ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಮರನಾಥ: ಸರ್ವಪಕ್ಷ ಸಭೆಗೆ ಪ್ರಧಾನಿ ಕರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮರನಾಥ: ಸರ್ವಪಕ್ಷ ಸಭೆಗೆ ಪ್ರಧಾನಿ ಕರೆ Search similar articles
ಅಮರನಾಥ ಭೂವಿವಾದಕ್ಕೆ ಸಂಬಂಧಿಸಿದಂತೆ ಭುಗಿಲೆದ್ದಿರುವ ಹಿಂಸಾಚಾರದಲ್ಲಿ ಸೋಮವಾರ ಮೂರು ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಆತಂಕಗೊಂಡಿರುವ ಪ್ರಧಾನಿ ಮನಮೋಹನ್ ಸಿಂಗ್ ಬುಧವಾರ ಸರ್ವಪಕ್ಷ ಸಭೆಯನ್ನು ಕರೆದಿದ್ದಾರೆ.

ಸರ್ವ ಭಾರತೀಯ ರಾಜಕೀಯ ಪಕ್ಷಗಳ ಹೊರತಾಗಿ, ನ್ಯಾಶನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಸಿ ಪಕ್ಷಕ್ಕೂ ಆಮಂತ್ರಣವನ್ನು ನೀಡಲಾಗಿದೆ. ಜಮ್ಮು ಕಾಶ್ಮೀರ ಪಕ್ಷಗಳ ಮನವೊಲಿಕೆ, ಅಮರನಾಥ್ ದೇವಾಲಯಕ್ಕೆ ಭೂಮಿ ಹಸ್ತಾಂತರ ರದ್ದು ಕುರಿತಂತೆ ನಡೆಯುತ್ತಿರುವ ಪ್ರತಿಭಟನೆ ನಿಯಂತ್ರಣಕ್ಕಾಗಿ ಬಿಜೆಪಿಯ ಸಹಕಾರ ಕೋರಿಕೆ ಮತ್ತು ಪ್ರತಿಭಟನೆ ಹತೋಟಿಗೆ ಕೈಗೊಳ್ಳಬೇಕಾದ ಕ್ರಮ ಮುಂತಾದವುಗಳ ಕುರಿತಾಗಿ ಸಭೆಯಲ್ಲಿ ಮಾತುಕತೆ ನಡೆಯಲಿದೆ.

ಪ್ರತಿಭಟನೆಯು ತಾರಕಕ್ಕೇರಿರುವುದರೊಂದಿಗೆ ಸಂಪೂರ್ಣ ಜಮ್ಮು ಇದರಿಂದ ಜರ್ಜರಿತಗೊಂಡಿದ್ದು, ಇದು ಜನಾಂಗೀಯ ಧ್ರುವೀಕರಣಕ್ಕೆ ದಾರಿ ಮಾಡಿಕೊಡುವ ಸಂಭಾವ್ಯತೆಯ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ನಿಯಂತ್ರಣಕ್ಕಾಗಿ ಕೇಂದ್ರವು ಬಿಜೆಪಿಯ ಸಹಕಾರವನ್ನು ನಿರೀಕ್ಷಿಸುತ್ತಿದೆ.

ಸೋಮವಾರ, ಜಮ್ಮುವಿನಿಂದ 50 ಕೀ.ಮೀ.ದೂರದಲ್ಲಿರುವ ಸಾಂಬಾದಲ್ಲಿ ಪೊಲೀಸ್ ಗೋಲಿಬಾರ್ ನಡೆಸಿದ್ದ ವೇಳೆ ಇಬ್ಬರು ಪ್ರತಿಭಟನಾಕಾರರು ಮೃತಪಟ್ಟಿದ್ದು, ಇನ್ನೊಬ್ಬ ಶ್ರೀನಗರದಲ್ಲಿ ಸಾವಿಗೀಡಾಗಿದ್ದಾನೆ. ಈ ಮೂಲಕ ಅಮರನಾಥ್ ಪ್ರತಿಭಟನೆಯಿಂದಾಗಿ ಜಮ್ಮುವಿನಲ್ಲಿ ಸಾವೀಗೀಡಾದವರ ಒಟ್ಟು ಸಂಖ್ಯೆ ಎಂಟಕ್ಕೆ ಏರಿದೆ.
ಮತ್ತಷ್ಟು
ವಕೀಲರ ರಾಜೀನಾಮೆಗೆ ಕರುಣಾನಿಧಿ ಒತ್ತಾಯ
ಅಮರ್‌ನಾಥ್ ಗಲಭೆಗೆ 3 ಬಲಿ
ಸು.ಕೋಗೆ ಬೆದರಿಕೆ: ಹೆಚ್ಚಿದ ಭದ್ರತೆ
ಯುಪಿಎ ಸಿಡಿ ಖೊಟ್ಟಿ ಎಂದ ಬಿಜೆಪಿ
ವೋಟಿಗಾಗಿ ನೋಟು: ಎಸ್‌ಪಿ ನಾಯಕರಿಂದ ಸಿಡಿ ಬಿಡುಗಡೆ
ಸೇತುಬಂಧ: ಕರುಣಾ ವಿರುದ್ಧ ವಾರಂಟ್ ಎಚ್ಚರಿಕೆ