ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 'ಮಾಯಾ' ಪ್ರಧಾನಿ ಆಕಾಂಕ್ಷೆಗೆ ಕಾರಟ್, ಚೌತಾಲಾ ತಣ್ಣೀರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಮಾಯಾ' ಪ್ರಧಾನಿ ಆಕಾಂಕ್ಷೆಗೆ ಕಾರಟ್, ಚೌತಾಲಾ ತಣ್ಣೀರು Search similar articles
ಮುಂಬರುವ ಲೋಕಸಭಾ ಚುನವಾಣೆಯಲ್ಲಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಪ್ರಧಾನಮಂತ್ರಿ ಅಭ್ಯರ್ಥಿಯಾಗುವ ಆಕಾಂಕ್ಷೆಗೆ ಆರಂಭದಲ್ಲೇ ತಣ್ಣೀರು ಬಿದ್ದಿದ್ದು, ಯುಎನ್‌ಪಿಎಯ ಎರಡು ಪಕ್ಷಗಳು ಆಕೆಯ ಮುಂದಾಳುತ್ವವನ್ನು ವಿರೋಧಿಸಿ ಹೇಳಿಕೆ ನೀಡಿರುವುದರೊಂದಿಗೆ, ತೃತೀಯ ಶಕ್ತಿಯಲ್ಲಿ ಮತ್ತೊಂದು ಬಾರಿ ಒಡಕು ಕಾಣಿಸಿಕೊಂಡಿದೆ.

ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಗುರುವಾರ ಮಾತನಾಡಿ, ಬಿಎಸ್‌ಪಿಯೊಂದಿಗಿನ ಎಡಪಕ್ಷಗಳ ಸಂಬಂಧವು ಮತದಾನದ ಹೊಂದಾಣಿಕೆಯಾಗಿದ್ದು, ಆಕೆ ಪ್ರಧಾನಮಂತ್ರಿ ಅಭ್ಯರ್ಥಿಯಲ್ಲ ಎಂದು ತಿಳಿಸಿದ್ದಾರೆ.

ಈಗಿರುವ ಮೈತ್ರಿಕೂಟವು ಹೊಂದಾಣಿಕೆಯು ಮೂರನೇ ಪರ್ಯಾಯ ಶಕ್ತಿಯಲ್ಲ ಎಂದು ಹೇಳಿದ ಕಾರಟ್, ತೃತೀಯ ರಂಗವು ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಆಧಾರದಲ್ಲಿರುತ್ತದೆ ಎಂದು ತಿಳಿಸಿದರು.

ಚುನಾವಣೆಯ ನಂತರ ಯುಪಿಎಯೊಂದಿಗಿನ ಮೈತ್ರಿಯ ಸಾಧ್ಯತೆಯನ್ನು ತಿರಸ್ಕರಿಸಿರುವ ಕಾರಟ್, ಚುನಾವಣೆಯ ನಂತರ ಎಡಪಕ್ಷಗಳು ಯುಪಿಎ ಸರಕಾರದೊಂದಿಗೆ ಯಾವುದೇ ಮೈತ್ರಿಯನ್ನು ಹೊಂದಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ, ಐಎನ್ಎಲ್‌ಡಿ ಕೂಡ ಮಾಯಾವತಿ ಅಭ್ಯರ್ಥನವನ್ನು ವಿರೋಧಿಸಿದ್ದು, ಆಕೆ ಪ್ರಧಾನಿಯಾಗುವ ಪ್ರಸ್ತಾಪವನ್ನು ವಿರೋಧಿಸುವುದಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಜಯ್ ಚೌತಾಲಾ ತಿಳಿಸಿದ್ದಾರೆ. ಆದರೆ ಬಿಎಸ್‌ಪಿ ಜೊತೆಗೆ ಚುನಾವಣಾ ಪೂರ್ವ ಹೊಂದಾಣಿಕೆಗೆ ತಮ್ಮ ಪಕ್ಷವು ಮುಕ್ತವಾಗಿದೆ ಎಂದೂ ಅವರು ಹೇಳಿದರು.
ಮತ್ತಷ್ಟು
ಸ್ಫೋಟ: ಪೂನಾ ಟಾಲ್ ಗೇಟ್‌ನಲ್ಲಿ ಕಾರಿನ ಸಿಸಿಟಿವಿ ಚಿತ್ರ
ಬೆಂಗಳೂರು, ಸೂರತ್ ಬಾಂಬ್‌ಗಳಲ್ಲಿ ಅಲ್‌ಖೈದಾ ಕೈವಾಡ
ಸೂರತ್ ಜನಜೀವನ ಸಹಜ ಸ್ಥಿತಿಗೆ
ಗುಂಡಿನ ದಾಳಿ: ಆರೋಪ ತಳ್ಳಿ ಹಾಕಿದ ಪಾಕ್
ಸೂರತ್‌ನಲ್ಲಿ ಬಾಂಬುಗಳೇಕೆ ಸಿಡಿಯಲಿಲ್ಲ?
ಅಹಮದಾಬಾದ್ ಸ್ಫೋಟಕ್ಕೆ ತಾನೂ ಹೊಣೆ: ಹುಜಿ