ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಬೆಂಗಳೂರು, ಸೂರತ್ ಬಾಂಬ್‌ಗಳಲ್ಲಿ ಅಲ್‌ಖೈದಾ ಕೈವಾಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರು, ಸೂರತ್ ಬಾಂಬ್‌ಗಳಲ್ಲಿ ಅಲ್‌ಖೈದಾ ಕೈವಾಡ Search similar articles
ಪ್ರಮುಖ ಉಗ್ರಗಾಮಿ ಸಂಘಟನೆ ಅಲ್‌ಖೈದಾವು ಪ್ರಸಕ್ತ ಭಾರತದಲ್ಲಿ ಕಾರ್ಯನಿರ್ವಹಿಸದೇ ಇರಬಹುದು ಆದರೆ, ಬೆಂಗಳೂರು ಮತ್ತು ಸೂರತ್‌ನಲ್ಲಿ ಬಳಸಿದ ಬಾಂಬ್‌ಗಳಲ್ಲಿ ಅಲ್‌ಖೈದಾ ಹೆಜ್ಜೆ ಗುರುತುಗಳು ವ್ಯಕ್ತವಾಗಿವೆ ಎಂದು ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಮತ್ತು ಸೂರತ್‌ಗಳಲ್ಲಿ ಬಾಂಬ್ ಸಂಯೋಜಿಸಲು ಬಳಸಲಾದ ಇಂಟಿಗ್ರೇಟೆಡ್ ಚಿಪ್ಸ್‌ಗಳು ಖೈದಾ ಸಂಬಂಧಿತ ಇಂಡೋನೇಶಿಯಾ ಉಗ್ರಗಾಮಿ ಗುಂಪು ಜೆಮ್ಮಾ ಇಸ್ಲಾಮಿಯಾ(ಜೆಐ) ತಂತ್ರಜ್ಞಾನದಿಂದ ಪೂರ್ಣ ಮಾಡಿರುವುದಾಗಿದೆ. ಭಾರತದಲ್ಲಿ ಮೊದಲ ಬಾರಿಗೆ ಈ ತಂತ್ರಜ್ಞಾನವನ್ನು ಬಳಸಲಾಗಿದೆ.

ಭಾರತದಲ್ಲಿ ಈ ತಂತ್ರಜ್ಞಾನವನ್ನು ಬಳಸುವ ನಿಟ್ಟಿನಲ್ಲಿ, ಸ್ಥಳೀಯ ಉಗ್ರಗಾಮಿಗಳು ತರಬೇತಿಗಾಗಿ ಬಾಂಗ್ಲಾದೇಶ ಮೂಲಕ ಇಂಡೋನೇಷ್ಯಾಗೆ ತೆರಳಿರುವ ಸಾಧ್ಯತೆಯಿದೆ ಎಂಬುದು ಗುಪ್ತಚರ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಸೂರತ್‌ನಲ್ಲಿ ಮತ್ತು ಬೆಂಗಳೂರಿನಲ್ಲಿ ಬಳಸಿದ ಇಂಟಗ್ರೇಟೆಡ್ ಸರ್ಕಿಟ್ ಸ್ಫೋಟಕಗಳು ಸಮಾನವಾಗಿರುವುದು ಕಂಡುಬಂದಿದ್ದು, ಲಷ್ಕರ್ ಇ ತೊಯಿಬಾ ಮತ್ತು ಜೈಶ್ ಇ ಮಹಮ್ಮದ್‌ನೊಂದಿಗೆ ಅಲ್‌ಖೈದಾ ಸಂಬಂಧವು ಹೊಸತೇನಲ್ಲ ಆದರೆ, ಇದು ದಕ್ಷಿಣ ಏಷ್ಯಾದ ಜೆಐನೊಂದಿಗೆ ಸಂಬಂಧ ವೃದ್ಧಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ಜುಲೈ 25ರಂದು ಬೆಂಗಳೂರಿನಲ್ಲಿ ಬಳಸಲಾದ ಇಂಟಿಗ್ರೇಟೆಡ್ ಚಿಪ್ಸ್ ಸ್ಫೋಟಕದಲ್ಲಿ ಜೆಹಾದಿಗಳು ಯಶಸ್ವಿಯಾದರೂ, ಬಾಂಬ್‌ನಲ್ಲಿ ಬಳಸಲಾದ ಚಿಪ್‌ನಲ್ಲಿ ಕೆಲವು ತಾಂತ್ರಿಕ ದೋಷಗಳಿದ್ದ ಪರಿಣಾಮವಾಗಿ ಸೂರತ್‌ನಲ್ಲಿ ಬಾಂಬ್ ಸ್ಫೋಟಗೊಳ್ಳಲಿಲ್ಲ.

ಆದರೆ ಸೂರತ್ ಬಾಂಬುಗಳಲ್ಲಿ ಬಳಸಲಾಗಿದ್ದ ಸರ್ಕ್ಯೂಟ್‌ಗಳು ಅಹಮದಾಬಾದ್ ಸ್ಫೋಟದಲ್ಲಿ ಬಳಸಿದವುಗಳಿಗಿಂತ ಭಿನ್ನವಾಗಿದ್ದವು. ಸೂರತ್ ಬಾಂಬ್‌ಗಳಲ್ಲಿ ಚಿಪ್‌ಗಳನ್ನು ಬಳಸಲಾಗಿದ್ದರೆ, ಅಹಮದಾಬಾದ್ ಬಾಂಬ್‌ಗಳಲ್ಲಿ ಅನಲಾಗ್ ಟೈಮರ್ ಸಾಧನಗಳನ್ನು ಉಪಯೋಗಿಸಲಾಗಿತ್ತು.

ಸೂರತ್‌ನಲ್ಲಿ ಬಾಂಬ್‌ಗಳನ್ನು ಮರದ ಮೇಲೆ, ಬಿಲ್‌ಬೋರ್ಡ್‌ಗಳ ಮರೆಯಲ್ಲಿ ಮುಂತಾದೆಡೆ ಇರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಈ ಕುರಿತು ತನಿಖೆ ನಡೆಸಲು ತೀವ್ರ ತೊಂದರೆ ಎದುರಿಸುತ್ತಿದ್ದು, ಫೋರೆನ್ಸಿಕ್ ತಜ್ಞರ ಪೂರ್ಣ ವರದಿಯನ್ನೇ ಅವರು ನೆಚ್ಚಿಕೊಂಡಿದ್ದಾರೆ.
ಮತ್ತಷ್ಟು
ಸೂರತ್ ಜನಜೀವನ ಸಹಜ ಸ್ಥಿತಿಗೆ
ಗುಂಡಿನ ದಾಳಿ: ಆರೋಪ ತಳ್ಳಿ ಹಾಕಿದ ಪಾಕ್
ಸೂರತ್‌ನಲ್ಲಿ ಬಾಂಬುಗಳೇಕೆ ಸಿಡಿಯಲಿಲ್ಲ?
ಅಹಮದಾಬಾದ್ ಸ್ಫೋಟಕ್ಕೆ ತಾನೂ ಹೊಣೆ: ಹುಜಿ
ಸೂರತ್: 48 ಗಂಟೆಗಳಲ್ಲಿ 20 ಬಾಂಬ್ ಯಶಸ್ವಿ ನಿಷ್ಕ್ರಿಯ
ಗಡಿಯಲ್ಲಿ ಪಾಕ್ ಮತ್ತೊಮ್ಮೆ ಕದನವಿರಾಮ ಉಲ್ಲಂಘನೆ