ಭಾರತೀಯ ಜನತಾ ಪಕ್ಷದ ದಿ.ಪ್ರಮೋದ್ ಮಹಾಜನ್ ಪುತ್ರ ರಾಹುಲ್ ಮಹಾಜನ್ ಮತ್ತು ಪತ್ನಿ ಶ್ವೇತಾ ಮಹಾಜನ್‌ಗೆ ವಿವಾಹ ವಿಚ್ಚೇದನಕ್ಕೆ ಸ್ಥಳೀಯ ನ್ಯಾಯಾಲಯ ಶುಕ್ರವಾರದಂದು ಗ್ರೀನ್ ಸಿಗ್ನಲ್ ನೀಡಿದೆ.
ಪ್ರಮೋದ್ ಮಹಾಜನ್ ಅವರು ತಮ್ಮ ಪುತ್ರ ರಾಹುಲ್ ವಿವಾಹವನ್ನು ಶ್ವೇತಾ ಜತೆ ಅದ್ದೂರಿಯಾಗಿ ಮದುವೆ ನಡೆಸಿದ್ದರು. ಆದರೆ ಕೆಲವೇ ತಿಂಗಳಲ್ಲಿ ಇವರಿಬ್ಬರ ವೈಮನಸ್ಸು ಸ್ಥಳೀಯ ಮಾಧ್ಯಮದಲ್ಲಿ ಬಹಿರಂಗಗೊಂಡಿತ್ತು.
ಬಳಿಕ ಸಾಕಷ್ಟು ಆರೋಪ-ಪ್ರತ್ಯಾರೋಪ, ಸಂಧಾನ ನಡೆದರೂ ಕೂಡ, ಅಂತಿಮವಾಗಿ ಇಬ್ಬರೂ ವಿವಾಹ ವಿಚ್ಚೇದನಕ್ಕಾಗಿ ನ್ಯಾಯಾಲಯದ ಕಟಕಟೆ ಏರಿದ್ದರು.
ಜಿಲ್ಲಾ ಹಾಗೂ ಸೆಶೆನ್ಸ್ ನ್ಯಾಯಾಧೀಶರಾದ ರಾಮೇಂದ್ರಾ ಜೈನ್ ಅವರು, ಎರಡು ಕುಟುಂಬಗಳು ಒಮ್ಮತದ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ವಿಚ್ಚೇದನಕ್ಕೆ ಅನುಮತಿ ನೀಡಿದ್ದಾರೆ.
ರಾಹುಲ್ ಮತ್ತು ಶ್ವೇತಾ ವಿಚ್ಚೇದನದಲ್ಲಿ ಎರಡೂ ಕುಟುಂಬಗಳು ಒಮ್ಮತದ ಅಭಿಪ್ರಾಯ ಹೊಂದಿರುವುದಾಗಿ ರಾಹುಲ್ ನ್ಯಾಯವಾದಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ರಾಹುಲ್ ಮತ್ತು ಶ್ವೇತಾ ಅವರ ವಿವಾಹವು 2006 ಆಗೋಸ್ಟ್ 29ರಂದು ನೆರವೇರಿತ್ತು. ಇದೀಗ ಅವರಿಬ್ಬರು ವಿವಾಹ ವಿಚ್ಚೇದನ ಪಡೆಯುವ ಮೂಲಕ 'ಬಂಧಮುಕ್ತ'ಗೊಂಡಿದ್ದಾರೆ.
|