ಸುಮಾರು 49 ಜನರ ಸಾವಿಗೆ ಕಾರಣವಾಗ ಅಹಮದಾಬಾದ್ ಸ್ಫೋಟ ನಡೆದ ನಾಲ್ಕು ದಿನಗಳ ನಂತರ, ಸ್ಫೋಟದ ಕುರಿತಾಗಿ ನಡೆಸಲಾಗುತ್ತಿರುವ ತನಿಖೆಯಲ್ಲಿ ಮುನ್ನಡೆ ಸಾಧಿಸಲಾಗಿದೆ ಎಂದು ತನಿಖಾತಂಡವು ತಿಳಿಸಿದೆ.
ಅಹಮದಾಬಾದ್, ಬೆಂಗಳೂರು ಮತ್ತು ಜೈಪುರ ಸ್ಫೋಟ ಹಾಗೂ ಸೂರತ್‌ನಲ್ಲಿ ಕಂಡುಬಂದ 21 ಜೀವಂತ ಬಾಂಬ್‌ಗಳಿಗೆ ಒಂದೇ ಉಗ್ರಗಾಮಿ ಸಂಸ್ಥೆಯು ಹೊಣೆಯಾಗಿದೆ ಎಂದು ಅವರು ಹೇಳಿದ್ದಾರೆ.
ಯಾವುದೇ ಉಗ್ರಗಾಮಿ ಸಂಘಟನೆಯ ಹೆಸರನ್ನು ಗುಜರಾತ್ ಪೊಲೀಸರು ಸೂಚಿಸಿಲ್ಲದಿದ್ದರೂ, ತನಿಖೆಯ ಆಧಾರದಲ್ಲಿ ಭಯೋತ್ಪಾದನಾ ಕೃತ್ಯದ ಹಿಂದೆ ಪಾಕಿಸ್ತಾನ ಕೈವಾಡವಿರುವುದು ಕಂಡುಬಂದಿದೆ.
ಸಾಬರಮತಿ ಜೈಲಿನಲ್ಲಿ ಪೋಟಾ ಕಾಯಿದೆಯಡಿ ಏಳು ಮಂದಿಯನ್ನು ವಿಚಾರಣೆ ನಡೆಸಲಾಗುತ್ತಿದ್ದು, ಈ ಏಳು ಮಂದಿಯು ದಾವೂದ್ ಇಬ್ರಾಹಿಂ ಸಹಚರ ಪಾಕಿಸ್ತಾನದ ರಾಸೂಲ್ ಪತ್ತಿ ಅವರೊಂದಿಗೆ ಸಂಬಂಧ ಇರುವುದಾಗಿ ತಿಳಿದುಬಂದಿದೆ.
ಇದಲ್ಲದೆ, ಅಹದಾಬಾದ್‌ನಲ್ಲಿ ಸ್ಫೋಟ ನಡೆದ ನಂತರ, ಜೈಲಿನಿಂದ ಪಾಕಿಸ್ತಾನಕ್ಕೆ ಕರೆ ಮಾಡಲಾಗಿದೆ ಎಂಬುದಾಗಿ ತನಿಖಾತಂಡವು ಹೇಳುತ್ತದೆ. ಈ ಹಿನ್ನೆಲೆಯಲ್ಲಿ ಸಾಬರಮತಿ ಜೈಲಿನಿಂದ ಪೊಲೀಸರು ಮೂರು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಏತನ್ಮಧ್ಯೆ, ಬೆಂಗಳೂರು, ಅಹಮದಾಬಾದ್ ಸರಣಿ ಸ್ಫೋಟ ಮತ್ತು ಸೂರತ್‌ನ ವಿಫಲ ಬಾಂಬ್ ಸ್ಫೋಟದ ನಡುವೆ ಸಾಕಷ್ಟು ಸಾಮ್ಯತೆ ಇದೆ ಎಂಬುದಾಗಿ ಸೂರತ್ ಪೊಲೀಸ್ ಕಮಿಶನರ್ ಆರ್ಎಂಎಸ್ ಬ್ರಾರ್ ಸ್ಪಷ್ಟಪಡಿಸಿದ್ದಾರೆ.
|