ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಜಮ್ಮು: 5 ದಿನಗಳವರೆಗೆ ಕರ್ಫ್ಯೂ ವಿಸ್ತರಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಮ್ಮು: 5 ದಿನಗಳವರೆಗೆ ಕರ್ಫ್ಯೂ ವಿಸ್ತರಣೆ Search similar articles
ಜಮ್ಮುವಿನಲ್ಲಿ ಐದು ದಿನಗಳವರೆಗೆ ಕರ್ಫ್ಯೂವನ್ನು ಅಲ್ಲಿನ ಆಡಳಿತೆಯು ವಿಸ್ತರಿಸಿದ್ದು, ಈ ಮೂಲಕ ಕಳೆದ ಕೆಲವು ದಿನಗಳಿಂದ ಜಮ್ಮುವನ್ನು ತಲ್ಲಣಗೊಳಿಸಿರುವ ಅಮರನಾಥ್ ಭೂವಿವಾದ ಕುರಿತಾದ ಪ್ರತಿಭಟನೆಯು ತಣ್ಣಗಾಗುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ.

ಜಮ್ಮು ಮತ್ತು ಕಾಶ್ಮೀರದ ಬಾದ್ರಾವದಲ್ಲಿ ಕರ್ಫ್ಯೂವನ್ನು ವಿಧಿಸಲಾಗಿದ್ದು, ಇದರೊಂದಿಗೆ ಇತರ ಐದು ನಗರಗಳಲ್ಲಿಯೂ ಜಾರಿಗೆ ತರಲಾಗಿದೆ. ಈ ಪ್ರದೇಶದಲ್ಲಿ ರವಿವಾರ ಕೋಮು ಹಿಂಸಾಚಾರ ನಡೆದಿರುವ ಹಿನ್ನೆಲೆಯಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಇಂದು ಅದನ್ನು ಐದು ದಿನಗಳವರೆಗೆ ಮುಂದೂಡಲಾಗಿದೆ.

ಜಮ್ಮು, ಸಾಂಬಾ, ರಾಜೌರಿ ಮತ್ತು ಉದಾಂಪುರಗಳು ಈಗಾಗಲೇ ಕಳೆದ ಕೆಲವು ದಿನಗಳಿಂದ ಕರ್ಫ್ಯೂ ಎದುರಿಸುತ್ತಿವೆ.

ಏತನ್ಮಧ್ಯೆ, ಸೈಯದ್ ಅಲಿ ಶಾ ಗಿಲಾನಿ ನೇತೃತ್ವದ ಹುರಿಯತ್ ಕಾನ್ಫರೆನ್ಸ್‌ನಿಂದ ಕರೆ ನೀಡಲಾದ ಪ್ರತಿಭಟನೆಗೆ ಪೂರ್ವಾಭಾವಿಯಾಗಿ, ಶ್ರೀನಗರದಾದ್ಯಂತ ರಕ್ಷಣಾ ಪಡೆಗಳು ಕಣ್ಣಿಟ್ಟಿದ್ದು, ಕಟ್ಟೆಚ್ಚರ ವಹಿಸಲಾಗಿದೆ.
ಮತ್ತಷ್ಟು
ಆಶ್ರಮ ವಿದ್ಯಾರ್ಥಿಗಳ ಸಾವು: ರಿತುರಾಜ್ ಬಂಧನ
ಅಮರನಾಥ್ ಭೂವಿವಾದ: ಮಾತುಕತೆಗೆ ಸೋನಿಯಾ ಕರೆ
ರಾಜೀವ್ ಗಾಂಧಿ ಹತ್ಯೆ: ನಳಿನಿ ಪಶ್ಚಾತ್ತಾಪ
ಹಿಮಾಚಲ ಪ್ರದೇಶ ಕಾಲ್ತುಳಿತ: ಸಾವಿನ ಸಂಖ್ಯೆ 145
ಅಮರನಾಥ್- ಮಾಧ್ಯಮಗಳ ವಿರುದ್ದ ಸೇನೆ ಅಕ್ರೋಶ
ನೈನಾ ದೇವಿ ಮಂದಿರದಲ್ಲಿ ಕಾಲ್ತುಳಿತ: 100 ಭಕ್ತರ ಸಾವು