ಶ್ರೀನಗರದಿಂದ ಅಮರನಾಥ್ ಪವಿತ್ರ ಕ್ಷೇತ್ರಕ್ಕೆ ಹೋಗುವ ದಾರಿಯಲ್ಲಿ 'ಸುಧಾರಿತ ಸ್ಫೋಟಕ ಸಾಧನ' (ಐಇಡಿ)ಯನ್ನು ರಕ್ಷಣಾ ಪಡೆಗಳು ಪತ್ತೆ ಹಚ್ಚಿದ್ದು, ಈ ಮೂಲಕ ದೊಡ್ಡ ದುರಂತವೊಂದನ್ನು ತಪ್ಪಿಸಿದಂತಾಗಿದೆ.
ರಾಷ್ಟ್ರೀಯ ರೈಫಲ್ಸ್ ಮತ್ತು ಕೇಂದ್ರ ರಿಸರ್ವ್ ಪೊಲೀಸ್ ದಳ(ಸಿಆರ್‌ಪಿಎಫ್)ವು ಐಇಡಿಯನ್ನು ಶ್ರೀನಗರದ ಗಂಧರ್ಬಾಲ್ ಜಿಲ್ಲೆಯಿಂದ 27 ಕಿ.ಮೀ. ದೂರದಲ್ಲಿರುವ ಬೈಪಾಸ್ ಬಳಿ ಪತ್ತೆ ಹಚ್ಚಿರುವುದಾಗಿ ತಿಳಿಸಿವೆ.
ಸೇನೆಯ ಬಾಂಬ್ ನಿಷ್ಕ್ರಿಯ ತಂಡವು ಐಇಡಿಯನ್ನು ನಿಷ್ಕ್ರಿಯಗೊಳಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಮರನಾಥ್ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳು ಶ್ರೀನಗರ್ ಬಾಲ್ಟಾಲ್ ಮಾರ್ಗದ ಮೂಲಕ ಅಮರ್‌ನಾಥ್ ಗುಹಾಂತರ್ ದೇವಾಲಯಕ್ಕೆ ತೆರಳಬೇಕು.
|