ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಜನಿ ವಿಷಾದ: ತಮಿಳುನಾಡಿನಲ್ಲಿ ವಿವಾದ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಜನಿ ವಿಷಾದ: ತಮಿಳುನಾಡಿನಲ್ಲಿ ವಿವಾದ! Search similar articles
'ಕುಚೇಲನ್ 'ಈಗ ಹೊಸ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಸೂಪರ್‌ಸ್ಟಾರ್ ರಜನೀಕಾಂತ್ ಹೊಗೇನಕಲ್ ವಿವಾದದ ಸಂದರ್ಭ ಕನ್ನಡಿಗರ ವಿರುದ್ದ ಅವಮಾನಕರ ಹೇಳಿಕೆ ನೀಡಿದ್ದರೆಂಬ ವಿವಾದದ ಕುರಿತಂತೆ ವಿಷಾದ ವ್ಯಕ್ತಪಡಿಸಿ ತನ್ನ ಹೊಸ ಸಿನಿಮಾ ಬಿಡುಗಡೆಗೆ ಅವಕಾಶ ಮಾಡಿಕೊಡುವಂತೆ ಕನ್ನಡಿಗರಲ್ಲಿ ಮನವಿ ಮಾಡಿದ್ದು ತಮಿಳು ಚಿತ್ರರಂಗದ ಕೆಂಗಣ್ಣಿಗೆ ಗುರಿಯಾಗಿದೆ.

ಇದೊಂದು ಸ್ವಾರ್ಥ ನಡೆಯಾಗಿದ್ದು ತನ್ನ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡುವುದಷ್ಟೇ ಇದರ ಹಿಂದಿನ ಉದ್ದೇಶವಾಗಿದೆ ಎಂದು ದಕ್ಷಿಣ ಭಾರತ ಕಲಾವಿದರ ಸಂಘದ ಅಧ್ಯಕ್ಷ ಶರತ್ ಕುಮಾರ್ ಶನಿವಾರ ಕಟುವಾಗಿ ಟೀಕಿಸಿದ್ದಾರೆ.

ಮತ್ತೂ ಮುಂದುವರಿಯುತ್ತಾ- "ಅವರು ವಿಷಾದ ವ್ಯಕ್ತಪಡಿಸಿದ್ದಾದರೂ ಏಕೆ? ಹೊಗೇನಕಲ್ ಯೋಜನೆಯಲ್ಲಿ ತಮಿಳುನಾಡಿನ ನಿಲುವು ಬೆಂಬಲಿಸಿ ಮಾಡಿದ ಉಪವಾಸ ಸತ್ಯಾಗ್ರಹಕ್ಕಾಗಿಯೋ ಅಥವಾ ಅವರ ಭಾಷಣಕ್ಕಾಗಿಯೋ? ತಾನು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲೇಬಾರದಿತ್ತು ಎನ್ನುತ್ತಿದ್ದಾರೆಯೇ?, ಅವರನ್ನು ಸೂಪರ್‌ಸ್ಟಾರ್ ಆಗಿ ಮಾಡಿದ ತಮಿಳುನಾಡು ಜನತೆಗೆ ಅವರು ಉತ್ತರಿಸಬೇಕಾಗಿದೆ" ಎಂದು ಶರತ್ ಕುಮಾರ್ ಟೀಕಿಸಿದರು.

ಇನ್ನೊಬ್ಬ ನಟ ಸತ್ಯರಾಜ್ ಅವರು ಕೂಡ ಹೇಳಿಕೆಯೊಂದರಲ್ಲಿ, "ರಜನಿ ತಮ್ಮ ಚಿತ್ರವು ಕರ್ನಾಟಕದಲ್ಲಿ ಬಿಡುಗಡೆಯಾಗಬೇಕೆಂಬ ಏಕೈಕ ಉದ್ದೇಶದಿಂದ ವಿಷಾದ ವ್ಯಕ್ತಪಡಿಸಿದ್ದಾರೆ. ಇದು ಅವರಿಗೆ ಮಾತ್ರವಲ್ಲ ಇಡೀ ತಮಿಳುನಾಡಿಗೆ ಆದ ಅವಮಾನ. ಒಂದು ವೇಳೆ ನನ್ನ ಚಿತ್ರಕ್ಕೆ ಕನ್ನಡಿಗ ಸಂಘಟನೆಗಳಿಂದ ತಡೆ ಏನಾದರೂ ಬಂದಿದ್ದರೆ, ಕ್ಷಮೆ ಕೇಳುವ ಬದಲು ನಾನೇ ನನ್ನ ಸ್ವಂತ ಖರ್ಚಿನಿಂದ ನಿರ್ಮಾಪಕರಿಗೆ ಪರಿಹಾರ ನೀಡುತ್ತಿದ್ದೆ" ಎಂದು ಹೇಳಿದರು.

