ಕಳೆದ ಎರಡು ದಿನಗಳಿಂದ ಹಲವು ಜೀವಂತ ಬಾಂಬ್‌ಗಳ ಪತ್ತೆಯ ನಂತರ ಆತಂಕಕ್ಕೊಳಗಾಗಿದ್ದ ಸೂರತ್ ಜನ ಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ.
ಜೀವಂತ ಬಾಂಬ್‌ಗಳ ಸಂಖ್ಯೆಯು ಗಂಟೆ ಗಂಟೆಗೂ ಹೆಚ್ಚುತ್ತಿರುವ ವರದಿಗಳಿಂದಾಗಿ ಸೂರತ್‌ನಲ್ಲಿ ಶಾಲೆ, ಕಾಲೇಜು ಎಲ್ಲವೂ ಸ್ಥಗಿತಗೊಂಡಿತ್ತು. ಗುರುವಾರದಿಂದ ಶಾಲೆ ಮತ್ತು ಕಾಲೇಜುಗಳು ಮತ್ತೆ ಪುನರಾರಂಭಗೊಳ್ಳಲಿವೆ.
ಶಾಪಿಂಗ್ ಮಾಲ್ ಮತ್ತು ಸಿನಿಮಾ ಮಂದಿರಗಳು ಎಂದಿನಂತೆ ವಹಿವಾಟು ನಡೆಸಲಿದೆ.
ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಮತ್ತು ಸೂರತ್‌ನಲ್ಲಿನ 22 ಜೀವಂತ ಬಾಂಬ್‌ಗಳ ಕುರಿತು ತನಿಖೆ ನಡೆಸುವಲ್ಲಿ ಕೇಂದ್ರ ಗೃಹ ಸಚಿವಾಲಯವು ಗುಜರಾತ್ ಸರಕಾರಿ ಅಧಿಕಾರಿಗಳೊಂದಿಗೆ ಸಂಪರ್ಕವಿರಿಸಿಕೊಂಡಿದೆ.
ಆದರೆ, ಹೆಚ್ಚಿನ ಗುಜರಾತ್ ಪೊಲೀಸ್ ಹುದ್ದೆಯು ಖಾಲಿ ಇರುವುದರಿಂದ ಪೊಲೀಸರ ಕೊರತೆಯಿಂದಾಗಿ ತನಿಖೆಗೆ ತಡೆಯುಂಟಾಗುತ್ತಿದೆ.
ಈ ನಿಟ್ಟಿನಲ್ಲಿ, ಖಾಲಿ ಇರುವ ಪೊಲೀಸ್ ಹುದ್ದೆಯನ್ನು ಭರ್ತಿ ಮಾಡಲು ನೇಮಕ ಪ್ರಕ್ರಿಯೆಯನ್ನು ಪ್ರಾರಂಭಿಸಲು ಎಲ್ಲಾ ರಾಜ್ಯ ಸರಕಾರಗಳಿಗೆ ಕರೆ ನೀಡಲು ಕೇಂದ್ರವು ಚಿಂತಿಸುತ್ತಿದೆ.
|