ಜಮ್ಮು : ಪೊಲೀಸ್ ಭದ್ರತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಜಮ್ಮು ತುರ್ತು ಪರಿಸ್ಥಿತಿಯ ರೀತಿಯಲ್ಲಿ ಮುಂದುವರೆದಿದೆ. ಆದರೆ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಪರಿಣಾಮಗಳನ್ನು ಕುರಿತಂತೆ ಚಾನೆಲ್‌ಗಳು ನೇರ ಪ್ರಸಾರ ಮಾಡುತ್ತಿರುವ ಬಗ್ಗೆ ಸೇನೆ ಕಿಡಿ ಕಾರಿದೆ.
ಸೇನೆಯು ತೊಂದರೆಗೊಳಗಾಗಿರುವ ಎರಡೂ ಜಿಲ್ಲೆಗಳಲ್ಲಿ ಪಥಸಂಚಲನೆಯನ್ನು ನಡೆಸಿದ್ದು, ವದಂತಿಗಳು ಕ್ಷಿಪ್ರವಾಗಿ ಹರಡುತ್ತವೆ ಎನ್ನುವ ಕಾರಣದಿಂದ ಎಸ್ ಎಂ ಎಸ್ ಸೇವೆಯನ್ನು ರದ್ದುಗೊಳಿಸಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪೊಲೀಸ್ ಅಧಿಕಾರಿಗಳು ಮತ್ತು ನಾಗರೀಕರು, ಉದ್ವಿಗ್ನ ಪರಿಸ್ಥಿತಿಯ ಎರಡು ಟೆಲಿವಿಷನ್ ಚಾನೆಲ್‌ನಲ್ಲಿ ಸುದ್ಧಿಯನ್ನು ವರದಿ ಮಾಡುತ್ತಿದ್ದ ಟಿವಿ ಚಾನೆಲ್‌ನ ವರದಿಗಾರರನ್ನು ಮತ್ತು ಕ್ಯಾಮರಾಮನ್‌ಗಳನ್ನು ಥಳಿಸಿದ್ದಾರೆ.
ಅಮರನಾಥ್ ಭೂ ವಿವಾದವು ಉದ್ವಿಗ್ನತೆಯಿಂದ ಹೊತ್ತಿ ಉರಿಯುತ್ತಿರುವ ಪರಿಸ್ಥಿತಿಗೆ ಇಂಧನ ಸುರಿಯುತ್ತಿದ್ದಾರೆಂದು ರಾಜ್ಯ ಸರ್ಕಾರವು ಸಹ ಎರಡು ಟಿವಿ ಚಾನೆಲ್ ಅನ್ನು ಆರೋಪಿ ಎಂದು ತಿಳಿಸಿದೆ.
|