ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಣು ಒಪ್ಪಂದ: ಸೆಪ್ಟೆಂಬರ್‌ನಲ್ಲಿ ಸಿಂಗ್-ಬುಷ್ ಭೇಟಿ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣು ಒಪ್ಪಂದ: ಸೆಪ್ಟೆಂಬರ್‌ನಲ್ಲಿ ಸಿಂಗ್-ಬುಷ್ ಭೇಟಿ? Search similar articles
ಭಾರತ ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಔಪಚಾರಿಕತೆಯನ್ನು ಪೂರ್ಣಗೊಳಿಸಿ ಒಪ್ಪಂದವನ್ನು ಪ್ರಾರಂಭಿಸಲು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅವರನ್ನು ಮುಂದಿನ ತಿಂಗಳು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮುಂದಿನ ತಿಂಗಳೊಳಗೆ ಪರಮಾಣು ಪೂರೈಕೆ ಸಮೂಹದಿಂದ ಧನಾತ್ಮಕ ಫಲಿತಾಂಶವನ್ನು ನಿರೀಕ್ಷಿಸುತ್ತಿರುವುದರೊಂದಿಗೆ, ಭಾರತ ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಪ್ರಾರಂಭದ ಕುರಿತಾದ ಮಾತುಕತೆಯತ್ತ ಅಮೆರಿಕ ವಿದೇಶಾಂಗ ಇಲಾಖೆಯು ದೃಷ್ಟಿ ಹಾಯಿಸುತ್ತಿದೆ ಎಂದು ಈ ಮೊದಲು ಅಮೆರಿಕ ತಿಳಿಸಿತ್ತು.

ಈ ಒಪ್ಪಂದವು ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಗೊಳಿಸುವುದರೊಂದಿಗೆ, ಇತರ ರಾಷ್ಟ್ರಗಳಿಗೆ ಪರಮಾಣು ಸುರಕ್ಷತೆಯನ್ನು ಒದಗಿಸಲು ಇದು ಅಗತ್ಯವಾಗಿದೆ ಎಂದು ಅಮೆರಿಕ ತಿಳಿಸಿತ್ತು.

ಐಎಇಎಯಿಂದ ಒಪ್ಪಂದಕ್ಕೆ ಅನುಮೋದನೆಯನ್ನು ಪಡೆದ ನಂತರ, ಪರಮಾಣು ಪೂರೈಕೆ ಸಮೂಹದ ಒಪ್ಪಿಗೆಯನ್ನು ನಿರೀಕ್ಷಿಸಲಾಗುತ್ತಿದೆ. ಎನ್ಎಸ್‌ಜಿ ಸದಸ್ಯ ರಾಷ್ಟ್ರಗಳು ಧನಾತ್ಮಕ ಫಲಿತಾಂಶವನ್ನು ನೀಡುವ ವಿಶ್ವಾಸವಿದೆ ಎಂದು ವಿದೇಶಾಂಗ ವಿಭಾಗದ ವಕ್ತಾರ ಗೋನ್ಸಾಲೋ ಗೋನ್ಸಾಲೇಸ್ ತಿಳಿಸಿದ್ದಾರೆ.
ಮತ್ತಷ್ಟು
ಗರ್ಭಪಾತದ ಸಂದಿಗ್ಧತೆಯಲ್ಲಿ ಮೆಹ್ತಾ ದಂಪತಿ
ಸದ್ಯವೇ ತೃತೀಯ ರಂಗ ರೂಪುಗೊಳ್ಳಲಿದೆ: ಕಾರಟ್
ಕೋಲ್ಕತಾ ಗ್ರಂಥಾಲಯದಿಂದ ಅಪರೂಪದ ಪುಸ್ತಕಗಳು ಕಾಣೆ
ಕೇರಳ: ಭಾನುವಾರ ಪೆಟ್ರೋಲ್ ಪಂಪ್‌ಗೆ ರಜೆ?
ಅಮರನಾಥ: ಸರ್ವಪಕ್ಷ ಸಭೆಗೆ ಪ್ರಧಾನಿ ಕರೆ
ವಕೀಲರ ರಾಜೀನಾಮೆಗೆ ಕರುಣಾನಿಧಿ ಒತ್ತಾಯ