ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಯನಾದೇವಿ ದರ್ಶನಕ್ಕೆ ಭಕ್ತಾದಿಗಳ ಸಾಗರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಯನಾದೇವಿ ದರ್ಶನಕ್ಕೆ ಭಕ್ತಾದಿಗಳ ಸಾಗರ Search similar articles
ಹಿಮಾಚಲ ಪ್ರದೇಶದ ನಯನಾದೇವಿ ಮಂದಿರದಲ್ಲಿ 145 ಜನರ ಸಾವಿಗೆ ಕಾರಣವಾದ ಕಾಲ್ತುಳಿತ ದುರಂತದ ಮರುದಿನ, ದೇವಿಯ ದರ್ಶನಕ್ಕೆ ನೂರಾರು ಭಕ್ತಾದಿಗಳು ಆಗಮಿಸುತ್ತಿರುವುದರೊಂದಿಗೆ, ದೇವಾಲಯದಲ್ಲಿನ ಧಾರ್ಮಿಕ ಹುರುಪು ಮರುಕಳಿಸುತ್ತಿದೆ.

ರವಿವಾರ ಮಧ್ಯರಾತ್ರಿಯಿಂದ 1.5 ಕಿ.ಮೀ ದೂರದ ಬೆಟ್ಟವನ್ನು ಹತ್ತಲು ಭಕ್ತಾದಿಗಳು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

"ಪಂಜಾಬ್‌ನ ಶಿರ್ಹಿಂದ್‌ನಿಂದ ಕಳೆದ ಆರು ದಿನಗಳಿಂದ ನಡೆದುಕೊಂಡು ಬರುತ್ತಿದ್ದು, ಈಗಷ್ಟೇ ದೇವಾಲಯ ತಲುಪಿದೆವು. ದುರಂತದ ಬಗ್ಗೆ ನಿನ್ನೆ ತಿಳಿದುಬಂದಿದ್ದು, ಆದರೆ, ಅದು ಭಕ್ತಾದಿಗಳ ಆಗಮನದಲ್ಲಿ ಯಾವುದೇ ಬದಲಾವಣೆಯನ್ನು ಉಂಟುಮಾಡಿಲ್ಲ" ಎಂದು ದೇವಾಲಯಕ್ಕೆ ಬೆಟ್ಟಏರಿ ತಲುಪಿದ ಭಕ್ತಾದಿಯೊಬ್ಬರು ಹೇಳುತ್ತಾರೆ.

ಬೆಟ್ಟ ಉರುಳುತ್ತಿದೆ ಎಂಬ ಗಾಳಿಸುದ್ದಿಯಿಂದ ಕಂಗಾಲಾದ ಜನರು ಹೊರಗೋಡತೊಡಗಿದಾಗ ಕಾಲ್ತುಳಿತ ಉಂಟಾಗಿದ್ದು ಅನೇಕ ಸಾವು ನೋವು ಸಂಭವಿಸಿದ್ದರೂ, ಸೋಮವಾರ ದೇವಾಲಯದಲ್ಲಿ ಧಾರ್ಮಿಕ ಚಟುವಟಿಕೆಗಳು ಎಂದಿನಂತೆ ಪ್ರಾರಂಭಗೊಂಡಿದೆ.

ಈ ದುರಂತವು ದುರದೃಷ್ಟಕರವಾಗಿದೆ. ಆದರೆ, ಇದು ದೇವಾಲಯಕ್ಕೆ ಭಕ್ತಾದಿಗಳ ಹರಿವಿನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ದೇವಾಲಯದ ಪುರೋಹಿತ ರಾಜೇಶ್ ಕುಮಾರ್ ಹೇಳುತ್ತಾರೆ.

ನಯನಾದೇವಿ ಮಂದಿರವು ಹಿಮಾಚಲ ಪ್ರದೇಶದ ಬಿಲಾಸ್ಪುರ ಜಿಲ್ಲೆಯಲ್ಲಿದ್ದು, ಶಿಮ್ಲಾದಿಂದ 160 ಕಿ.ಮೀ ದೂರದಲ್ಲಿದೆ. ಇದು ದೇಶದಲ್ಲಿರುವ ಹಿಂದೂಗಳ 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ.
ಮತ್ತಷ್ಟು
ಜಮ್ಮು: 5 ದಿನಗಳವರೆಗೆ ಕರ್ಫ್ಯೂ ವಿಸ್ತರಣೆ
ಆಶ್ರಮ ವಿದ್ಯಾರ್ಥಿಗಳ ಸಾವು: ರಿತುರಾಜ್ ಬಂಧನ
ಅಮರನಾಥ್ ಭೂವಿವಾದ: ಮಾತುಕತೆಗೆ ಸೋನಿಯಾ ಕರೆ
ರಾಜೀವ್ ಗಾಂಧಿ ಹತ್ಯೆ: ನಳಿನಿ ಪಶ್ಚಾತ್ತಾಪ
ಹಿಮಾಚಲ ಪ್ರದೇಶ ಕಾಲ್ತುಳಿತ: ಸಾವಿನ ಸಂಖ್ಯೆ 145
ಅಮರನಾಥ್- ಮಾಧ್ಯಮಗಳ ವಿರುದ್ದ ಸೇನೆ ಅಕ್ರೋಶ