ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟದ ಹೊಣೆಯನ್ನು ಇಂಡಿಯನ್ ಮುಜಾಹಿದೀನ್ ವಹಿಸಿಕೊಂಡ ಬೆನ್ನಲ್ಲೇ, ಇದೀಗ ಮತ್ತೊಂದು ಉಗ್ರಗಾಮಿ ಸಂಘಟನೆಯಾದ ಹರ್ಕತ್ ಉಲ್ ಜಿಹಾದ್ ಇಸ್ಲಾಮಿ(ಹುಜಿ) ಕೂಡ ಹೊಣೆ ಹೊತ್ತಿದೆ.
ಅಹಮದಾಬಾದ್ ಸ್ಫೋಟದ ಹೊಣೆ ಹೊತ್ತಿರುವ ಹುಜಿ ಸಂಘಟನೆಯ ಪತ್ರವನ್ನು ಗುಜರಾತ್‌ನ ಟಿವಿ9 ಚಾನೆಲ್ ಬುಧವಾರ ಸ್ವೀಕರಿಸಿತ್ತು.
ಸ್ಫೋಟಕ್ಕೂ ಮುನ್ನ ಇಂಡಿಯನ್ ಮುಜಾಹಿದೀನ್ ಬೆಂಗಳೂರು ಮತ್ತು ಅಹಮದಾಬಾದ್ ಸ್ಫೋಟದ ಹೊಣೆ ಹೊತ್ತು ಹಲವಾರು ಮಾಧ್ಯಮಗಳಿಗೆ ಇ-ಮೇಲ್ ಮೂಲಕ ಸಂದೇಶ ರವಾನಿಸಿತ್ತು.
ಮಂಗಳವಾರದಂದು ಪೊಲೀಸರು ಸುಮಾರು 18 ಸಜೀವ ಬಾಂಬ್‌ಗಳನ್ನು ಪತ್ತೆ ಹಚ್ಚಿ ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಲಾಗಿತ್ತು, ಅಲ್ಲದೇ ಸ್ಫೋಟಕ ತುಂಬಿದ್ದ ಎರಡು ಕಾರುಗಳನ್ನು ಸೂರತ್‌ನಲ್ಲಿ ವಶಪಡಿಸಿಕೊಂಡಿದ್ದರು.
ಅಲ್ಲದೇ ಬಾಂಬ್ ಪತ್ತೆ ಕಾರ್ಯ ಬುಧವಾರವೂ ಮುಂದುವರಿದಿದ್ದು, ಇಂದು 20ನೇ ಸಜೀವ ಬಾಂಬ್ ಅನ್ನು ಪತ್ತೆ ಹಚ್ಚಿ ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಲಾಗಿತ್ತು. ಸೂರತ್‌ನಾ ದ್ಯಂತ ಕಳೆದ 48 ಗಂಟೆಗಳಲ್ಲಿ ಒಟ್ಟು 20 ಸಜೀವ ಬಾಂಬ್‌ಗಳನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸುವ ಮೂಲಕ ಭಾರೀ ಅನಾಹುತವನ್ನು ತಪ್ಪಿಸಿದಂತಾಗಿದೆ.
ಆ ನಿಟ್ಟಿನಲ್ಲಿ ಅಹಮದಾಬಾದ್ ಸ್ಫೋಟದ ಕುರಿತು 25 ಭಯೋತ್ಪಾದಕ ನಿಗ್ರಹ ದಳದ ತಂಡ ತನಿಖೆಯನ್ನು ಆರಂಭಿಸಿವೆ. ಬಾಂಬ್ ಸ್ಫೋಟದ ತನಿಖೆಗೆ ಭಯೋತ್ಪಾದಕ ನಿಗ್ರಹ ದಳ(ಎಟಿಎ)ಕ್ಕೆ ಮುಂಬೈ ಕ್ರೈಂ ಬ್ರಾಂಚ್ ಕೂಡ ನೆರವು ನೀಡುವುದಾಗಿ ಭರವಸೆ ನೀಡಿದೆ.
|