ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನೈನಾ ದೇವಿ ಮಂದಿರದಲ್ಲಿ ಕಾಲ್ತುಳಿತ: 100 ಭಕ್ತರ ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೈನಾ ದೇವಿ ಮಂದಿರದಲ್ಲಿ ಕಾಲ್ತುಳಿತ: 100 ಭಕ್ತರ ಸಾವು Search similar articles
ಸಿಮ್ಲಾ: ಬಿಲಾಸ್‌ಪುರ್ ಜಿಲ್ಲೆಯಲ್ಲಿರುವ ನಗರದಲ್ಲಿರುವ ಪ್ರಖ್ಯಾತ ನೈನಾ ದೇವಿ ಮಂದಿರದಲ್ಲಿ ಕಾಲ್ತುಳಿತ ಉಂಟಾಗಿ 100 ಮಂದಿ ಸಾವನ್ನಪ್ಪಿದ್ದು ಸುಮಾರು 200 ಭಕ್ತರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಾಲ್ತುಳಿತದಲ್ಲಿ 30 ಮಕ್ಕಳು ಸೇರಿದಂತೆ ಸುಮಾರು 125 ಭಕ್ತರು ಸಾವನ್ನಪ್ಪಿದ್ದು 500ಕ್ಕೂ ಹೆಚ್ಚ ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪರ್ವತ ಪ್ರದೇಶದಲ್ಲಿರುವ ಮಂದಿರದಲ್ಲಿ ಭೂಕುಸಿತವಾಗುತ್ತಿದೆ ಎನ್ನುವ ಉಹಾಪೋಹಗಳ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದ ಭಕ್ತರು ಹೊರಬರಲು ಯತ್ನಿಸಿದಾಗ ಗೋಡೆಯೊಂದು ಕುಸಿದು ಅನೇಕ ಭಕ್ತರು ಕಣಿವೆಗೆ ತಳ್ಳಲ್ಪಟ್ಟರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರವಿವಾರವಾಗಿದ್ದರಿಂದ ನವರಾತ್ರಿ ಮೇಳದಲ್ಲಿ ಭಾಗವಹಿಸಲು ಮಂದಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಸುಮಾರು 50 ಸಾವಿರ ಸಂಖ್ಯೆಯ ಭಕ್ತರು ಮಂದಿರದಲ್ಲಿ ನಡೆಯುತ್ತಿದ್ದ ಪೂಜೆಯಲ್ಲಿ ಪಾಲ್ಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು
ಸಚಿವ ಅರ್ಜುನ್‌ಸಿಂಗ್ ಆಸ್ಪತ್ರೆಗೆ ದಾಖಲು
ಟ್ರಕ್ ದುರಂತದಲ್ಲಿ ಸಾವಿನ ಸಂಖ್ಯೆ 40ಕ್ಕೆ ಏರಿಕೆ
ಜಮ್ಮುವಿನಲ್ಲಿ ಉಮಾಭಾರತಿ ಬಂಧನ
ರಜನಿ ವಿಷಾದ: ತಮಿಳುನಾಡಿನಲ್ಲಿ ವಿವಾದ!
ಧರ್ಮ-ಭಯೋತ್ಪಾದನೆ ಸಂಬಂಧ: ಮುಸ್ಲಿಮರ ಪ್ರತಿಭಟನೆ
ಅತ್ಯಾಚಾರಿ ಮಗನನ್ನು ಪೊಲೀಸರಿಗೊಪ್ಪಿಸಿದ ದಿಟ್ಟೆ!