ಮುಂಬಯಿಯ ಟ್ರಿಡೆಂಟ್ ಹೋಟೆಲ್‌ನಲ್ಲಿ ಸೆಪ್ಟೆಂಬರ್ 19ರಂದು ನಡೆಯಲಿರುವ ವಿಶೇಷ ರಜತ ಮಹೋತ್ಸವ ಜಾಗತಿಕ ಪ್ರಶಸ್ತಿ ಸಮಾರಂಭದಲ್ಲಿ ಪುರಸ್ಕೃತಗೊಳ್ಳಲಿರುವ ಗಣ್ಯರ ಹೆಸರುಗಳನ್ನು ಪ್ರಿಯದರ್ಶಿನಿ ಅಕಾಡಮಿ ಬಿಡುಗಡೆಗೊಳಿಸಿದೆ.
ಪ್ರಿಯದರ್ಶಿನಿ ಅಕಾಡಮಿಯ ಮುಖ್ಯಸ್ಥ ನಾನಿಕ್ ರೂಪಾನಿ, ಅಕಾಡೆಮಿಯ ಆಡಳಿತ ಸಮಿತಿಯ ಪ್ರಮುಖ ಸದಸ್ಯರಾದ ಉಪಾಧ್ಯಕ್ಷ ಗುಲ್ ಕೃಪಲಾನಿ, ಚರ್ಚ್‌ಗೇಟ್‌ನಲ್ಲಿರುವ ಭಾರತೀಯ ವ್ಯಾಪಾರಿ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪುರಸ್ಕೃತರ ಪಟ್ಟಿಯನ್ನು ಘೋಷಿಸಿದ್ದಾರೆ. ಪೂನಂ ದಿಲ್ಲನ್, ಆರ್.ಎ.ಮಾಶೇಲ್ಕರ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಬ್ಲಾಕ್‌ಬೆರಿ ಅನ್ವೇಷಕ ಜಿಮ್ ಬಾಲ್ಸಿಲಿ, ಬ್ರೋಗ್ನೋಸಿಸ್ ಅನ್ವೇಷಕ ಸ್ಟೀವ್ ಕಿಲೇಲಾ, ಯುಎನ್ಒದ ಮಾಜಿ ಅಧೀನ ಕಾರ್ಯದರ್ಶಿ ಡಾ.ಶಶಿ ತರೂರ್, ಪ್ರಮುಖ ಆರ್ಥೋಪಿಡಿಶಿಯನ್ ಡಾ.ಆರ್.ಎಫ್ ಬೆರ್ಮಾಜಿ ಮತ್ತು ಸಿನಿಮಾ ತಾರೆ ಪ್ರೀತಿ ಝಿಂಟಾ ಪ್ರಿಯದರ್ಶಿನ ಜಾಗತಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯಾಗಿರುವ ಪ್ರಿಯದರ್ಶಿನಿ ಅಕಾಡೆಮಿ, ಕಾರ್ಪೋರೇಟ್‌ನಿಂದ ಸಮಾಜಸೇವೆಯವರೆಗೆ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆಗೈದ ವ್ಯಕ್ತಿಗಳನ್ನು ಗುರುತಿಸಿ ಪುರಸ್ಕರಿಸುತ್ತದೆ. ಅಲ್ಲದೆ, ಅಂತಾರಾಷ್ಟ್ರೀಯ ರಾಯಭಾರಿ, ವಾಣಿಜ್ಯ ನಾಯಕತ್ವ, ಸಾಮಾಜಿಕ ವಾಣಿಜ್ಯ ಆವಿಷ್ಕಾರ, ಮೂಲಸೌಕರ್ಯ, ಹಣಕಾಸು ಮತ್ತು ಪರಿಸರ ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಉತ್ತಮ ಕೊಡುಗೆಯನ್ನು ನೀಡಿದ ಅಂತಾರಾಷ್ಟ್ರೀಯ ವ್ಯಕ್ತಿಗಳನ್ನು ಗುರುತಿಸಿ ಈ ದ್ವೈವಾರ್ಷಿಕ ಪ್ರಶಸ್ತಿಯ ಮೂಲಕ ಗೌರವಿಸುತ್ತದೆ.
ಸಿನಿಮಾ ಕ್ಷೇತ್ರದಲ್ಲಿ ಸಾಧನೆಗೈದ ಸಿನಿಮಾ ಕಲಾವಿದರಿಗೆ ಸ್ಮಿತಾ ಪಾಟೀಲ್ ಮೆಮೋರಿಯಲ್ ಪ್ರಶಸ್ತಿ ನೀಡುವ ಮೂಲಕ, ಕರಾವಿದರನ್ನು ಸಂಸ್ಥೆಯು ಗೌರವಿಸುತ್ತದೆ.
|