ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಜಮ್ಮುವಿನಲ್ಲಿ ಉಮಾಭಾರತಿ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಮ್ಮುವಿನಲ್ಲಿ ಉಮಾಭಾರತಿ ಬಂಧನ Search similar articles
ಅಮರನಾಥ್ ಭೂ ವಿವಾದ ಹಿಂಸಾಚಾರ ಭುಗಿಲೆದ್ದಿರುವ ತನ್ಮಧ್ಯೆಯೇ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಅವರನ್ನು ಶನಿವಾರ ಜಮ್ಮುನಿನಲ್ಲಿ ಬಂಧಿಸಲಾಗಿದ್ದು, ಏತನ್ಮಧ್ಯೆ ಸಾದ್ವಿ ರಿತಂಬರಿಯನ್ನು ವಾಪಸ್ ಕಳುಹಿಸಲಾಗಿದೆ ಎಂದು ಜಮ್ಮು ಪೊಲೀಸ್ ಮೂಲಗಳು ತಿಳಿಸಿವೆ.

ಉಮಾಭಾರತಿ ಶನಿವಾರ ಮುಂಜಾನೆ ನವದೆಹಲಿಯಿಂದ ಜಮ್ಮುವಿಗೆ ಆಗಮಿಸಿದ್ದು, ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಲು ಸಿದ್ದತೆ ನಡೆಸುತ್ತಿರುವ ಸಂದರ್ಭದಲ್ಲಿ ಪೊಲೀಸರು ಅವರನ್ನು ಬಂಧಿಸಲಾಗಿತ್ತು. ಬಳಿಕ ಅವರನ್ನು ಉದಾಂಪುರ್ ಜಿಲ್ಲೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

'ಫೈರ್‌ಬ್ರ್ಯಾಂಡ್' ಖ್ಯಾತಿಯ ಮತ್ತೊಬ್ಬ ನಾಯಕಿ ಸಾದ್ವಿ ರಿತಂಬರಿ ಅವರಿಗೆ ಜಮ್ಮುವನ್ನು ಪ್ರವೇಶಿಸಲು ಪೊಲೀಸರು ಅನುಮತಿಯನ್ನು ನಿರಾಕರಿಸಿ, ಅವರನ್ನು ಜಮ್ಮು ವಿಮಾನ ನಿಲ್ದಾಣದಿಂದ ಮರಳಿ ದೆಹಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಜಮ್ಮು-ಕಾಶ್ಮಿರದ ಪಕ್ಷದ ಉಸ್ತುವಾರಿಯನ್ನು ಹೊತ್ತಿರುವ ಅರುಣ್ ಜೇಟ್ಲಿ ಅವರು ಬಿಜೆಪಿ ಕೇಂದ್ರ ಕಚೇರಿಗೆ ತೆರಳುವ ಮುನ್ನ ಒಂದು ಗಂಟೆಗಳ ಕಾಲ ತಡೆಹಿಡಿಯಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ರಜನಿ ವಿಷಾದ: ತಮಿಳುನಾಡಿನಲ್ಲಿ ವಿವಾದ!
ಧರ್ಮ-ಭಯೋತ್ಪಾದನೆ ಸಂಬಂಧ: ಮುಸ್ಲಿಮರ ಪ್ರತಿಭಟನೆ
ಅತ್ಯಾಚಾರಿ ಮಗನನ್ನು ಪೊಲೀಸರಿಗೊಪ್ಪಿಸಿದ ದಿಟ್ಟೆ!
ಅನ್ಯಧರ್ಮೀಯಳ ಮದುವೆ: ಹಿಂದೂ ಯುವಕನ ಶಿರಚ್ಛೇದ
ಅಣು ಒಪ್ಪಂದ: ಎನ್‌ಎಸ್‌ಜಿ ಒಪ್ಪಿಗೆ ಸುಲಭವಲ್ಲ
ಐತಿಹಾಸಿಕ 'ಅಣು' ದಿನ: ಮನಮೋಹನ್ ಸಿಂಗ್