ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಹಮದಾಬಾದ್ ಸ್ಫೋಟ - ಐಎಸ್‌ಐ ಕೈವಾಡ ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಹಮದಾಬಾದ್ ಸ್ಫೋಟ - ಐಎಸ್‌ಐ ಕೈವಾಡ ? Search similar articles
ಗುಜರಾತ್‌ನ ಅಹಮದಾಬಾದ್‌ನಲ್ಲಿ ಜು.26ರಂದು ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಹಿಂದೆ ಪಾಕಿಸ್ತಾನದ ಐಎಸ್ಐ ಕೈವಾಡ ಇರುವುದು ಖಚಿತವಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಹಮದಾಬಾದ್‌ ಸರಣಿ ಬಾಂಬ್ ಸ್ಫೋಟದ ಕುರಿತು ಗುಜರಾತ್ ಕ್ರೈಂ ಬ್ರಾಂಚ್ ಪೊಲೀಸರು ತೀವ್ರವಾಗಿ ತನಿಖೆ ನಡೆಸುತ್ತಿದ್ದು, ಸ್ಫೋಟದ ಹಿಂದೆ ಐಎಸ್‌ಐ ಕೈವಾಡ ಇರುವುದಾಗಿ ಶಂಕಿಸಿದ್ದಾರೆ. ಅಲ್ಲದೇ ಸ್ಫೋಟದ ಬಳಿಕ ಆರೋಪಿಗಳು ಪಾಕಿಸ್ತಾನಕ್ಕೆ ದೂರವಾಣಿ ಕರೆ ಮಾಡಿರುವುದಾಗಿಯೂ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಏಳು ಮಂದಿ ಫೋಟಾ ಆರೋಪಿತರನ್ನು ಪ್ರಶ್ನೆಗೆ ಒಳಪಡಿಸಲಾಗಿದೆ. ಅವರೆಲ್ಲ ಭೂಗತದೊರೆ ದಾವೂದ್ ಇಬ್ರಾಹಿಂನ ಸಹಚರರಾಗಿದ್ದಾರೆ.

ಅಹಮದಾಬಾದ್ ಸ್ಫೋಟದಲ್ಲಿ ಪಾಕಿಸ್ತಾನದ ಶಾಮೀಲಾತಿ ಇರುವುದಾಗಿ ಇಲಾಖೆ ಹೇಳುತ್ತಿದ್ದು, ಆ ನಿಟ್ಟಿನಲ್ಲಿ ಪೊಲೀಸರು ಡಿಟೋನೇಟರ್ಸ್‌‌ಗಳನ್ನು ಪರಿಶೀಲಿಸಿದಾಗ ಅದು ಆಂಧ್ರಪ್ರದೇಶದಲ್ಲಿ ಸ್ಫೋಟಕ್ಕೆ ಉಪಯೋಗಿಸಿದ ಮಾದರಿಯದ್ದಾಗಿದೆ ಎಂದು ಹೇಳಿದ್ದಾರೆ.

ಅಲ್ಲದೇ ಸೂರತ್‌ನಲ್ಲಿ ಸ್ಫೋಟಕ ತುಂಬಿರುವ ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದು, ಅವುಗಳನ್ನು ಮುಂಬೈಯಿಂದ ಕಳವು ಮಾಡಿದ್ದಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಮುಂಬಯಿನಿಂದ ಕದ್ದು ಸೂರತ್‌ನಲ್ಲಿ ಸ್ಫೋಟಕ ತುಂಬಿಸಿ ಅಲ್ಲಲ್ಲಿ ನಿಲ್ಲಿಸಲಾಗಿದ್ದ ನಾಲ್ಕು ಕಾರುಗಳಲ್ಲಿ ಒಂದು ಕಾರಿನ ಚಿತ್ರವನ್ನು ಪೂನಾದ ಟಾಲ್‌ಗೇಟ್‌ನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮರಾವು ಸೆರೆ ಹಿಡಿದಿದೆ. ಆದರೆ, ಇದರಲ್ಲಿ ಕಾರಿನ ಚಾಲಕನ ಚಿತ್ರವನ್ನು ಸೆರೆಹಿಡಿಯಲಾಗಿದೆಯೇ ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿದುಬಂದಿಲ್ಲ.

ಈವರೆಗೆ ಸಂಗ್ರಹಿಸಲಾದ ಸಾಕ್ಷಿಗಳನ್ನು ಆಧರಿಸಿ, ಜುಲೈ ಎರಡನೇ ವಾರದಲ್ಲಿ ಈ ಸ್ಫೋಟಕ ತುಂಬಿದ ಕಾರನ್ನು ಮುಂಬಯಿನಿಂದ ಕದ್ದು ನಂತರ ಪೂನಾ ಮೂಲಕ ಗುಜರಾತಿಗೆ ತರಲಾಗಿತ್ತು ಎಂದು ಪೊಲೀಸರು ದೃಢಪಡಿಸಿದ್ದಾರೆ. ಸಿಸಿಟಿವಿಯಿಂದ ಸೆರೆಯಾದ ಚಿತ್ರವನ್ನು ಮುಂಬಯಿ ಮತ್ತು ಅಹಮದಾಬಾದ್ ತನಿಖಾತಂಡಕ್ಕೆ ಹಸ್ತಾಂತರಿಸಲಾಗಿದೆ.
ಮತ್ತಷ್ಟು
ನೀರಿನಲ್ಲಿ ಮುಳುಗಿ ಇಶ್ಮಿತ್ ಸಾವು: ಮರಣೋತ್ತರ ಪರೀಕ್ಷೆ ವರದಿ
ನಾಳೆ ಸೂರ್ಯಗ್ರಹಣ: ನಾಸಾದಿಂದ ನೇರ ಪ್ರಸಾರ
'ಮಾಯಾ' ಪ್ರಧಾನಿ ಆಕಾಂಕ್ಷೆಗೆ ಕಾರಟ್, ಚೌತಾಲಾ ತಣ್ಣೀರು
ಸ್ಫೋಟ: ಪೂನಾ ಟಾಲ್ ಗೇಟ್‌ನಲ್ಲಿ ಕಾರಿನ ಸಿಸಿಟಿವಿ ಚಿತ್ರ
ಬೆಂಗಳೂರು, ಸೂರತ್ ಬಾಂಬ್‌ಗಳಲ್ಲಿ ಅಲ್‌ಖೈದಾ ಕೈವಾಡ
ಸೂರತ್ ಜನಜೀವನ ಸಹಜ ಸ್ಥಿತಿಗೆ