ್ ಆರ್ಎಂಎಸ್ ಬರಾರ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಮತ್ತಷ್ಟು
ಲಕ್ಷ್ಮೀ ಈಗ ಪುಟ್ಟಪುಟ್ಟ ಹೆಜ್ಜೆ ಇಡುತ್ತಾಳೆ!
ಉಚ್ಚಾಟನೆ ನೋವನ್ನುಂಟುಮಾಡಿದೆ: ಚಟರ್ಜಿ
ರಾಮಸೇತು: ಪರ್ಯಾಯ ಮಾರ್ಗಕ್ಕೆ ಕೇಂದ್ರದ ಚಿಂತನೆ
ಹೈಡ್ ಕಾಯಿದೆ ತಿದ್ದುಪಡಿಗೆ ಎಸ್‌ಪಿ ಒತ್ತಾಯ
ಸೂರತ್‌ನಲ್ಲಿ 15 ಬಾಂಬ್‌ಗಳು ಪತ್ತೆ
ಕದನ ವಿರಾಮ ಉಲ್ಲಂಘನೆ: ಸೈನಿಕ ಹತ್ಯೆ