ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕೇರಳ: ಭಾನುವಾರ ಪೆಟ್ರೋಲ್ ಪಂಪ್‌ಗೆ ರಜೆ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೇರಳ: ಭಾನುವಾರ ಪೆಟ್ರೋಲ್ ಪಂಪ್‌ಗೆ ರಜೆ? Search similar articles
ಆಗಸ್ಟ್ 15ರಿಂದ ಆರಂಭಿಸಿ ಎಲ್ಲಾ ರವಿವಾರಗಳಂದು ಪೆಟ್ರೋಲ್ ಪಂಪ್‌ಗಳನ್ನು ಮುಚ್ಚಲು ಕೇರಳ ಪಂಪ್ ನಿರ್ವಾಹಕರು ಯೋಜಿಸುತ್ತಿದ್ದು, ಇದರೊಂದಿಗೆ ದೈನಂದಿನ ವ್ಯವಹಾರದ ಅಂತ್ಯದ ಸಮಯವನ್ನು ರಾತ್ರಿ ಎಂಟುಗಂಟೆಗೆ ನಿಗದಿಪಡಿಸಲೂ ಚಿಂತಿಸಲಾಗುತ್ತಿದೆ.

ಅತ್ಯಂತ ಪ್ರಮುಖವಲ್ಲದ ಇಂಧನಕ್ಕಿಂತ ಸಾಮಾನ್ಯ ಇಂಧನದ ಕೊರತೆಯ ನಡುವೆ, ತಡರಾತ್ರಿಯ ವ್ಯವಹಾರಕ್ಕಾಗಿ ಹೆಚ್ಚು ವಿದ್ಯುತ್ ವ್ಯಯವಾಗುತ್ತಿದ್ದು, ಇದು ಪಂಪ್ ಮಾಲೀಕರ ಈ ನಿರ್ಧಾರಕ್ಕೆ ಕಾರಣವಾಗಿದೆ.

ವಿದ್ಯುತ್ ಟಾರಿಫ್ ಹೆಚ್ಚಳ, ಕಡಿಮೆ ಡೀಲರ್ ಕಮಿಶನ್, ಇಂಧನ ಕೊರತೆ ಮುಂತಾದವುಗಳಿಂದ 24x7 ವ್ಯವಹಾರ ನಡೆಸಲು ಅಸಾಧ್ಯವಾಗಿದೆ ಎಂದು ಕೇರಳ ಪೆಟ್ರೋಲಿಯಂ ಉತ್ಪನ್ನ ಒಕ್ಕೂಟದ ಜಿಲ್ಲಾ ಅಧ್ಯಕ್ಷ ರಾಧಾಕೃಷ್ಣನ್ ತಿಳಿಸಿದ್ದಾರೆ.

ಏನೇ ಆದರೂ, ಪಂಪ್ ಮಾಲೀಕರ ಈ ನಿರ್ಧಾರಕ್ಕೆ ಅನೇಕ ವಿರೋಧ ವ್ಯಕ್ತವಾಗಿದ್ದು, ಪೆಟ್ರೋಲ್ ತುರ್ತು ಅಗತ್ಯದ ಸಂದರ್ಭದಲ್ಲಿ ಈ ನಿರ್ಧಾರವು ಹೆಚ್ಚಿನ ಸಮಸ್ಯೆಯನ್ನು ನೀಡುತ್ತದೆ ಎಂದು ಅನೇಕರು ಆರೋಪಿಸಿದ್ದಾರೆ.

ಏತನ್ಮಧ್ಯೆ, ಅಗತ್ಯವಿದ್ದಲ್ಲಿ ಆವಶ್ಯಕ ಸೇವಾ ನಿರ್ವಹಣಾ ಕಾಯಿದೆಯನ್ನು ಜಾರಿಗೊಳಿಸುವುದಾಗಿ ಕೇರಳದ ಲೆಫ್ಟ್ ಡೆಮಕ್ರಟಿಕ್ ಫ್ರಂಟ್(ಎಲ್‌ಡಿಎಫ್) ಸರಕಾರ ತಿಳಿಸಿದೆ.
ಮತ್ತಷ್ಟು
ಅಮರನಾಥ: ಸರ್ವಪಕ್ಷ ಸಭೆಗೆ ಪ್ರಧಾನಿ ಕರೆ
ವಕೀಲರ ರಾಜೀನಾಮೆಗೆ ಕರುಣಾನಿಧಿ ಒತ್ತಾಯ
ಅಮರ್‌ನಾಥ್ ಗಲಭೆಗೆ 3 ಬಲಿ
ಸು.ಕೋಗೆ ಬೆದರಿಕೆ: ಹೆಚ್ಚಿದ ಭದ್ರತೆ
ಯುಪಿಎ ಸಿಡಿ ಖೊಟ್ಟಿ ಎಂದ ಬಿಜೆಪಿ
ವೋಟಿಗಾಗಿ ನೋಟು: ಎಸ್‌ಪಿ ನಾಯಕರಿಂದ ಸಿಡಿ ಬಿಡುಗಡೆ