ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಣು ಒಪ್ಪಂದ: ಎನ್‌ಎಸ್‌ಜಿ ಒಪ್ಪಿಗೆ ಸುಲಭವಲ್ಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣು ಒಪ್ಪಂದ: ಎನ್‌ಎಸ್‌ಜಿ ಒಪ್ಪಿಗೆ ಸುಲಭವಲ್ಲ Search similar articles
ಭಾರತ-ಅಮೆರಿಕ ಅಣ್ವಸ್ತ್ರ ಸುರಕ್ಷತಾ ಒಪ್ಪಂದಕ್ಕೆ ಐಎಇಎ ಅನುಮೋದನೆಯನ್ನು ಭಾರತವು ಸುಲಭವಾಗಿ ಪಡೆದುಕೊಂಡರೂ, ಅಣ್ವಸ್ತ್ರ ಪೂರೈಕೆ ಸಮೂಹ (ಎನ್ಎಸ್‌ಜಿ) ರಾಷ್ಟ್ರಗಳ ಒಪ್ಪಿಗೆ ಪಡೆಯುವುದು ಅಷ್ಟು ಸುಲಭವಲ್ಲ. ವಾಸ್ತವವಾಗಿ, ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಎನ್ಎಸ್‌ಜಿ ಸಭೆಯಲ್ಲಿ ಈ ಕುರಿತಾಗಿ ವಿರೋಧ ವ್ಯಕ್ತವಾಗುವ ಸಂಭವವಿದ್ದು, ಇದು ಒಪ್ಪಂದಕ್ಕೆ ಅಡ್ಡಿಯಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಐಎಇಎ ಸಭೆಯಲ್ಲಿ ಒಪ್ಪಂದದ ಕುರಿತಾಗಿ ಚೀನಾ ಸೇರಿದಂತೆ ಇತರ ದೇಶಗಳು ಯಾವುದೇ ರೀತಿಯ ಚಕಾರವೆತ್ತಿಲ್ಲ. ಆದರೆ, ಈ ತಿಂಗಳ ಕೊನೆಯಲ್ಲಿ ನಡೆಯುವ ಎನ್‌ಎಸ್‌ಜಿ ಸಭೆಯಲ್ಲಿ ವಿರೋಧ ವ್ಯಕ್ತವಾಗುವ ಸಾಧ್ಯತೆ ಕಂಡುಬಂದಿದೆ.

ಭಾರತದ ಅಣುಸುರಕ್ಷತಾ ಒಪ್ಪಂದವು ಐಎಇಎಯ ಎಲ್ಲಾ ಕಾನೂನು ಆವಶ್ಯಕತೆಗಳನ್ನು ಪೂರೈಸುತ್ತದೆ ಎಂದು ಭಾರತದ ಸುರಕ್ಷತಾ ಒಪ್ಪಂದದ ಕುರಿತಾಗಿ ಸಭೆಯ ವೇಳೆ ಐಎಇಎ ಮುಖ್ಯಸ್ಥ ಎಲ್ ಬರಾದಿ ತಿಳಿಸಿದ್ದರು.

ಕೆಳ ಜೀವನಮಟ್ಟದಲ್ಲಿ ವಾಸಿಸುತ್ತಿರುವ ಭಾರತದ ಜನರಿಗೆ ವಿದ್ಯುತ್ ಪೂರೈಕೆಯನ್ನು ನೀಡಲು ಈ ಒಪ್ಪಂದವು ಸಹಕಾರಿಯಾಗಲಿದೆ. ಅಭಿವೃದ್ಧಿ, ರಕ್ಷಣೆ ಮುಂತಾದವುಗಳಿಗಾಗಿ ಭಾರತಕ್ಕೆ ಈ ಒಪ್ಪಂದವು ಅಗತ್ಯವಾಗಿದೆ ಎಂದು ಬರಾದಿ ಹೇಳಿದ್ದರು.
ಮತ್ತಷ್ಟು
ಐತಿಹಾಸಿಕ 'ಅಣು' ದಿನ: ಮನಮೋಹನ್ ಸಿಂಗ್
ಕಾವೇರಿದ ಪ್ರತಿಭಟನೆ: ಜಮ್ಮುವಿನಲ್ಲಿ ಸೇನೆಗೆ ಬುಲಾವ್
'ಅಣು' ಆತಂಕ ನಿಜವಾಗಿದೆ: ಎಡಪಕ್ಷಗಳ ಪ್ರತಿಕ್ರಿಯೆ
ಕಾಂಗ್ರೆಸ್ ಸಂಸ್ಕೃತಿ ಕೆಟ್ಟುಹೋಗಿದೆ: ಡಿ.ರಾಜಾ
ಭಾರತದಲ್ಲಿ ಸೂರ್ಯಗ್ರಹಣ ಗೋಚರ: ಚಿತ್ರ ಇಲ್ಲಿದೆ
ಭಾರತ-ಅಮೆರಿಕ 'ಅಣುಬಂಧ'-ಐಎಇಎ ಸಮ್ಮತಿ