ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಐತಿಹಾಸಿಕ 'ಅಣು' ದಿನ: ಮನಮೋಹನ್ ಸಿಂಗ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐತಿಹಾಸಿಕ 'ಅಣು' ದಿನ: ಮನಮೋಹನ್ ಸಿಂಗ್ Search similar articles
ಭಾರತದ ಸುರಕ್ಷತಾ ಒಪ್ಪಂದಕ್ಕೆ ಐಎಇಎ ನೀಡಿರುವ ಅನುಮೋದನೆಯನ್ನು ಸ್ವಾಗತಿಸಿರುವ ಪ್ರಧಾನಿ ಮನಮೋಹನ್ ಸಿಂಗ್, ಇದೊಂದು ಐತಿಹಾಸಿಕ ಬೆಳವಣಿಗೆ ಎಂದು ಬಣ್ಣಿಸಿದ್ದಾರೆ.

ಇದು ಭಾರತಕ್ಕೆ ಅತ್ಯಂತ ಪ್ರಮುಖ ದಿನವಾಗಿದ್ದು, ಅಂತಾರಾಷ್ಟ್ರೀಯ ಸಮುದಾಯಕ್ಕೆ, ವಿಶೇಷವಾಗಿ ಅಮೆರಿಕ ಮತ್ತು ವಿಶ್ವಸಂಸ್ಥೆಯ ಇಂಧನ ವಿಭಾಗದ ಮುಖ್ಯಸ್ಥರಿಗೆ ಪ್ರಧಾನಿ ಅಭಿನಂದನೆ ಸಲ್ಲಿಸಿದ್ದಾರೆ.

ಭಾರತದ ಸುರಕ್ಷತಾ ಒಪ್ಪಂದಕ್ಕೆ ಅನುಮೋದನೆ ನೀಡಲು ಐಎಇಎ ಆಡಳಿತ ಮಂಡಳಿಯು ಒಮ್ಮತದಿಂದ ಒಪ್ಪಿಗೆ ಸೂಚಿಸಿರುವುದು ನಿಜಕ್ಕೂ ಸಂತಸದ ವಿಚಾರವಾಗಿದ್ದು, ಇದು ಭಾರತಕ್ಕೆ ವಿಶೇಷ ದಿನವಾಗಿದೆ ಎಂದು ಸಾರ್ಕ್ ಶೃಂಗಸಭೆಯಲ್ಲಿ ಭಾಗವಹಿಸಲು ಕೊಲಂಬೋಗೆ ತೆರಳಿರುವ ಸಿಂಗ್ ತಿಳಿಸಿದ್ದಾರೆ.

ನಾಗರಿಕ ಪರಮಾಣು ಒಪ್ಪಂದವು ಭಾರತಕ್ಕೆ ಸಹಕಾರಿಯಾಗಿದ್ದು, ವಿಶ್ವಕ್ಕೂ ಇದರಿಂದ ಸಹಾಯವಿದೆ. ಇಂಧನ ಸುರಕ್ಷತೆ ಮತ್ತು ಅಭಿವೃದ್ದಿಯ ಗುರಿಯೊಂದಿಗೆ ಮುಂದೆ ಹೋದಲ್ಲಿ, ಪರಮಾಣು ಇಂಧನ ಸದ್ಬಳಕೆಯು ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಸಿಂಗ್ ಹೇಳಿದ್ದಾರೆ.
ಮತ್ತಷ್ಟು
ಕಾವೇರಿದ ಪ್ರತಿಭಟನೆ: ಜಮ್ಮುವಿನಲ್ಲಿ ಸೇನೆಗೆ ಬುಲಾವ್
'ಅಣು' ಆತಂಕ ನಿಜವಾಗಿದೆ: ಎಡಪಕ್ಷಗಳ ಪ್ರತಿಕ್ರಿಯೆ
ಕಾಂಗ್ರೆಸ್ ಸಂಸ್ಕೃತಿ ಕೆಟ್ಟುಹೋಗಿದೆ: ಡಿ.ರಾಜಾ
ಭಾರತದಲ್ಲಿ ಸೂರ್ಯಗ್ರಹಣ ಗೋಚರ: ಚಿತ್ರ ಇಲ್ಲಿದೆ
ಭಾರತ-ಅಮೆರಿಕ 'ಅಣುಬಂಧ'-ಐಎಇಎ ಸಮ್ಮತಿ
ರಾಹುಲ್-ಶ್ವೇತಾ ವಿಚ್ಚೇದನಕ್ಕೆ 'ಗ್ರೀನ್ ಸಿಗ್ನಲ್'