ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಾಳೆ ಸೂರ್ಯಗ್ರಹಣ: ನಾಸಾದಿಂದ ನೇರ ಪ್ರಸಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾಳೆ ಸೂರ್ಯಗ್ರಹಣ: ನಾಸಾದಿಂದ ನೇರ ಪ್ರಸಾರ Search similar articles
ಆಗಸ್ಟ್ ಒಂದರ ಶುಕ್ರವಾರ ನಡೆಯಲಿರುವ ಖಂಡಗ್ರಾಸ ಸೂರ್ಯಗ್ರಹಣದ ಸಂಪೂರ್ಣ ನೇರ ಪ್ರಸಾರವನ್ನು ನೀಡಲು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ನಿರ್ಧರಿಸಿರುವುದರಿಂದ, ಭಾರತ ಸೇರಿದಂತೆ ವಿಶ್ವದಾದ್ಯಂತ ಜನರು ಸೂರ್ಯಗ್ರಹಣ ವೀಕ್ಷಿಸಬಹುದಾಗಿದೆ.

ಶುಕ್ರವಾರ ಮಧ್ಯಾಹ್ನ ಸಂಭವಿಸಲಿರುವ ಸೂರ್ಯಗ್ರಹಣದ ಹೆಚ್ಚಿನ ಭಾಗವು ಭಾರತದ ಈಶಾನ್ಯ ಭಾಗದಲ್ಲಿ ಗೋಚರವಾಗಲಿದೆ.

ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಭಾರತದ ಈಶಾನ್ಯ ಪ್ರದೇಶದಲ್ಲಿ ಸೂರ್ಯಗ್ರಹಣದ ಸ್ವಲ್ಪ ಭಾಗವನ್ನು ವೀಕ್ಷಿಸಬಹುದಾಗಿದೆ ಎಂದು ನೆಹರೂ ತಾರಾಲಯ ನಿರ್ದೇಶಕಿ ರತ್ನಶ್ರೀ ಹೇಳಿದ್ದಾರೆ.

ಅತಿ ಹೆಚ್ಚು ಮತ್ತು ಕೊನೆಯ ಹಂತದ ಗ್ರಹಣವು ನಾಗಾಲ್ಯಾಂಡ್ ಮತ್ತು ಮಿಜೋರಾಂ ಹೊರತುಪಡಿಸಿ ದೇಶದ ಅನೇಕ ಭಾಗಗಳಲ್ಲಿ ಗೋಚರವಾಗಲಿದ್ದು, ಹೆಚ್ಚಿನ ಭಾಗವು ಅಸ್ಸಾಂನ ಸಿಬ್ಸಾಗರ್‌ನಲ್ಲಿ ಗೋಚರವಾಗಲಿದೆ.

ಉತ್ತರ ಗ್ರೀನ್‌ಲ್ಯಾಂಡ್‌, ಆರ್ಕಟಿಕ್, ಕೇಂದ್ರ ರಶ್ಯಾದ ಮಂಗೋಲಿಯಾ ಮತ್ತು ಚೀನಾ ಸೇರಿದಂತೆ ಕೆನಡಾದಲ್ಲಿ ಸೂರ್ಯಗ್ರಹಣ ವೀಕ್ಷಣೆ ಸಾಧ್ಯವಾಗಲಿದೆ. ಮುಂದಿನ ಸೂರ್ಯಗ್ರಹಣವು 2009 ಜನವರಿ 26ರಂದು ನಡೆಯಲಿದ್ದು, ಈ ಅಪೂರ್ವ ಗೋಚರವು ಭಾರತದ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ಕಾಣಲು ಸಾಧ್ಯವಾಗಲಿದೆ.

ಶುಕ್ರವಾರದ ಸೂರ್ಯಗ್ರಹಣವನ್ನು ದೇಶದ ಎಲ್ಲಾ ಭಾಗಗಳಿಂದ ವೀಕ್ಷಿಸಬಹುದಾಗಿದ್ದು, ದೆಹಲಿಯಲ್ಲಿ ಸಂಜೆ 4.03-5.56, ಮುಂಬಯಿಯಲ್ಲಿ 4.27-6.03, ಚೆನ್ನೈನಲ್ಲಿ 4.40-6.07, ಕೋಲ್ಕತ್ತಾದಲ್ಲಿ 4.18-06.02 ವರೆಗಿನ ಅವಧಿಯಲ್ಲಿ ಗೋಚರವಾಗಲಿದೆ.
ಮತ್ತಷ್ಟು
'ಮಾಯಾ' ಪ್ರಧಾನಿ ಆಕಾಂಕ್ಷೆಗೆ ಕಾರಟ್, ಚೌತಾಲಾ ತಣ್ಣೀರು
ಸ್ಫೋಟ: ಪೂನಾ ಟಾಲ್ ಗೇಟ್‌ನಲ್ಲಿ ಕಾರಿನ ಸಿಸಿಟಿವಿ ಚಿತ್ರ
ಬೆಂಗಳೂರು, ಸೂರತ್ ಬಾಂಬ್‌ಗಳಲ್ಲಿ ಅಲ್‌ಖೈದಾ ಕೈವಾಡ
ಸೂರತ್ ಜನಜೀವನ ಸಹಜ ಸ್ಥಿತಿಗೆ
ಗುಂಡಿನ ದಾಳಿ: ಆರೋಪ ತಳ್ಳಿ ಹಾಕಿದ ಪಾಕ್
ಸೂರತ್‌ನಲ್ಲಿ ಬಾಂಬುಗಳೇಕೆ ಸಿಡಿಯಲಿಲ್ಲ?