ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವೋಟಿಗಾಗಿ ನೋಟು ಪ್ರಕರಣ: ಇಂದು ಸಭೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೋಟಿಗಾಗಿ ನೋಟು ಪ್ರಕರಣ: ಇಂದು ಸಭೆ Search similar articles
PTI
ಸ್ಪೀಕರ್ ಸೋಮನಾಥ್ ಚಟರ್ಜಿ ಅವರಿಂದ ರಚಿಸಲ್ಪಟ್ಟ ಏಳು ಮಂದಿ ಸದಸ್ಯರ ಲೋಕಸಭಾ ಸಮಿತಿಯು 'ವೋಟಿಗಾಗಿ ನೋಟು' ಪ್ರಕರಣದ ಕುರಿತಾಗಿ ಮಾತುಕತೆ ನಡೆಸಲು ಬುಧವಾರ ಸಂಸತ್ ಭವನದಲ್ಲಿ ಸಭೆ ಸೇರಲಿದೆ.

ಮೂವರು ಬಿಜೆಪಿ ಸಂಸದರಾದ ಅಶೋಕ್ ಆರ್ಗಲ್, ಫ್ಯಾಗನ್ ಸಿಂಗ್ ಕುಲಾಸ್ತೆ ಮತ್ತು ಮಹಾವೀರ್ ಬಗೋರಾ ಹಾಗೂ ಕುಟುಕು ಕಾರ್ಯಾಚರಣೆಯನ್ನು ನಡೆಸಿದ ಟಿವಿ ಮಾಧ್ಯಮ ಸಿಎನ್ಎನ್-ಐಬಿಎನ್‌ನಿಂದ ಸಾಕ್ಷಿಗಳನ್ನು ಈ ಸಮಿತಿಯು ಸಂಗ್ರಹಿಸುವ ನಿರೀಕ್ಷೆಯಿದೆ.

ಕಾಂಗ್ರೆಸ್‌ನ ಕಿಶೋರ್ ಚಂದ್ರ ನೇತೃತ್ವದ ಈ ಸಮಿತಿಯು ತನಿಖೆಯ ಭಾಗವಾಗಿ ಅಸಲು ವೀಡಿಯೋ ಹಾಗೂ ಮೈಕ್ ನಕಲುಗಳನ್ನು ವೀಕ್ಷಿಸಲಿದೆ.

ಜುಲೈ 22ರಂದು ಲೋಕಸಭೆಯಲ್ಲಿನ ವಿಶ್ವಾಸಮತ ಗೊತ್ತುವಳಿಯ ವೇಳೆ ತಟಸ್ಥವಾಗಿರುವಂತೆ ಒತ್ತಾಯಿಸಿ ಸಮಾಜವಾದಿ ಪಕ್ಷದ ಸಂಸದರು ಹಣದ ಆಮಿಷವೊಡ್ಡಿದ್ದರು ಎಂಬುದಾಗಿ ಈ ಮೊದಲು ಬಿಜೆಪಿ ಸಂಸದರು ಅಧಿಕೃತ ದೂರು ನೀಡಿದ್ದರು.

ತಪ್ಪಿತಸ್ಥರು ಯಾವುದೇ ಕಾರಣಕ್ಕೂ ನುಣಿಚಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪೀಕರ್ ಚಟರ್ಜಿ ಸ್ಪಷ್ಟಪಡಿಸಿದ್ದರು.

ಸಂಸತ್ತಿನಲ್ಲಿ ಪ್ರದರ್ಶನಗೊಂಡ ಒಂದು ಕೋಟಿ ರೂಪಾಯಿ ಮತ್ತು ವೀಡಿಯೋ ಟೇಪ್‌ಗಳು ಲೋಕಸಭಾ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರಿ ಅವರ ಬಳಿಯಿದ್ದು, ತನಿಖೆಯ ನಂತರ ಇದನ್ನು ಸರಕಾರಕ್ಕೆ ಒಪ್ಪಿಸಲಿದ್ದಾರೆ.

ವಿ.ಕೆ.ಮಲ್ಹೋತ್ರಾ(ಬಿಜೆಪಿ), ಮಹಮ್ಮದ್ ಸಲೀಂ(ಸಿಪಿಎಂ), ರಾಮ್ ಗೋಪಾಲ್ ಯಾದವ್(ಸಮಾಜವಾದಿ ಪಕ್ಷ), ದೇವೇಂದ್ರ ಪ್ರಸಾದ್ ಯಾದವ್(ಆರ್‌ಜೆಡಿ), ರಾಜೇಶ್ ವರ್ಮ(ಬಿಎಸ್‌ಪಿ) ಮತ್ತು ಸಿ.ಕುಪ್ಪುಸ್ವಾಮಿ(ಡಿಎಂಕೆ) ಈ ಸಮಿತಿಯ ಇತರ ಸದಸ್ಯರಾಗಿದ್ದಾರೆ.
ಮತ್ತಷ್ಟು
ಇಮೇಲ್ ಬೆದರಿಕೆ: ಕಟ್ಟೆಚ್ಚರದಲ್ಲಿ ಕೋಲ್ಕತಾ
ಸೂರತ್‌‌ನಲ್ಲಿ 18 ಬಾಂಬ್ ಪತ್ತೆ-ಯಶಸ್ವಿ ನಿಷ್ಕ್ರಿಯ
ಲಕ್ಷ್ಮೀ ಈಗ ಪುಟ್ಟಪುಟ್ಟ ಹೆಜ್ಜೆ ಇಡುತ್ತಾಳೆ!
ಉಚ್ಚಾಟನೆ ನೋವನ್ನುಂಟುಮಾಡಿದೆ: ಚಟರ್ಜಿ
ರಾಮಸೇತು: ಪರ್ಯಾಯ ಮಾರ್ಗಕ್ಕೆ ಕೇಂದ್ರದ ಚಿಂತನೆ
ಹೈಡ್ ಕಾಯಿದೆ ತಿದ್ದುಪಡಿಗೆ ಎಸ್‌ಪಿ ಒತ್ತಾಯ