ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವೋಟಿಗಾಗಿ ನೋಟು: ಎಸ್‌ಪಿ ನಾಯಕರಿಂದ ಸಿಡಿ ಬಿಡುಗಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೋಟಿಗಾಗಿ ನೋಟು: ಎಸ್‌ಪಿ ನಾಯಕರಿಂದ ಸಿಡಿ ಬಿಡುಗಡೆ Search similar articles
ವೋಟಿಗಾಗಿ ನೋಟು ಪ್ರಕರಣಕ್ಕೆ ಸಂಬಂಧಿಸಿದ ಸಿಡಿಯನ್ನು ಯುಪಿಎ ಮಿತ್ರ ಪಕ್ಷವು ಬಿಡುಗಡೆಗೊಳಿಸಿದ್ದು, ಲೋಕಸಭೆಯಲ್ಲಿನ ವಿಶ್ವಾಸಗೊತ್ತುವಳಿಯ ವೇಳೆ ಬಿಜೆಪಿಯು ನಡೆಸಿದ ಪ್ರಹಸನವು ರಾಜಕೀಯ ಲಾಭಕ್ಕಾಗಿ ಎಂದು ಆರೋಪಿಸಿದೆ.

ಆರ್‌ಜೆಡಿ ಮತ್ತು ಎಲ್‌ಜಿಪಿ ನಾಯಕರಾದ ಲಾಲೂ ಪ್ರಸಾದ್ ಹಾಗೂ ರಾಮ್ ವಿಲಾಸ್ ಪಾಸ್ವಾನ್ ಅವರೊಂದಿಗೆ ಜಂಟಿಯಾಗಿ ಸಿಡಿ ಬಿಡುಗಡೆಗೊಳಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್, ಬಿಜೆಪಿ ನಾಯಕರ ಹೇಳಿಕೆಗಳೆಲ್ಲವೂ ಸುಳ್ಳು ಎಂದು ಹೇಳಿದ್ದಾರೆ.

ಬಿಜೆಪಿ ಸಂಸದರಿಗೆ ಹಣ ನೀಡಲು ಕೆಲವು ವ್ಯಕ್ತಿಗಳು ಸಂಸದರ ಮನೆಗೆ ತೆರಳಿರುವಾಗ ಈ ಹಣವನ್ನು ಪೊಲೀಸರ ಕೈಗೇಕೆ ಒಪ್ಪಿಸಲಿಲ್ಲ ಎಂಬುದಾಗಿ ಮುಲಾಯಂ ಸಿಂಗ್ ಇದೇ ವೇಳೆ ಪ್ರಶ್ನಿಸಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸುವ ಸಲುವಾಗಿ ಬಿಜೆಪಿಯು ಇಂತಹ ನಾಟಕವಾಡಿದೆ. ಅಲ್ಲದೆ, ಇದು ಬಿಜೆಪಿಯ ಪೂರ್ವಯೋಜಿತ ಕಾರ್ಯವಾಗಿದೆ ಎಂದು ರಾಮ್ ವಿಲಾಸ್ ಪಾಸ್ವಾನ್ ಆರೋಪಿಸಿದ್ದಾರೆ.

ಸಂಸದ ಸಂಜೀವ ಸಕ್ಸೇನ ಅರುಣ್ ಜೇಟ್ಲಿ ಅವರಿಂದ ಹಣ ತುಂಬಿದ ಚೀಲವನ್ನು ಪಡೆದಿದ್ದಾರೆ ಎಂದು ಮುಲಾಯಂ ಇದೇ ವೇಳೆ ಆರೋಪಿಸಿದರು. ಅಲ್ಲದೆ ಪೊಲೀಸರು ನೋಟುಗಳ ಬೆರಳಚ್ಚನ್ನು ಯಾಕೆ ಪಡೆದಿಲ್ಲ ಎಂದು ಪ್ರಶ್ನಿಸಿದ ಅವರು ಯುಪಿಎ ವಿಶ್ವಾಸ ಮತ ಜಯಿಸುತ್ತದೆಂಬ ಭಯದಿಂದಲೇ ಬಿಜೆಪಿ ಇಂತಹ ನಾಟಕವಾಡಿದೆ. ಅವರಿಗೆ ಮತದಾನವನ್ನು ಸ್ಥಗಿತಗೊಳಿಸಬೇಕಿತ್ತು ಮತ್ತು ಮುಂದಿನ ಚುನಾವಣೆ ವೇಳೆಗೆ ಇದನ್ನೊಂದು ವಿವಾದವಾಗಿಸಬೇಕಿತ್ತು" ಎಂದು ಅವರು ದೂರಿದ್ದಾರೆ.

ಏತನ್ಮಧ್ಯೆ, ಅಮರ್‌ಸಿಂಗ್ ಖಾಸಗಿ ಸಹಚರರ ಮೊಬೈಲ್ ಫೋನಿನ ವಿವರಗಳು ಮತ್ತು ಕುಟುಕು ಕಾರ್ಯಾಚರಣೆ ವೇಳೆಯ ಧ್ವನಿಮುದ್ರಣದ ವಿವರಗಳ ನಕಲಿಪ್ರತಿಗಳನ್ನು ಬಿಜೆಪಿಯು ಹೊಂದಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರ್ಜುನ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು
ಸೇತುಬಂಧ: ಕರುಣಾ ವಿರುದ್ಧ ವಾರಂಟ್ ಎಚ್ಚರಿಕೆ
ನಯನಾದೇವಿ ದರ್ಶನಕ್ಕೆ ಭಕ್ತಾದಿಗಳ ಸಾಗರ
ಜಮ್ಮು: 5 ದಿನಗಳವರೆಗೆ ಕರ್ಫ್ಯೂ ವಿಸ್ತರಣೆ
ಆಶ್ರಮ ವಿದ್ಯಾರ್ಥಿಗಳ ಸಾವು: ರಿತುರಾಜ್ ಬಂಧನ
ಅಮರನಾಥ್ ಭೂವಿವಾದ: ಮಾತುಕತೆಗೆ ಸೋನಿಯಾ ಕರೆ
ರಾಜೀವ್ ಗಾಂಧಿ ಹತ್ಯೆ: ನಳಿನಿ ಪಶ್ಚಾತ್ತಾಪ