ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಗಡಿಯಲ್ಲಿ ಪಾಕ್ ಮತ್ತೊಮ್ಮೆ ಕದನವಿರಾಮ ಉಲ್ಲಂಘನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಡಿಯಲ್ಲಿ ಪಾಕ್ ಮತ್ತೊಮ್ಮೆ ಕದನವಿರಾಮ ಉಲ್ಲಂಘನೆ Search similar articles
ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನೀ ಸೈನಿಕರು ಮತ್ತೊಂದು ಬಾರಿ ಕದನ ವಿರಾಮ ಉಲ್ಲಂಘಿಸಿದ್ದು, ಜಮ್ಮು ಕಾಶ್ಮೀರ ಗಡಿರೇಖೆ ಸೇರಿದಂತೆ ಕುಪ್ವಾರ ಕ್ಷೇತ್ರದ ನಹಾರಿಯ ನೆಲೆಯಲ್ಲಿ ಪಾಕಿಸ್ತಾನ ಪಡೆಗಳು ಬುಧವಾರ ಭಾರತೀಯ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಎರಡು ದಿನಗಳ ಹಿಂದೆ ಗುಂಡಿನ ದಾಳಿ ನಡೆದ ನೌಗಾಂವ್ ಪ್ರದೇಶದ ಸಮೀಪದಲ್ಲೇ ಈ ನಹಾರಿಯಾ ಕೂಡ ಇದೆ. ಸೋಮವಾರದ ಘಟನೆಯಲ್ಲಿ ಒಬ್ಬ ಭಾರತೀಯ ಸೈನಿಕ ಬಲಿಯಾಗಿದ್ದರೆ, ದುಸ್ಸಾಹಸಕ್ಕಿಳಿದ ನಾಲ್ವರು ಪಾಕ್ ಸೈನಿಕರನ್ನು ಗುಂಡಿಟ್ಟು ಕೊಲ್ಲಲಾಗಿತ್ತು.

ಈ ತಿಂಗಳಲ್ಲಿ ಕನಿಷ್ಠ ಏಳು ಬಾರಿ ಕದನವಿರಾಮ ಉಲ್ಲಂಘನೆಯ ವರದಿಯಾಗಿದ್ದು, ಕಳೆದ ವಾರ ಪೂಂಚ್ ಜಿಲ್ಲೆಯ ಮೆಂದಾರ್‌ನಲ್ಲಿ ಭಾರತ ಮತ್ತು ಪಾಕಿಸ್ತಾನಿ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು.

ಜುಲೈ 17ರಂದು ಒಂದೇ ದಿನ ಮೂರು ಹಿಂಸಾಚಾರ ನಡೆದಿತ್ತು. ಮೊದಲನೆಯದು ಚೌಕಾಲಿಯಲ್ಲಿ ಪಾಕಿಸ್ತಾನಿ ಪಡೆಗಳು ಎರಡು ಸುತ್ತು ಗುಂಡು ಹಾರಿಸಿದ್ದರು. ಅದೇ ದಿನ ಮೆಂದಾರ್‌ ಪೋನಾ ನೆಲೆಯಲ್ಲಿ ಅನಿರೀಕ್ಷಿತ ಗುಂಡಿನ ದಾಳಿಗೆ ಸೈನಿಕನೊಬ್ಬ ಗಾಯಗೊಂಡಿದ್ದರು. ಮೂರನೆಯದಾಗಿ, ರಾಜೌರಿ ಪೀರ್ ನೆಲೆಯಲ್ಲಿ ಪಾಕಿಸ್ತಾನಿ ಪಡೆಗಳು 40 ಸುತ್ತು ಗುಂಡು ಹಾರಿಸಿದ್ದರು.
ಮತ್ತಷ್ಟು
ಮೋದಿ ಭೇಟಿ ವೇಳೆಗೆ ಮತ್ತೊಂದು ಸಜೀವ ಬಾಂಬ್
ಸೇತುಸಮುದ್ರಂ: ಕೇಂದ್ರದಿಂದ ಸಮಿತಿ ರಚನೆ
ಪ್ರೀತಿ ಸೇರಿದಂತೆ ಐವರಿಗೆ ಪ್ರಿಯದರ್ಶಿನಿ ಪ್ರಶಸ್ತಿ
ಸಜೀವ ಬಾಂಬ್ ಭೀತಿ: ವ್ಯಾಕುಲ ಮೌನದಲ್ಲಿ ಸೂರತ್
ಮುಂದಿನ ಸಿಬಿಐ ನಿರ್ದೇಶಕರಾಗಿ ಎಂ.ಎಲ್.ಶರ್ಮ
ಸ್ಫೋಟ: ಉಗ್ರರ ಕಾರಸ್ಥಾನ ವಡೋದರ?