ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಚೆನ್ನೈ ವಿಮಾನ ನಿಲ್ದಾಣದಲ್ಲಿ ಆತಂಕ ತಂದ ಸೂಟ್‌ಕೇಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೆನ್ನೈ ವಿಮಾನ ನಿಲ್ದಾಣದಲ್ಲಿ ಆತಂಕ ತಂದ ಸೂಟ್‌ಕೇಸ್ Search similar articles
ಚೆನ್ನೈ ವಿಮಾನ ನಿಲ್ದಾಣದ ಅಂತಾರಾಷ್ಟ್ರೀಯ ಟರ್ಮಿನಲ್‌ ಬಳಿ ಶುಕ್ರವಾರ ಮುಂಜಾವಿನಲ್ಲಿ ಅನಾಥ ಸೂಟ್‌ಕೇಸ್ ಕಂಡುಬಂದ ಹಿನ್ನೆಲೆಯಲ್ಲಿ ಕೆಲಕ್ಷಣ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ, ಇದನ್ನು ಬಾಂಬ್ ನಿಷ್ಕ್ರಿಯ ದಳಕ್ಕೆ ಹಸ್ತಾಂತರಿಸಲಾಯಿತು.

ಚೆನ್ನೈ ವಿಮಾನ ನಿಲ್ದಾಣದ ರೆಸ್ಟೋರೆಂಟ್ ಸಮೀಪ ಮುಂಜಾನೆ ಎರಡು ಗಂಟೆಯ ಹೊತ್ತಿಗೆ ಈ ಸೂಟ್‌ಕೇಸ್ ಪತ್ತೆಯಾಗಿತ್ತು ಎಂದು ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ.

ಸುದ್ದಿ ತಿಳಿದ ತಕ್ಷಣ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಸೂಟ್‌‍‌ಕೇಸ್‌ನ್ನು ವಶಪಡಿಸಿಕೊಂಡರು. ಸೂಟ್‌ಕೇಸ್‌ನಲ್ಲಿ ಕೆಲವು ಬಟ್ಟೆಗಳು ಮತ್ತು ಹಳೆಯ ವಾಚು ಕಂಡುಬಂದಿತ್ತು ಎಂದು ಮೂಲಗಳು ಹೇಳಿವೆ.

ಈ ನಡುವೆ, ತಮಿಳುನಾಡು ಸರಕಾರದಿಂದ ನೂತನವಾಗಿ ಪ್ರಾರಂಭಿಸಲಾದ ಕೇಬಲ್ ಟಿ.ವಿ.ಯನ್ನು ಸ್ಥಗಿತಗೊಳಿಸದಿದ್ದಲ್ಲಿ ವಿಮಾನನಿಲ್ದಾಣದ ಮೇಲೆ ಬಾಂಬ್ ದಾಳಿ ನಡೆಸುವ ಬೆದರಿಕೆಯನ್ನು ಹೊಂದಿದ ಪತ್ರವೊಂದು ಕಳೆದ ರಾತ್ರಿ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ತಲುಪಿದೆ.

ಅಣ್ಣಾನಗರ ಅಂಚೆಕಚೇರಿಯ ಸೀಲ್ ಹೊಂದಿರುವ ಈ ಪೋಸ್ಟ್‌ಕಾರ್ಡ್‌ನಲ್ಲಿ, ಅರಸು ಕೇಬಲ್ ಟಿವಿ ಸಂಸ್ಥೆಯು ನಿಲುಗಡೆಯಾಗದಿದ್ದಲ್ಲಿ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ ನಡೆಸಲಾಗುವುದು ಎಂಬ ಎಚ್ಚರಿಕೆಯನ್ನು ಒಳಗೊಂಡಿದೆ.

ಪತ್ರವನ್ನು ಪಡೆದುಕೊಂಡ ವಿಮಾನ ನಿಲ್ದಾಣದ ಕಾರ್ಯ ನಿರ್ವಾಹಕ ಮಾಧವ ರಾವ್ ವಿಮಾನನಿಲ್ದಾಣ ಪೊಲೀಸರಿಗೆ ದೂರು ನೀಡಿದ್ದಾರೆ.
ಮತ್ತಷ್ಟು
ಸಾಬರಮತಿ ಜೈಲಿನಿಂದ ಪಾಕ್‌ಗೆ ದೂರವಾಣಿ ಕರೆ
ಆಂಧ್ರ ರೈಲಿನಲ್ಲಿ ಬೆಂಕಿ ಆಕಸ್ಮಿಕ: 3 ಸಾವು
ಅಮ್ಟೆ ದಂಪತಿಗಳಿಗೆ ಮ್ಯಾಗ್ಸೆಸೆ ಪ್ರಶಸ್ತಿ
ಅಮರನಾಥ್ ಮಾರ್ಗದಲ್ಲಿ ಸ್ಫೋಟಕ ಪತ್ತೆ
ಕಾರಟ್ - ದೇವೇಗೌಡ ಭೇಟಿ
ಅಹಮದಾಬಾದ್ ಸ್ಫೋಟ - ಐಎಸ್‌ಐ ಕೈವಾಡ ?