ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕೋಲ್ಕತಾ ಗ್ರಂಥಾಲಯದಿಂದ ಅಪರೂಪದ ಪುಸ್ತಕಗಳು ಕಾಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೋಲ್ಕತಾ ಗ್ರಂಥಾಲಯದಿಂದ ಅಪರೂಪದ ಪುಸ್ತಕಗಳು ಕಾಣೆ Search similar articles
ಅಪರೂಪ ಪುಸ್ತಕಗಳ ರಾಷ್ಟ್ರೀಯ ಗುಪ್ತನಿಧಿ, ಹಸ್ತಪ್ರತಿಗಳು ಮತ್ತು ರವೀಂದ್ರನಾಥ್ ಟಾಗೋರ್, ನೇತಾಜಿ ಸುಭಾಶ್‌ಚಂದ್ರ ಭೋಸ್, ಸಾರತ್ ಚಂದ್ರ ಚಟರ್ಜಿ, ಸರೋಜಿನ ನಾಯ್ಡು ಮುಂತಾದವರ ಪತ್ರಗಳನ್ನು ಕೋಲ್ಕತ್ತಾ ರಾಷ್ಟ್ರೀಯ ಗ್ರಂಥಾಲಯದಿಂದ ಅಪಹರಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಗ್ರಂಧಾಲಯದ ಅಪರೂಪ ಪುಸ್ತರಗಳ ವಿಭಾಗದ ದಾಖಲೆಗಳೇ ಕಳೆದುಹೋಗಿರುವ ಕಾರಣ ಏನೆಲ್ಲ ಕಳವಾಗಿದೆ ಎಂಬುದು ಇನ್ನೂ ಅಸ್ಪಷ್ಟ.

ಟಾಗೋರ್ ಅವರ ಬರಹಗಳು, ನೇತಾಜಿ ಅವರ ಪತ್ರಗಳು, ಸರತ್ ಚಂದ್ರ ಮತ್ತು ವಿಭೂತಿ ಭೂಷಣ್ ಭಂಡೋಪಾಧ್ಯಾಯ ಮುಂತಾದವರ ಹಸ್ತಪ್ರತಿಗಳು ಸೇರಿದಂತೆ 18ನೇ ಶತಮಾನ ಮತ್ತು ಅದಕ್ಕಿಂತಲೂ ಹಳೆಯ ಕಾಲದ ಪುಸ್ತಗಳು ಅಪರೂಪದ ಸಂಗ್ರಹದಲ್ಲಿ ಸೇರಿದ್ದವು. ವಾಸ್ತವವಾಗಿ, ಸದಸ್ಯರಿಂದ ಮನವಿ ಮಾಡಲ್ಪಟ್ಟ ಶೇ.40ರಷ್ಟು ಪುಸ್ತಗಳು ಗ್ರಂಥಾಲಯದಲ್ಲಿ ಕಾಣೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಸಿಎಜಿಯಿಂದ ಗ್ರಂಥಾಲಯ ಕಾರ್ಯನಿರ್ವಹಣೆಯ ಕುರಿತಾದ ದೈನಂದಿನ ಪರೀಕ್ಷೆಯ ವೇಳೆ ಈ ವಿಚಾರವು ಬೆಳಕಿಗೆ ಬಂದಿದ್ದು, ಕಾಣೆಯಾದ ಪುಸ್ತಗಳ ಪತ್ತೆಗಾಗಿ ತನಿಖೆ ನಡೆಸಲು ಪ್ರಮುಖ ಪರಿಶೋಧನೆ ಸಂಸ್ಥೆಯ 11 ಸದಸ್ಯರ ತಂಡವನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಗ್ರಂಥಾಲಯದಲ್ಲಿನ ವಸ್ತುಗಳ ಬಗ್ಗೆ ಸಂಪೂರ್ಣ ವಿವರಗಳನ್ನು ಒದಗಿಸಲು ವಿಫಲರಾಗಿರುವ ಗ್ರಂಥಲಾಯದ ನಿರ್ದೇಶಕರ ವಿರುದ್ಧ ತುರ್ತು ಕ್ರಮ ಕೈಗೊಳ್ಳುವಂತೆ ಸಾಂಸ್ಕೃತಿಕ ಸಚಿವರಿಗೆ ಸಿಎಜಿ ಮನವಿ ಮಾಡಿದೆ ಎಂದೂ ಮೂಲಗಳು ಹೇಳಿವೆ.
ಮತ್ತಷ್ಟು
ಕೇರಳ: ಭಾನುವಾರ ಪೆಟ್ರೋಲ್ ಪಂಪ್‌ಗೆ ರಜೆ?
ಅಮರನಾಥ: ಸರ್ವಪಕ್ಷ ಸಭೆಗೆ ಪ್ರಧಾನಿ ಕರೆ
ವಕೀಲರ ರಾಜೀನಾಮೆಗೆ ಕರುಣಾನಿಧಿ ಒತ್ತಾಯ
ಅಮರ್‌ನಾಥ್ ಗಲಭೆಗೆ 3 ಬಲಿ
ಸು.ಕೋಗೆ ಬೆದರಿಕೆ: ಹೆಚ್ಚಿದ ಭದ್ರತೆ
ಯುಪಿಎ ಸಿಡಿ ಖೊಟ್ಟಿ ಎಂದ ಬಿಜೆಪಿ