ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಾಂಗ್ರೆಸ್ ಸಂಸ್ಕೃತಿ ಕೆಟ್ಟುಹೋಗಿದೆ: ಡಿ.ರಾಜಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್ ಸಂಸ್ಕೃತಿ ಕೆಟ್ಟುಹೋಗಿದೆ: ಡಿ.ರಾಜಾ Search similar articles
ಲೋಕಸಭೆಯಲ್ಲಿನ ವಿಶ್ವಾಸಮತ ಗೊತ್ತುವಳಿಯ ನಂತರ ಕಾಂಗ್ರೆಸ್‌ನ ನಿಜವಾದ ಬಣ್ಣ ಬಯಲಾಗಿದ್ದು, ಕಾಂಗ್ರೆಸ್ ಪಕ್ಷದ ಸಂಸ್ಕೃತಿಯು ಕೆಟ್ಟುಹೋಗಿದೆ ಎಂದು ಸಿಪಿಐ ಕಾರ್ಯದರ್ಶಿ ಡಾ.ರಾಜಾ ದೂರಿದ್ದಾರೆ.

ಕೊಚ್ಚಿಯಲ್ಲಿ ಎಐವಿಇಯ ನಿಯೋಗಸಭೆಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಸೋನಿಯಾ ಗಾಂಧಿ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷವು ಭಾರತದ ಸ್ವಾತಂತ್ರ್ಯ ಚಳವಳಿಯ ಪರಂಪರೆಯೊಂದಿಗೆ ಯಾವುದನ್ನೂ ಮಾಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ರಾಜಾ ತಿಳಿಸಿದ್ದಾರೆ.

ಯುವ ಜನರು ರಾಜಕೀಯದಲ್ಲಿ ಕ್ರಿಯಾಶೀಲ ಪಾತ್ರವನ್ನು ವಹಿಸಬೇಕಾಗಿದ್ದು, ಕಾಂಗ್ರೆಸ್‌ನಿಂದ ರಚಿಸಲ್ಪಟ್ಟ ಜನವಿರೋಧಿ ಕಾನೂನಿನ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದ ರಾಜಾ, ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷವು ಸ್ವತಂತ್ರವಾಗಿ ಆಡಳಿತ ನಡೆಸಬೇಕೆಂದು ಅಲ್ಲ ಆದರೆ, ಭಾರತದ ಪರಿಸ್ಥಿತಿಯಲ್ಲಿ ಎರಡು ಪಕ್ಷಗಳ ಆಡಳಿತ ಪರಿಸ್ಥಿತಿಯು ಕಾರ್ಯನಿರ್ವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಶ್ವಾಸಮತದ ವೇಳೆ ಸಂಸತ್ತಿನ ವೋಟಿಗಾಗಿ ನೋಟು ಪ್ರಹಸನವು ನಾಚಿಕೇಗೇಡಿನ ಸಂಗತಿಯಾಗಿದೆ ಎಂದ ಅವರು, ಇದು ದೇಶದ ಪ್ರಜಾಪ್ರಭುತ್ವ ನೀತಿಗೆ ಹೇಳಲಾಗದಷ್ಟು ಅಪಕೀರ್ತಿ ಮಾಡಿದಂತಾಗಿದೆ ಎಂದು ನುಡಿದರು.
ಮತ್ತಷ್ಟು
ಭಾರತದಲ್ಲಿ ಸೂರ್ಯಗ್ರಹಣ ಗೋಚರ: ಚಿತ್ರ ಇಲ್ಲಿದೆ
ಭಾರತ-ಅಮೆರಿಕ 'ಅಣುಬಂಧ'-ಐಎಇಎ ಸಮ್ಮತಿ
ರಾಹುಲ್-ಶ್ವೇತಾ ವಿಚ್ಚೇದನಕ್ಕೆ 'ಗ್ರೀನ್ ಸಿಗ್ನಲ್'
ರವಿ ನೀನು ಆಗಸದಿಂದ ಮರೆಯಾದಾಗ....
ಪದತ್ಯಾಗಕ್ಕೆ ನಕಾರ, ಸಿಪಿಎಂ ವಿರುದ್ಧ ಚಟರ್ಜಿ ಕೆಂಡ
ಹಿರಿಯ ಕಾಮ್ರೇಡ್ ಸುರ್ಜೀತ್ ಯುಗಾಂತ್ಯ