ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಟ್ರಕ್ ದುರಂತದಲ್ಲಿ ಸಾವಿನ ಸಂಖ್ಯೆ 40ಕ್ಕೆ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟ್ರಕ್ ದುರಂತದಲ್ಲಿ ಸಾವಿನ ಸಂಖ್ಯೆ 40ಕ್ಕೆ ಏರಿಕೆ Search similar articles
ಬಿಹಾರದ ಲಕಿಸರಾಯ್ ಜಿಲ್ಲೆಯಲ್ಲಿ ಸಂಭವಿಸಿದ ಟ್ರಕ್ ದುರಂತದಲ್ಲಿ ಸತ್ತವರ ಸಂಖ್ಯೆ ಏರಿಕೆಯಾಗಿದೆ. ನಿನ್ನೆ ನಡೆದ ಅಫಘಾತದಲ್ಲಿ ಗಾಯಗೊಂಡಿದ್ದ ಇತರ ಐದು ಜನರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಕಳೆದ ರಾತ್ರಿ, ಇಳುವರಿಯಾಗಿದ್ದ ಬೆಳೆ ಮತ್ತು ಜನರನ್ನು ಒತ್ತಾಗಿ ತುಂಬಿಕೊಂಡು ಹೊತ್ತೊಯ್ಯುತ್ತಿದ್ದ ಟ್ರಕ್, ಘೊಂಗ್ಸಾದ ಸಮೀಪ ತೊರೆಯೊಂದಕ್ಕೆ ಉರುಳಿ ಸಂಭವಿಸಿದ ದುರಂತದಲ್ಲಿ 35 ಮಂದಿ ರೈತರು ಸತ್ತಿದ್ದು, 15 ಮಂದಿ ಗಾಯಗೊಂಡಿದ್ದರು. ಅವರಲ್ಲಿ 10 ಮಂದಿ ತೀವ್ರವಾಗಿ ಗಾಯಗೊಂಡಿದ್ದರು.

ಜಮಿಯ್ ಜಿಲ್ಲೆಯ ಸಿಖಂದ್ರದ ಆಸ್ಪತ್ರೆಗೆ ಅವರನ್ನು ಸೇರಿಸಲಾಗಿತ್ತು. ಗಾಯಗೊಂಡಿದ್ದ 10 ಮಂದಿಯಲ್ಲಿ, ಐದು ಮಂದಿಯು ತೀವ್ರ ಜೀವನ್ಮರಣ ಹೋರಾಟದ ಬಳಿಕ ಮೃತರಾಗಿದರು ಎಂದು ಸೂಪರಿಂಡೆಂಟ್ ಆಫ್ ಪೋಲಿಸ್ ಎಸ್.ಪಿ.ಶುಕ್ಲಾ ತಿಳಿಸಿದ್ದಾರೆ.

ತೊರೆ ಸಮೀಪದಲ್ಲಿ ಟ್ರಕ್ ಚಾಲಕ ಹತೋಟಿ ಕಳೆದುಕೊಂಡ ಪರಿಣಾಮ, ಈ ದುರಂತ ಸಂಭವಿಸಿತು. ಟ್ರಕ್‌ನಲ್ಲಿದ್ದ ಜನರ ಮೇಲೆ ಬೆಳೆಯ ಹೊರೆ ಮತ್ತು ಟ್ರಕ್, ತೊರೆಗೆ ಉರುಳಿದ ಪರಿಣಾಮ ಬಹತೇಕ ಮಂದಿ ಮರಣ ಹೊಂದಿದರು ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು
ಜಮ್ಮುವಿನಲ್ಲಿ ಉಮಾಭಾರತಿ ಬಂಧನ
ರಜನಿ ವಿಷಾದ: ತಮಿಳುನಾಡಿನಲ್ಲಿ ವಿವಾದ!
ಧರ್ಮ-ಭಯೋತ್ಪಾದನೆ ಸಂಬಂಧ: ಮುಸ್ಲಿಮರ ಪ್ರತಿಭಟನೆ
ಅತ್ಯಾಚಾರಿ ಮಗನನ್ನು ಪೊಲೀಸರಿಗೊಪ್ಪಿಸಿದ ದಿಟ್ಟೆ!
ಅನ್ಯಧರ್ಮೀಯಳ ಮದುವೆ: ಹಿಂದೂ ಯುವಕನ ಶಿರಚ್ಛೇದ
ಅಣು ಒಪ್ಪಂದ: ಎನ್‌ಎಸ್‌ಜಿ ಒಪ್ಪಿಗೆ ಸುಲಭವಲ್ಲ