ಕೋಲ್ಕತಾ: ಕೋಲ್ಕತಾದ ಪ್ರಮುಖ ಬೀದಿಗಳು ಮತ್ತು ಪ್ರಮುಖ ಪ್ರದೇಶಗಳಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆಯ ಇಮೇಲ್ ಬಂದಿರುವ ಹಿನ್ನೆಲೆಯಲ್ಲಿ ಕೋಲ್ಕತಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
ಮಂಗಳವಾರ ರಾತ್ರಿ ಸಮಗ್ರ ಹುಡುಕಾಟ ನಡೆಸಿದರೂ ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ. ಆದರೆ ಯಾವುದೇ ಅವಕಾಶಕ್ಕೂ ಎಡೆಗೊಡದಂತೆ ಪೊಲೀಸರು ಕಟ್ಟುನಿಟ್ಟಿನ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಬೆದರಿಕೆಯೊಡ್ಡುವ ಇಮೇಲ್ ಕಳುಹಿಸಿರುವ ಸಾಲ್ಟ್ ಲೇಕ್ ಪ್ರದೇಶದ ಸೈಬರ್ ಕೆಫೆ ಮಾಲಕನ ಪುತ್ರ ಕೌಶಿಕ್ ಬೋಸ್ ಎಂಬಾತನನ್ನು ವಶ ಪಡಿಸಿಕೊಂಡಿರುವ ಪೊಲೀಸರು ಆತನ ವಿಚಾರಣೆ ನಡೆಸುತ್ತಿದ್ದಾರೆ.
ಸೈಬರ್ ಕೆಫೆಯಿಂದ ಇಮೇಲ್ ಕಳುಹಿಸಿರುವವರ ಪತ್ತೆಗೆ ಸಹಕರಿಸುವುದಾಗಿ ಕೌಶಿಕ್ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇಮೇಲ್ ಕಳುಹಿಸಿದೆ ಎನ್ನಲಾಗಿರುವ ಕಂಪ್ಯೂಟರ್ ಕೌಶಿಕ್ ಹೆಸರಲ್ಲಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಅಲ್ಲದೆ ಸೈಬಲ್ ಕೆಫೆಯನ್ನು ಕಾನೂನು ಬಾಹಿರವಾಗಿ ನಡೆಸಲಾಗುತ್ತಿತ್ತು ಎಂದೂ ಪೊಲೀಸರು ತಿಳಿಸಿದ್ದಾರೆ.
|