ಇದೇ ವೇಳೆ, ಹಿರಿಯ ನಿರ್ದೇಶಕ ಭರತ್‌ರಾಜ್ ವಿಭಿನ್ನ ಹೇಳಿಕೆ ನೀಡಿ, ರಜನೀಕಾಂತ್ ಅವರು ನಿರ್ಮಾಪಕರ ಪರಿಸ್ಥಿತಿಯನ್ನೂ ಗಮನಕ್ಕೆ ತೆಗೆದುಕೊಂಡಿದ್ದಾರೆ ಎಂದಿದ್ದಾರೆ. "ಅವರ ಹೇಳಿಕೆ ಅವರ ಮಾನವೀಯ ಗುಣಕ್ಕೆ ಹಿಡಿದ ಕೈಗನ್ನಡಿ. ಮಾತ್ರವಲ್ಲದೆ ತನ್ನ ಚಿತ್ರವನ್ನು ಕರ್ನಾಟಕದ ಅಭಿಮಾನಿಗಳೂ ನೋಡಲಿ ಎಂಬ ಒಳ್ಳೆಯತನವನ್ನು ತೋರಿಸುತ್ತದೆ" ಎಂದು ಬೆಂಬಲಿಸಿದ್ದಾರೆ.

ಹಾಗೆಯೇ ಇನ್ನೋರ್ವ ಖ್ಯಾತ ನಟಿ ಖುಶ್ಬೂ ಸಹಿತ, ಕ್ಷಮೆ ಕೇಳಿದ್ದರಲ್ಲಿ ತಪ್ಪಿಲ್ಲ ಎನ್ನುವ ಮೂಲಕ ರಜನಿಯವರನ್ನು ಬೆಂಬಲಿಸಿದ್ದಾರೆ.

ಹೈದರಾಬಾದ್ ಮೂಲದ ಟಿವಿ-9 ಕನ್ನಡ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಜನಿ ಅವರು, ಹೊಗೇನಕಲ್ ವಿವಾದ ಭುಗಿಲೆದ್ದ ಸಂದರ್ಭದಲ್ಲಿ ತಾನು ಒದೆಯಿರಿ ಎಂದಿದ್ದು ಕನ್ನಡಿಗರ ಹೆಸರಲ್ಲಿ ಕಿಡಿಗೇಡಿ ಕೃತ್ಯ ಮಾಡುತ್ತಿದ್ದ ವ್ಯಕ್ತಿಗಳನ್ನು ಉದ್ದೇಶಿಸಿ ಎಂದು ಸ್ಪಷ್ಟಪಡಿಸಿದ್ದರು.
ಮತ್ತಷ್ಟು
ಅತ್ಯಾಚಾರಿ ಮಗನನ್ನು ಪೊಲೀಸರಿಗೊಪ್ಪಿಸಿದ ದಿಟ್ಟೆ!
ಅನ್ಯಧರ್ಮೀಯಳ ಮದುವೆ: ಹಿಂದೂ ಯುವಕನ ಶಿರಚ್ಛೇದ
ಅಣು ಒಪ್ಪಂದ: ಎನ್‌ಎಸ್‌ಜಿ ಒಪ್ಪಿಗೆ ಸುಲಭವಲ್ಲ
ಐತಿಹಾಸಿಕ 'ಅಣು' ದಿನ: ಮನಮೋಹನ್ ಸಿಂಗ್
ಕಾವೇರಿದ ಪ್ರತಿಭಟನೆ: ಜಮ್ಮುವಿನಲ್ಲಿ ಸೇನೆಗೆ ಬುಲಾವ್
'ಅಣು' ಆತಂಕ ನಿಜವಾಗಿದೆ: ಎಡಪಕ್ಷಗಳ ಪ್ರತಿಕ್ರಿಯೆ