ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಹಿರಿಯ ಕಾಮ್ರೇಡ್ ಸುರ್ಜೀತ್ ಯುಗಾಂತ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಿರಿಯ ಕಾಮ್ರೇಡ್ ಸುರ್ಜೀತ್ ಯುಗಾಂತ್ಯ Search similar articles
ND
ಹಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಿಪಿಎಂ ಹಿರಿಯ ಮುಖಂಡ, 92 ವರ್ಷದ ಹರಕಿಶನ್ ಸಿಂಗ್ ಸುರ್ಜೀತ್ ಅವರು ಶುಕ್ರವಾರ ಮಧ್ಯಾಹ್ನ ನೋಯಿಡಾ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಇದರೊಂದಿಗೆ ಕಮ್ಯೂನಿಸ್ಟ್ ಇತಿಹಾಸದಲ್ಲಿ ಸುರ್ಜಿತ್ ಯುಗವೊಂದು ಅಂತ್ಯವಾಯಿತು.

ನೋಯಿಡಾದ ಮೆಟ್ರೋ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿದ್ದ ಸುರ್ಜಿತ್ ಅವರು ಹಲವು ಅಂಗಗಳ ವೈಫಲ್ಯಕ್ಕೀಡಾಗಿದ್ದು, ಶುಕ್ರವಾರ ಭಾರೀ ಹೃದಯಾಘಾತಕ್ಕೀಡಾದರು.

1964ರಿಂದ ಸಿಪಿಎಂ ಪೊಲಿಟ್ ಬ್ಯುರೋ ಸದಸ್ಯರಾಗಿದ್ದ ಸುರ್ಜಿತ್ ಅವರು 1992ರಿಂದ 2005ರವರೆಗೆ ಸಿಪಿಎಂ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕಟ್ಟಾ ಕಮ್ಯೂನಿಸ್ಟ್ ಆಗಿದ್ದ ಸುರ್ಜೀತ್, ಯುಪಿಎ ಸರಕಾರವು ಅಸ್ತಿತ್ವಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮೇ 6ರಂದು ತೀವ್ರ ಹೃದಯಾಘಾತಕ್ಕೊಳಗಾಗಿದ್ದ ಸುರ್ಜೀತ್ ಅವರನ್ನು ಾಸ್ಪತ್ರೆಗೆ ಸೇರಿಸಲಾಗಿತ್ತು. ಮೇ 16ರಂದು ಅವರು ಕೋಮಾ ಸ್ಥಿತಿಗೆ ಜಾರಿದ್ದರು. ಆ ಬಳಿಕ ಚೇತರಿಸಿಕೊಂಡ ಅವರು ಜೂನ್ 3ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು.

ಸಂತಾಪದ ಮಹಾಪೂರ

ಹಿರಿಯ ಮಾರ್ಕ್ಸ್‌ವಾದಿ ನಾಯಕನ ನಿಧನಕ್ಕೆ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕಮ್ಯುನಿಸ್ಟ್ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪಕ್ಷಭೇದ ಮರೆತು ರಾಜಕೀಯ ಪಕ್ಷಗಳೂ ಸುರ್ಜಿತ್ ನಿಧನಕ್ಕೆ ದುಃಖ ವ್ಯಕ್ತಪಡಿಸಿವೆ.

ಪ್ರಧಾನಿ ಆಘಾತ: ಸುರ್ಜಿತ್ ನಿಧಾನಕ್ಕೆ ಆಘಾತ ವ್ಯಕ್ತಪಡಿಸಿರುವ, ಈಗ ಕೊಲಂಬೋದಲ್ಲಿರುವ ಪ್ರಧಾನಿ ಮನಮೋಹನ್ ಸಿಂಗ್, ಅವರು ತಮ್ಮ ಆತ್ಮೀಯ ಮಿತ್ರರಾಗಿದ್ದರು ಮತ್ತು ಯುಪಿಎ ಸರಕಾರದ ನಿರ್ವಹಣೆಗೆ ಸೂಕ್ತ ಬೆಂಬಲ ಮತ್ತು ಸಲಹೆಗಳನ್ನು ನೀಡುತ್ತಿದ್ದರು ಎಂದು ಸ್ಮರಿಸಿದ್ದಾರೆ.

ಅವರೊಬ್ಬ ಶ್ರೇಷ್ಠ ರಾಜಕೀಯ ಮುಖಂಡ, ನೈಜ ದೇಶಭಕ್ತ, ತುಳಿತಕ್ಕೊಳಗಾದವರ ಉದ್ಧಾರಕ್ಕಾಗಿ ಬದ್ಧವಾಗಿದ್ದ ಶ್ರೇಷ್ಠ ಭಾರತೀಯ ಎಂದು ಪ್ರಧಾನಿ ಬಣ್ಣಿಸಿದ್ದಾರೆ.

