ಆಂಧ್ರಪ್ರದೇಶದ ವಾರಾನಗಲ್ ಜಿಲ್ಲೆಯಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ ಅನಾಹುತ ಸಂಭವಿಸಿದ ಪರಿಣಾಮವಾಗಿ ಎರಡು ಮಹಿಳೆಯರು ಸೇರಿದಂತೆ 14 ಪ್ರಯಾಣಿಕರು ಸಾವನ್ನಪ್ಪಿದ್ದು, 40 ಮಂದಿ ಗಾಯಗೊಂಡಿದ್ದಾರೆ.
ಕ್ಸಾಮುದ್ರಂ ರೈಲ್ವೇ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಗೌತಮಿ ಎಕ್ಸ್‌ಪ್ರೆಸ್‌ನಲ್ಲಿ ಸುಮಾರು ಮಧ್ಯರಾತ್ರಿಯ ಹೊತ್ತಲ್ಲಿ ಈ ಅವಗಢ ಸಂಭವಿಸಿದೆ.
ಸಿಕಂದರಾಬಾದ್-ಕಾಕಿನಾಡ್ ಗೌತಮಿ ಎಕ್ಸ್‌ಪ್ರೆಸ್ ಮೆಹ್ಬೂಬ್‍ನಗರ ಸಮೀಪದಲ್ಲಿರುವಾಗ ಸ್ಲೀಪರ್ ಕೋಚ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಇದು ಇತರ ಕೋಚ್‌ಗಳಿಗೆ ಹರಡಿತು. ಈ ಬೆಂಕಿ ಆಕಸ್ಮಿಕಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲದಿದ್ದರೂ, ಶಾರ್ಟ್ ಸರ್ಕಿಟ್‌ನಿಂದ ಈ ಅವಘಡ ಸಂಭವಿಸಿರುವ ಸಾಧ್ಯತೆ ಇದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಇದರ ಕುರಿತಾಗಿ ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ. ಘಟನೆಯಲ್ಲಿ ಗಾಯಗೊಂಡವರನ್ನು ವಾರಂಗಲ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ವಾರಂಗಲ್‌ನ ಎಸ್‌ಪಿ ವಿ.ಸಿ.ಸಜ್ಜನರ್ ಹೇಳಿದ್ದಾರೆ.
|