ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮೋದಿ ಭೇಟಿ ವೇಳೆಗೆ ಮತ್ತೊಂದು ಸಜೀವ ಬಾಂಬ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೋದಿ ಭೇಟಿ ವೇಳೆಗೆ ಮತ್ತೊಂದು ಸಜೀವ ಬಾಂಬ್ Search similar articles
ಹದಿನೆಂಟು ಬಾಂಬ್‌ಗಳ ಪತ್ತೆಯ ನಂತರ ಸ್ಫೋಟದ ಕುರಿತಾದ ಜನರ ಆತಂಕ ಹಸಿಯಾಗಿರುವಾಗಲೇ, ಜನನಿಬಿಡ ವರಾಚ ರಸ್ತೆಯಲ್ಲಿ 19ನೇ ಸಜೀವ ಬಾಂಬ್ ಪತ್ತೆಯಾಗಿದ್ದು ಜನರ ಭೀತಿಯನ್ನು ಇನ್ನಷ್ಟು ಹೆಚ್ಚಿಸಿದೆ. ಕಾಕತಾಳಿಯವೆಂಬಂತೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಭೇಟಿಯ ದಿನದಂದೇ ಪತ್ತೆಯಾದ ಸಜೀವಬಾಂಬನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಲಾಗಿದೆ.

ಜೀವಂತ ಬಾಂಬ್‌ಗಳನ್ನು ಪತ್ತೆ ಮಾಡಿದ ಸ್ಥಳಗಳಿಗೆ ಭೇಟಿ ನೀಡಿದ ಮೋದಿ, ಭಯೋತ್ಪಾದಕರು ಭಾರತದ ವಿರುದ್ಧ ಪ್ರಬಲ ಹೋರಾಟವನ್ನು ನಡೆಸುತ್ತಿದ್ದು, ಈ ಭಯೋತ್ಪಾದನೆಯ ವಿರುದ್ಧ ಹೋರಾಟವನ್ನು ದೇಶವು ನಡೆಸಬೇಕಾಗಿರುವುದರಿಂದ ದೇಶದ ಜನತೆಯು ಒಗ್ಗಟ್ಟಿನಲ್ಲಿರುವ ಅಗತ್ಯ ಇದೆ ಎಂಬುದಾಗಿ ಒತ್ತಿ ಹೇಳಿದರು.

ಅತಿ ಎಚ್ಚರಿಕೆಯಿಂದಿದ್ದು, 18 ಜೀವಂತ ಬಾಂಬ್‌ಗಳನ್ನು ಪತ್ತೆ ಮಾಡಲು ಸಹಾಯ ಮಾಡಿದ ಸೂರತ್ ಜನತೆಯನ್ನು ಮೋದಿ ಇದೇ ವೇಳೆ ಶ್ಲಾಘಿಸಿದರು.

ಅಲ್ಲದೆ, ಸೂರತ್‌ನಲ್ಲಿ ಕೆಲವು ದಿನಗಳ ಹಿಂದೆ ಪತ್ತೆಯಾದ ಸ್ಫೋಟಕ ತುಂಬಿದ ಕಾರಿನ ಕುರಿತು ಮಾಹಿತಿ ನೀಡಿದವರಿಗೆ ಮತ್ತು ಜೀವಂತ ಬಾಂಬ್ ಇರುವಿಕೆಯನ್ನು ಸೂಚಿಸಿದವರಿಗೆ 21,000 ರೂಪಾಯಿಗಳ ಬಹುಮಾನವನ್ನು ಮೋದಿ ಘೋಷಿಸಿದರು.

ಇದರೊಂದಿಗೆ, ಅಹಮದಾಬಾದ್‌ನಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಿರುವ ಹಾಗೂ ಸೂರತ್‌ನಲ್ಲಿ ಬಾಂಬ್ ಇರಿಸಿರುವವರ ಕುರಿತು ಮಾಹಿತಿ ನೀಡಿದವರಿಗೆ 51 ಲಕ್ಷ ಬಹುಮಾನ ನೀಡಲಾಗುವುದು ಎಂದು ಮೋದಿ ತಿಳಿಸಿದರು.

ನಾಗರಿಕ ಪೂರೈಕಾ ಸಚಿವ ನಾರೋತ್ತಮ ಪಟೇಲ್ ಅವರೊಂದಿಗೆ ಆಗಮಿಸಿದ್ದ ಮೋದಿ, ಸೂರತ್‌ನ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಈ ನಡುವೆ, ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ, ದೇಶದಲ್ಲಿ ಆರ್ಥಿಕವಾಗಿ ಬಲವಾಗಿರುವ ಮುಂಬೈ, ಬೆಂಗಳೂರು ಮತ್ತು ಸೂರತ್‌ಗಳ ಮೇಲೆ ಬಾಂಬ್ ದಾಳಿ ನಡೆಸುವ ಮೂಲಕ ಭಯೋತ್ಪಾದಕರು ಭಾರತವನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.

ಏತನ್ಮಧ್ಯೆ, ಬಾಂಬ್ ಕುರಿತಾದ ಸುಳ್ಳು ಸುದ್ದಿಗಳನ್ನು ಹರಡಿಸದಂತೆ ಮತ್ತು ಎಚ್ಚರಿಕೆಯಿಂದಿರುವಂತೆ ಮೋದಿ ಸೂರತ್ ಜನತೆಗೆ ಇದೇ ವೇಳೆ ಸಲಹೆ ನೀಡಿದರು.
ಮತ್ತಷ್ಟು
ಸೇತುಸಮುದ್ರಂ: ಕೇಂದ್ರದಿಂದ ಸಮಿತಿ ರಚನೆ
ಪ್ರೀತಿ ಸೇರಿದಂತೆ ಐವರಿಗೆ ಪ್ರಿಯದರ್ಶಿನಿ ಪ್ರಶಸ್ತಿ
ಸಜೀವ ಬಾಂಬ್ ಭೀತಿ: ವ್ಯಾಕುಲ ಮೌನದಲ್ಲಿ ಸೂರತ್
ಮುಂದಿನ ಸಿಬಿಐ ನಿರ್ದೇಶಕರಾಗಿ ಎಂ.ಎಲ್.ಶರ್ಮ
ಸ್ಫೋಟ: ಉಗ್ರರ ಕಾರಸ್ಥಾನ ವಡೋದರ?
ವೋಟಿಗಾಗಿ ನೋಟು ಪ್ರಕರಣ: ಇಂದು ಸಭೆ