ಬಿಜೆಪಿ ಶೋಕ: ಸುರ್ಜಿತ್ ನಿಧನಕ್ಕೆ ಶೋಕ ವ್ಯಕ್ತಪಡಿಸಿರುವ ಬಿಜೆಪಿ, ಮಾರ್ಕ್ಸ್‌ವಾದದ ಪ್ರಕಾರ ದೇಶದ ರಾಜಕೀಯಕ್ಕೆ ಸೇವೆ ಸಲ್ಲಿಸಿದ ನಿಷ್ಠಾವಂತ ಕಾರ್ಯಕರ್ತ ಎಂದು ಬಣ್ಣಿಸಿದೆ. ತಮ್ಮ ಶೋಕ ಸಂದೇಶದಲ್ಲಿ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ, ಭಾರತೀಯ ರಾಜಕಾರಣವು ಹಿರಿಯ, ಮಾರ್ಕ್ಸ್‌ವಾದಿ ಆಂದೋಲನದ ಹರಿಕಾರನನ್ನು ಕಳೆದುಕೊಂಡಿದೆ ಎಂದರು.

ಭಾರತೀಯ ಕಮ್ಯೂನಿಸ್ಟ್ ಚಳವಳಿಯ ನಿರ್ಮಾತೃ ಎಂದು ಸುರ್ಜಿತ್ ಅವರನ್ನು ಬಣ್ಣಿಸಿರುವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕರಾಟ್, ಅವರ ನಿಧನದಿಂದ ಕಮ್ಯುನಿಸ್ಟ್ ಮತ್ತು ಪ್ರಗತಿಪರ, ಜಾತ್ಯತೀತ ಶಕ್ತಿಗಳ ಆಂದೋಲನಕ್ಕೆ ತುಂಬಲಾರದ ನಷ್ಟವಾಗಿದೆ ಎಂದಿದ್ದಾರೆ.

ಸೋನಿಯಾ ಭೇಟಿ: ಸುರ್ಜಿತ್ ನಿಧನದ ಸುದ್ದಿ ಕೇಳುತ್ತಿದ್ದಂತೆಯೇ ಕಾಂಗ್ರೆಸ್ ನಾಯಕಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಾರ್ಕ್ಸ್‌ವಾದಿ ನಾಯಕನ ನಿವಾಸಕ್ಕೆ ತೆರಳಿ ಶೋಕ ವ್ಯಕ್ತಪಡಿಸಿ, ಸುರ್ಜಿತ್ ಪತ್ನಿ ಪ್ರೀತಮ್ ಕೌರ್ ಮತ್ತು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

1990ರ ವೇಳೆಗೆ ಸಿಪಿಎಂ ಅನ್ನು ವಿಶ್ವದ ಅತಿದೊಡ್ಡ ಕಮ್ಯುನಿಸ್ಟ್ ಚಳವಳಿಯನ್ನಾಗಿಸಿದ ಕೀರ್ತಿ ಸುರ್ಜಿತ್‌ಗೆ ಸಲ್ಲುತ್ತದೆ ಎಂದು ತಿಳಿಸಿರುವ ಅವರು, ತಮಗೆ ಮಾರ್ಕ್ಸ್‌ವಾದ ಕಲಿಸಿಕೊಟ್ಟ ಗುರು ಸುರ್ಜಿತ್ ಎಂದು ಸ್ಮರಿಸಿಕೊಂಡರು.
ಮತ್ತಷ್ಟು
ಸಿಮಿ ಕಾರ್ಯಕರ್ತ ಹಲೀಂಗೆ ಸುಳ್ಳುಪತ್ತೆ ಪರೀಕ್ಷೆ
ಚೆನ್ನೈ ವಿಮಾನ ನಿಲ್ದಾಣದಲ್ಲಿ ಆತಂಕ ತಂದ ಸೂಟ್‌ಕೇಸ್
ಸಾಬರಮತಿ ಜೈಲಿನಿಂದ ಪಾಕ್‌ಗೆ ದೂರವಾಣಿ ಕರೆ
ಆಂಧ್ರ ರೈಲಿನಲ್ಲಿ ಬೆಂಕಿ ಆಕಸ್ಮಿಕ: 14 ಸಾವು
ಅಮ್ಟೆ ದಂಪತಿಗಳಿಗೆ ಮ್ಯಾಗ್ಸೆಸೆ ಪ್ರಶಸ್ತಿ
ಅಮರನಾಥ್ ಮಾರ್ಗದಲ್ಲಿ ಸ್ಫೋಟಕ ಪತ್ತೆ