ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸ್ಫೋಟ: ಏಳು ಶಂಕಿತರ ರೇಖಾಚಿತ್ರ ಬಿಡುಗಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಫೋಟ: ಏಳು ಶಂಕಿತರ ರೇಖಾಚಿತ್ರ ಬಿಡುಗಡೆ Search similar articles
ಜುಲೈ 26ರ ಅಹಮದಾಬಾದ್ ಸ್ಫೋಟದ ತನಿಖೆಗೆ ಪೂರಕವಾಗಿ, ಜೈಪುರ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿರುವ ಸಂಭವ ಇರುವ ಏಳುಮಂದಿಯ ರೇಖಾಚಿತ್ರವನ್ನು ಅಹಮದಾಬಾದ್ ಕ್ರೈಮ್ ಬ್ರಾಂಚ್ ಬಿಡುಗಡೆಗೊಳಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

"ಜೈಪುರ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿರುವ ಸಂಭಾವ್ಯ ಏಳು ಮಂದಿ ಶಂಕಿತರ ರೇಖಾಚಿತ್ರವನ್ನು ನಾವು ಹೊಂದಿದ್ದು, ಅಹಮದಾಬಾದ್ ಸ್ಫೋಟದಲ್ಲಿ ಸಂಬಂಧ ಇರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ" ಎಂದು ಜಂಟಿ ಪೊಲೀಸ್ ಆಯೋಗಿ ಆಶಿಶ್ ಭಾಟಿಯಾ ಹೇಳಿದ್ದಾರೆ.

ತಂಡದ ಪರಿಣಿತರಿಂದ ರೇಖಾಚಿತ್ರದ ಅಧ್ಯಯನವನ್ನು ನಡೆಸಲಾಗುತ್ತಿದ್ದು, ಅಗತ್ಯವಿದ್ದಲ್ಲಿ ಇದನ್ನು ಪ್ರತ್ಯಕ್ಷ ಸಾಕ್ಷಿಗಳಿಗೂ ತೋರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಅಹಮದಾಬಾದ್‌ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿರುವ ಸಂಭಾವ್ಯ ಮೂರು ಶಂಕಿತರ ರೇಖಾಚಿತ್ರವನ್ನು ಕ್ರೈಮ್ ಬ್ರಾಂಚ್ ಈಗಾಗಲೇ ತಯಾರಿಸಿದೆ.

ಏತನ್ಮಧ್ಯೆ, ನಗರದಾದ್ಯಂತ ಪೊಲೀಸರು ಸೋಮವಾರ ಶೋಧ ಕಾರ್ಯಾಚರಣೆಯನ್ನು ನಡೆಸಿದ್ದು, ವಿವಿಧ ಪೊಲೀಸ್ ಠಾಣೆಗಳ ಅನೇಕ ತಂಡಗಳು ಸುಮಾರು 3000 ವಾಹನಗಳನ್ನು, 110 ಹೋಟೇಲ್‌‌ಗಳನ್ನು, 30 ಸಾರ್ವಜನಿಕ ಉದ್ಯಾನವನ, ವಿವಿಧ ಫಾರ್ಮ್ ಹೌಸ್ ಮತ್ತು 42 ಧಾರ್ಮಿಕ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಇದರೊಂದಿಗೆ 155 ಮಂದಿಯ ವಿಚಾರಣೆಯನ್ನೂ ನಡೆಸಿದ್ದಾರೆ.
ಮತ್ತಷ್ಟು
ಅಣು ಒಪ್ಪಂದ: ಸೆಪ್ಟೆಂಬರ್‌ನಲ್ಲಿ ಸಿಂಗ್-ಬುಷ್ ಭೇಟಿ?
ಗರ್ಭಪಾತದ ಸಂದಿಗ್ಧತೆಯಲ್ಲಿ ಮೆಹ್ತಾ ದಂಪತಿ
ಸದ್ಯವೇ ತೃತೀಯ ರಂಗ ರೂಪುಗೊಳ್ಳಲಿದೆ: ಕಾರಟ್
ಕೋಲ್ಕತಾ ಗ್ರಂಥಾಲಯದಿಂದ ಅಪರೂಪದ ಪುಸ್ತಕಗಳು ಕಾಣೆ
ಕೇರಳ: ಭಾನುವಾರ ಪೆಟ್ರೋಲ್ ಪಂಪ್‌ಗೆ ರಜೆ?
ಅಮರನಾಥ: ಸರ್ವಪಕ್ಷ ಸಭೆಗೆ ಪ್ರಧಾನಿ ಕರೆ