ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಜೀವ ಬಾಂಬ್ ಭೀತಿ: ವ್ಯಾಕುಲ ಮೌನದಲ್ಲಿ ಸೂರತ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಜೀವ ಬಾಂಬ್ ಭೀತಿ: ವ್ಯಾಕುಲ ಮೌನದಲ್ಲಿ ಸೂರತ್ Search similar articles
ಮಂಗಳವಾರ ಸೂರತ್‌ನಲ್ಲಿ 18 ಬಾಂಬ್‌ಗಳು ಪತ್ತೆಯಾದ ಬಳಿಕ, ವಿಶ್ವಪ್ರಸಿದ್ಧ ವಜ್ರನಗರವು ಇಂದು ವ್ಯಾಕುಲ ಮೌನದಲ್ಲಿದೆ.

ನಿನ್ನೆ ಪತ್ತೆ ಮಾಡಲಾಗಿದ್ದ ಎಲ್ಲಾ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದ್ದು ಸಂಭಾವ್ಯ ದುರಂತವನ್ನು ತಪ್ಪಿಸಲಾಗಿದೆ. ಸ್ಫೋಟಕಗಳು ಎಲ್ಲೆಂದರಲ್ಲಿ ಕಂಡುಬಂದಿರುವುದು ಸೂರತ್ ಜನರನ್ನು ಆತಂಕಕ್ಕೀಡುಮಾಡಿದೆ.

ಬಾಂಬ್‌ಗಳು ಪತ್ತೆಯಾದ ನಂತರ ಶಾಲೆ, ಕಾಲೇಜು, ಪಾರ್ಕ್, ಮಾಲ್ ಹಾಗೂ ಸಿನೇಮಾ ಮಂದಿರಗಳನ್ನು ಮುಚ್ಚಲು ಜಿಲ್ಲಾ ಆಡಳಿತವು ಆದೇಶ ನೀಡಿದ್ದು, ವಜ್ರ ಮತ್ತು ಜವಳಿ ಕೇಂದ್ರಗಳು ಕೂಡಾ ಕಾರ್ಯವನ್ನು ಸ್ಥಗಿತಗೊಳಿಸುವ ಸಾಧ್ಯತೆಯಿದೆ.

ಅಹಮದಾಬಾದ್ ಮತ್ತು ಬೆಂಗಳೂರು ಸರಣಿ ಬಾಂಬ್ ಸ್ಫೋಟ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಬಾಂಬ್ ಪತ್ತೆಗೊಂಡ ಫಲವಾಗಿ, ಸೂರತ್ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.

ಸೂರತ್‌ನ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಇಂದು ಸೂರತ್‌ಗೆ ಆಗಮಿಸಲಿದ್ದಾರೆ.

ಹೆಚ್ಚಿನ ವಜ್ರ ಮೆರುಗು ಕೇಂದ್ರಗಳು ಕೇಂದ್ರೀಕೃತವಾಗಿರುವ ದಕ್ಷಿಣ ಗುಜರಾತ್ ನಗರವಾದ ವರಚ ಪ್ರದೇಶದಲ್ಲಿ ಹೆಚ್ಚಿನ ಬಾಂಬ್‌ಗಳು ಪತ್ತೆಯಾಗಿದ್ದವು.
ಮತ್ತಷ್ಟು
ಮುಂದಿನ ಸಿಬಿಐ ನಿರ್ದೇಶಕರಾಗಿ ಎಂ.ಎಲ್.ಶರ್ಮ
ಸ್ಫೋಟ: ಉಗ್ರರ ಕಾರಸ್ಥಾನ ವಡೋದರ?
ವೋಟಿಗಾಗಿ ನೋಟು ಪ್ರಕರಣ: ಇಂದು ಸಭೆ
ಇಮೇಲ್ ಬೆದರಿಕೆ: ಕಟ್ಟೆಚ್ಚರದಲ್ಲಿ ಕೋಲ್ಕತಾ
ಸೂರತ್‌‌ನಲ್ಲಿ 18 ಬಾಂಬ್ ಪತ್ತೆ-ಯಶಸ್ವಿ ನಿಷ್ಕ್ರಿಯ
ಲಕ್ಷ್ಮೀ ಈಗ ಪುಟ್ಟಪುಟ್ಟ ಹೆಜ್ಜೆ ಇಡುತ್ತಾಳೆ!