ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪದತ್ಯಾಗಕ್ಕೆ ನಕಾರ, ಸಿಪಿಎಂ ವಿರುದ್ಧ ಚಟರ್ಜಿ ಕೆಂಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪದತ್ಯಾಗಕ್ಕೆ ನಕಾರ, ಸಿಪಿಎಂ ವಿರುದ್ಧ ಚಟರ್ಜಿ ಕೆಂಡ Search similar articles
ಸಿಪಿಎಂನಿಂದ ಉಚ್ಚಾಟನೆಗೊಂಡ ನಂತರ ಯಾವುದೇ ಬಹಿರಂಗ ಪ್ರತಿಕ್ರಿಯೆ ನೀಡದೆ ಮೌನವಾಗಿಯೇ ಇದ್ದ ಸ್ಪೀಕರ್ ಸೋಮನಾಥ್ ಚಟರ್ಜಿ ಶುಕ್ರವಾರ ಮೌನ ಮುರಿದಿದ್ದು, ಯಾವುದೇ ಕಾರಣಕ್ಕೂ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದಾರಲ್ಲದೆ, ತನ್ನ ಸಾಂವಿಧಾನಿಕ ಹುದ್ದೆಯ ಬಗ್ಗೆ ಸಿಪಿಎಂ ಯಾವುದೇ ನಿರ್ದೇಶನಗಳನ್ನು ನೀಡಬೇಕಿಲ್ಲ ಎಂದು ಕಿಡಿ ಕಾರಿದ್ದಾರೆ.

ಸ್ಪೀಕರ್ ಆಗಿ ತನ್ನ ಕರ್ತವ್ಯವನ್ನು ಮುಂದುವರಿಸುವುದಾಗಿ ಹೇಳಿದ ಸ್ಪೀಕರ್, ತಾತ್ಕಾಲಿಕವಾಗಿ ಪಕ್ಷವನ್ನು ತ್ಯಜಿಸಲು ಸ್ಪೀಕರ್‌ಗೆ ಕೆಲವು ನಿಯಮಗಳಿರಬೇಕು ಎಂದು ಹೇಳಿದರು. ಪಕ್ಷ ವಿರೋಧಿ ಎಂಬ ಅನ್ಯಾಯವಾದ ಆರೋಪದ ರಿಸ್ಕ್ ತೆಗೆದುಕೊಂಡರೂ ದೇಶದ ಸಂವಿಧಾನವನ್ನು ಎತ್ತಿಹಿಡಿಯಲು ತತ್ವಬದ್ಧವಾದ ನಿರ್ಧಾರ ತೆಗೆದುಕೊಂಡೆ ಎಂದರು.

ಯಾವುದೇ ಜವಾಬ್ದಾರಿಯಿಲ್ಲದ ವ್ಯಕ್ತಿಗಳು ತನ್ನನ್ನು ಸ್ಪೀಕರ್ ಎಂಬುದಾಗಿ ಗೌರವಿಸಬೇಕಾಗಿಲ್ಲ ಎಂದು ತನ್ನ ಪಕ್ಷಕ್ಕೇ ವ್ಯಂಗ್ಯವಾಡುವ ರೀತಿಯಲ್ಲಿ ಸ್ಪೀಕರ್ ತಿಳಿಸಿದ್ದಾರೆ.

ತಾನು ಯಾವುದೇ ಪಕ್ಷಕ್ಕೆ ಸಹಾಯ ಮಾಡಿದ್ದೇನೆ ಅಥವಾ ಯಾವುದೇ ವೈಯಕ್ತಿಕ ಲಾಭವನ್ನು ಪಡೆದುಕೊಂಡಿದ್ದೇನೆ ಎನ್ನುವ ವಿಚಾರವು ಸತ್ಯಕ್ಕೆ ದೂರವಾಗಿದೆ ಎಂದು ಸ್ಪೀಕರ್ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ಈ ನಡುವೆ, ಪಕ್ಷದಿಂದ ಉಚ್ಚಾಟನೆಗೊಂಡ ದಿನವು ತನ್ನ ಅತ್ಯಂತ ಕೆಟ್ಟದಿನ ಎಂದೂ ಅವರು ಹೇಳಿದ್ದಾರೆ.
ಮತ್ತಷ್ಟು
ಹಿರಿಯ ಕಾಮ್ರೇಡ್ ಸುರ್ಜೀತ್ ಯುಗಾಂತ್ಯ
ಸಿಮಿ ಕಾರ್ಯಕರ್ತ ಹಲೀಂಗೆ ಸುಳ್ಳುಪತ್ತೆ ಪರೀಕ್ಷೆ
ಚೆನ್ನೈ ವಿಮಾನ ನಿಲ್ದಾಣದಲ್ಲಿ ಆತಂಕ ತಂದ ಸೂಟ್‌ಕೇಸ್
ಸಾಬರಮತಿ ಜೈಲಿನಿಂದ ಪಾಕ್‌ಗೆ ದೂರವಾಣಿ ಕರೆ
ಆಂಧ್ರ ರೈಲಿನಲ್ಲಿ ಬೆಂಕಿ ಆಕಸ್ಮಿಕ: 14 ಸಾವು
ಅಮ್ಟೆ ದಂಪತಿಗಳಿಗೆ ಮ್ಯಾಗ್ಸೆಸೆ ಪ್ರಶಸ್ತಿ