ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಜೀವ್ ಗಾಂಧಿ ಹತ್ಯೆ: ನಳಿನಿ ಪಶ್ಚಾತ್ತಾಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜೀವ್ ಗಾಂಧಿ ಹತ್ಯೆ: ನಳಿನಿ ಪಶ್ಚಾತ್ತಾಪ Search similar articles
ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯಾ ಆರೋಪದಲ್ಲಿ ಜೀವಾವಧಿ ಶಿಕ್ಷೆಯನ್ನು ಎದುರಿಸುತ್ತಿರುವ ನಳಿನಿ, ಮಾಜಿ ಪ್ರಧಾನಿಗಳ ಹತ್ಯೆಯ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.

"ರಾಜೀವ್ ಗಾಂಧಿ ಒಬ್ಬ ಪ್ರಭಾವಿ ನಾಯಕರಾಗಿದ್ದು, ಅವರ ಹತ್ಯೆ ದೇಶಕ್ಕೆ ಅತಿ ದೊಡ್ಡ ನಷ್ಟವಾಗಿದೆ" ಎಂದು ರಾಜೀವ್ ಗಾಂಧಿ ಹತ್ಯೆಯಲ್ಲಿ ಭಾಗಿಯಾಗಿದ್ದ ಐದು ಮಂದಿಯ ತಂಡದಲ್ಲಿ ಬುದುಕುಳಿದಿರುವ ಏಕೈಕ ಆರೋಪಿ ನಳಿನಿ, ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಇಮೇಲ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಹತ್ಯೆಯ ಮುಖ್ಯ ಆರೋಪಿಗಳಾದ ಶಿವರಾಸನ್, ಶುಭಾ ಮತ್ತು ಧನು ಈಗಾಗಲೇ ಸಾವಿಗೀಡಾಗಿರುವುದರಿಂದ ಹತ್ಯೆಯ ಹಿಂದಿನ ನೈಜ ಸಂಚುಗಾರರನ್ನು ಇನ್ನೂ ಬಯಲಿಗೆಳೆಯಲಾಗಿಲ್ಲ ಎಂದು ನಳಿನಿ ಹೇಳಿದ್ದಾರೆ.

1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬೂರಿನಲ್ಲಿ ಧನು ಎಂಬ ಆತ್ಮಹತ್ಯಾ ಬಾಂಬರ್ ಬಾಂಬ್ ದಾಳಿ ನಡೆಸಿದ್ದ ಫಲವಾಗಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸೇರಿದಂತೆ 15 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಎಲ್‌ಟಿಟಿಇ ಛಾಯಾಗ್ರಾಹಕ ಹರಿಬಾಬು ತೆಗೆದ ಫೋಟೋದ ಆಧಾರದಲ್ಲಿ ತನಿಖೆಯ ವೇಳೆ ಬಾಂಬ್‌ಸ್ಫೋಟಕ್ಕೆ ಸಂಬಂಧವಿರುವ ಆರೋಪದಲ್ಲಿ ನಳಿನಿ ಮತ್ತು ಇತರರನ್ನು ಬಂಧಿಸಲಾಗಿತ್ತು.

ಈ ನಡುವೆ, ತನ್ನ ಮತ್ತು ಪ್ರಿಯಾಂಕ ಗಾಂಧಿ ನಡುವಿನ ಭೇಟಿಯು ಇತಿಹಾಸ ಎಂಬುದಾಗಿ ನಳಿನಿ ತನ್ನ ವಕೀಲ ಇಲಂಗೋವನ್ ಅವರ ಮುಖಾಂತರದ ಇಮೇಲ್ ಉತ್ತರದಲ್ಲಿ ತಿಳಿಸಿದ್ದಾರೆ.

ಪ್ರಿಯಾಂಕ ಗಾಂಧಿ ಅವರಿಂದ ನಳಿನಿ ಅವರ ಭೇಟಿಯು ಅದ್ವಿತೀಯ ಎಂದು ಇದೇ ವೇಳೆ ಬಣ್ಣಿಸಿರುವ ವಕೀಲ ಇಲಂಗೋವನ್, ಇದರ ಹಿಂದಿನ ಸತ್ಯವನ್ನು ಪ್ರಿಯಾಂಕ ಇನ್ನಷ್ಟೇ ಬಹಿರಂಗಪಡಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಮತ್ತಷ್ಟು
ಹಿಮಾಚಲ ಪ್ರದೇಶ ಕಾಲ್ತುಳಿತ: ಸಾವಿನ ಸಂಖ್ಯೆ 145
ಅಮರನಾಥ್- ಮಾಧ್ಯಮಗಳ ವಿರುದ್ದ ಸೇನೆ ಅಕ್ರೋಶ
ನೈನಾ ದೇವಿ ಮಂದಿರದಲ್ಲಿ ಕಾಲ್ತುಳಿತ: 100 ಭಕ್ತರ ಸಾವು
ಸಚಿವ ಅರ್ಜುನ್‌ಸಿಂಗ್ ಆಸ್ಪತ್ರೆಗೆ ದಾಖಲು
ಟ್ರಕ್ ದುರಂತದಲ್ಲಿ ಸಾವಿನ ಸಂಖ್ಯೆ 40ಕ್ಕೆ ಏರಿಕೆ
ಜಮ್ಮುವಿನಲ್ಲಿ ಉಮಾಭಾರತಿ ಬಂಧನ