ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸೂರತ್: 48 ಗಂಟೆಗಳಲ್ಲಿ 20 ಬಾಂಬ್ ಯಶಸ್ವಿ ನಿಷ್ಕ್ರಿಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೂರತ್: 48 ಗಂಟೆಗಳಲ್ಲಿ 20 ಬಾಂಬ್ ಯಶಸ್ವಿ ನಿಷ್ಕ್ರಿಯ Search similar articles
ಸೂರತ್‌ನಲ್ಲಿ ಭಯೋತ್ಪಾದಕರ ಸ್ಫೋಟ ಸಂಚು ಜನರನ್ನು ಆತಂಕದ ಮಡಿಲಿಗೆ ದೂಡಿದೆ, ಇದೀಗ ಕಳೆದ 48ಗಂಟೆಗಳಲ್ಲಿ ಒಟ್ಟು 20 ಬಾಂಬ್ ದೊರೆತಿದ್ದು, ಎಲ್ಲವನ್ನೂ ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಲಾಗಿದೆ.

ಬುಧವಾರ ದೊರೆತ 20ನೇ ಬಾಂಬ್ ಅನ್ನು ಸೂರತ್‌ನ ಕಾಪೋದಾರಾ ಪ್ರದೇಶದ ಮರದ ಮೇಲೆ ಇರಿಸಲಾಗಿತ್ತು, ಈ ಘಟನೆಗೂ ಮುನ್ನ ಬುಧವಾರದಂದು ಡೈಮಂಡ್ ನಗರದ ಮರದಲ್ಲೂ ಇದೀ ರೀತಿಯಲ್ಲಿ ಬಾಂಬ್ ಅನ್ನು ಇಡಲಾಗಿತ್ತು.

ಬೆಂಗಳೂರು ಮತ್ತು ಅಹಮದಾಬಾದ್‌ಗಳಲ್ಲಿ ಸರಣಿಯಾಗಿ ಬಾಂಬ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ರಾವತ್‌ಭಾಟಾ ಪ್ರದೇಶದಲ್ಲಿನ ರಾಜಸ್ಥಾನ್ ಅಟೊಮಿಕ್ ಪವರ್ ಸ್ಟೇಶನ್‌ಗೆ ಬಿಗಿ ಭದ್ರತೆಯನ್ನು ನೀಡಲಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಎಲ್ಲಾ ಆಯಾಕಟ್ಟಿನ ಸ್ಥಳಗಳಲ್ಲಿ ಹೆಚ್ಚುವರಿಯಾಗಿ ಕಮಾಂಡೋಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಸಿ.ಪಿ.ಜಾಂಬ್ ಹೇಳಿದರು.

ಸೂರತ್‌ ಹಾಗೂ ಅಹಮದಾಬಾದ್‌ಗಳಲ್ಲಿ ನಡೆದ ಬಾಂಬ್ ಸ್ಫೋಟ ಮತ್ತು ಪತ್ತೆ ಪ್ರಕರಣದ ಬಳಿಕ ಕಳೆದ ಎರಡು ದಿನಗಳಲ್ಲಿ ರಾಜ್ಯದಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ಮತ್ತು ಗುಪ್ತಚರ ಸಂಸ್ಥೆ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಾಗಿತ್ತು.

ಸೂರತ್‌ನಾದ್ಯಂತ ಪತ್ತೆಯಾದ 20 ಬಾಂಬ್‌ಗಳನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ವರಾಚ್ಚಾ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿದ ದಿನದಂದು ಪತ್ತೆಯಾದ ಸಜೀವಬಾಂಬನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಲಾಗಿತ್ತು.

ಜೀವಂತ ಬಾಂಬ್‌ಗಳನ್ನು ಪತ್ತೆ ಮಾಡಿದ ಸ್ಥಳಗಳಿಗೆ ಭೇಟಿ ನೀಡಿದ್ದ ಮೋದಿ, ಭಯೋತ್ಪಾದಕರು ಭಾರತದ ವಿರುದ್ಧ ಪ್ರಬಲ ಹೋರಾಟವನ್ನು ನಡೆಸುತ್ತಿದ್ದು, ಈ ಭಯೋತ್ಪಾ ದನೆಯ ವಿರುದ್ಧ ಹೋರಾಟವನ್ನು ದೇಶವು ನಡೆಸಬೇಕಾಗಿರುವುದರಿಂದ ದೇಶದ ಜನತೆಯು ಒಗ್ಗಟ್ಟಿನಲ್ಲಿರುವ ಅಗತ್ಯ ಇದೆ ಎಂದು ಹೇಳಿದ್ದರು.
ಮತ್ತಷ್ಟು
ಗಡಿಯಲ್ಲಿ ಪಾಕ್ ಮತ್ತೊಮ್ಮೆ ಕದನವಿರಾಮ ಉಲ್ಲಂಘನೆ
ಮೋದಿ ಭೇಟಿ ವೇಳೆಗೆ ಮತ್ತೊಂದು ಸಜೀವ ಬಾಂಬ್
ಸೇತುಸಮುದ್ರಂ: ಕೇಂದ್ರದಿಂದ ಸಮಿತಿ ರಚನೆ
ಪ್ರೀತಿ ಸೇರಿದಂತೆ ಐವರಿಗೆ ಪ್ರಿಯದರ್ಶಿನಿ ಪ್ರಶಸ್ತಿ
ಸಜೀವ ಬಾಂಬ್ ಭೀತಿ: ವ್ಯಾಕುಲ ಮೌನದಲ್ಲಿ ಸೂರತ್
ಮುಂದಿನ ಸಿಬಿಐ ನಿರ್ದೇಶಕರಾಗಿ ಎಂ.ಎಲ್.ಶರ್ಮ